Advertisement

ರೋಗ ಹರಡುವ ಕೇಂದ್ರವಾಗುತ್ತಿರುವ ಭೀತಿಯಲ್ಲಿ ರಾಜಕಾಲುವೆ

03:35 PM Feb 22, 2022 | Team Udayavani |

ಪುತ್ತೂರು : ಒಳಚರಂಡಿ ವ್ಯವಸ್ಥೆ ಇಲ್ಲದ ಪುತ್ತೂರು ನಗರದಲ್ಲಿ ತ್ಯಾಜ್ಯ ಮತ್ತು ಮಳೆ ನೀರು ಸಮ್ಮಿಲನಗೊಂಡು ಹರಿಯುವ ರಾಜ ಕಾಲುವೆ ಬೇಸಗೆಯಲ್ಲಿ ರೋಗ ಹರಡುವ ತಾಣವಾಗಿ ಮಾರ್ಪಾಡುವ ಭೀತಿ ಎದುರಾಗಿದೆ.

Advertisement

ನಗರದ ಮಧ್ಯ ಭಾಗ ಸೇರಿದಂತೆ ವಿವಿಧೆಡೆ ಸಾಗುವ ರಾಜ ಕಾಲುವೆಯ ಸ್ಥಿತಿಗತಿ ಪರಿಶೀಲಿಸಿದ ಸಂದರ್ಭದಲ್ಲಿ ಈ ಅಂಶ ಎದ್ದು ಕಂಡಿದೆ. ಅಲ್ಲಲ್ಲಿ ರಾಶಿ ಬಿದ್ದಿರುವ ಕಸ, ಬಳಕೆ ಮಾಡಿ ಎಸೆದ ವಸ್ತುಗಳು, ಮಡುಗಟ್ಟಿರುವ ಮಲೀನ ನೀರು ಸ್ವತ್ಛ ಪುತ್ತೂರು ನಗರದ ಕನಸಿನ ವಾಸ್ತವ ಕಥೆಯನ್ನು ತೆರೆದಿಟ್ಟಿದೆ.

ರಾಜಕಾಲುವೆಯ ಸ್ಥಿತಿ
ಉರ್ಲಾಂಡಿಯಿಂದ ಎಪಿಎಂಸಿ ಮೂಲಕ ಏಳು¾ಡಿ, ತೆಂಕಿಲದಿಂದ ಏಳು¾ಡಿ ಸಂಪರ್ಕ ಕಲ್ಪಿಸುವ ಎರಡು ರಾಜಕಾಲುವೆಗಳಿವೆ. ಇವೆರಡು ಸುಮಾರು ಐದು ಕಿ.ಮೀ. ವಿಸ್ತೀರ್ಣ ಹೊಂದಿವೆ. ಮಲಿನ ನೀರು ಹರಿದು ಹೋಗಲು ಪ್ರತ್ಯೇಕ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ಹರಿಯುವ ತೆರೆದ ಚರಂಡಿಯಲ್ಲೇ ತ್ಯಾಜ್ಯ ನೀರು ಸಾಗುತ್ತಿದೆ. ಹಾಗಾಗಿ ಮಳೆಗಾಲ, ಬೇಸಗೆ ಕಾಲದಲ್ಲಿ ತೆರೆದ ಚರಂಡಿ, ರಾಜಕಾಲುವೆಯ ದುರ್ಗಂಧ ನಗರದ ಜನರಿಗೆ ತಪ್ಪದ ಬವಣೆ.

ಮಳೆಗಾಲ ಕಾಯಬೇಕು
ಈಗಿನ ಲೆಕ್ಕಚಾರದ ಪ್ರಕಾರ ಜನಸಂಖ್ಯೆ 60 ಸಾವಿರ ದಾಟಿರುವ ನಗರದಲ್ಲಿ ನೂರಾರು ವಾಣಿಜ್ಯ ಕಟ್ಟಡ, ಆಸ್ಪತ್ರೆ, ಕೈಗಾರಿಕೆ, ಹೊಟೇಲ್‌, ಶಿಕ್ಷಣ ಸಂಸ್ಥೆ ಹತ್ತಾರು ಬಗೆಯ ವ್ಯವಹಾರಗಳಿವೆ.

ಕ್ರಮ ಕೈಗೊಳ್ಳಲಾಗುವುದು
ನಗರದ ರಾಜಕಾಲುವೆ ಸ್ಥಿತಿ ಬಗ್ಗೆ ಖುದ್ದು ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗುವುದು. ರೋಗ ರುಜಿನ ಹಬ್ಬುವ ಸ್ಥಿತಿ ಇದ್ದಲ್ಲಿ ಅದರ ತೆರೆವಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
-ಮಧು ಎಸ್‌.ಮನೋಹರ್‌, ಪೌರಾಯುಕ್ತ, ನಗರಸಭೆ

Advertisement
Advertisement

Udayavani is now on Telegram. Click here to join our channel and stay updated with the latest news.

Next