Advertisement

ತ್ಯಾಜ್ಯ ಸಂಪನ್ಮೂಲ: ಸಾವಿರ ಉದ್ಯೋಗ ಸೃಷ್ಟಿ ಗುರಿ

12:39 AM Jul 04, 2020 | Sriram |

ಉಡುಪಿ: ಜಿಲ್ಲೆಯ 158 ಗ್ರಾ.ಪಂ.ಗಳಲ್ಲಿಯೂ ಸ್ವಚ್ಛ ಭಾರತ ಯೋಜನೆಯಡಿ 2020ರೊಳಗೆ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣ ಘಟಕ (ಎಸ್‌ಎಲ್‌ಆರ್‌ಎಂ) 100 ಶೇ. ಸ್ಥಾಪನೆಯ ಗುರಿಯಿದೆ.

Advertisement

ಈ ಮೂಲಕ ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸಿ ಆದಾಯ ಗಳಿಸುತ್ತಿರುವ ಉಡುಪಿ ಜಿಲ್ಲೆಯ 88 ಗ್ರಾ.ಪಂ.ಗಳು 6 ತಿಂಗಳಲ್ಲಿ 1 ಸಾವಿರ ಉದ್ಯೋಗ ಸೃಷ್ಟಿಸಲಿವೆ. ಪಂ. ವ್ಯಾಪ್ತಿಗೆ ಅನುಗುಣವಾಗಿ ಕನಿಷ್ಠ 2ರಿಂದ ಗರಿಷ್ಠ 12ಮಂದಿ ಸಿಬಂದಿಯನ್ನು ಕೆಲಸಕ್ಕೆ ನೇಮಿಸಲಾಗುವುದು.

ಈಗಾಗಲೇ 70 ಗ್ರಾ.ಪಂ.ಗಳಲ್ಲಿ ಎಸ್‌ಎಲ್‌ಆರ್‌ಎಂ ಘಟಕಗಳು ಸ್ಥಾಪನೆಯಾಗಿದ್ದು, 500ಕ್ಕೂ ಅಧಿಕ ಉದ್ಯೋಗ ಸೃಷ್ಟಿಸಿವೆ. 15 ಗ್ರಾ.ಪಂ.ಗಳು ತ್ಯಾಜ್ಯ ಸಂಪನ್ಮೂಲದಿಂದ ಗ್ರಾ.ಪಂ.ಹಂಗಿಲ್ಲದೆ ಆರ್ಥಿಕ ಸ್ವಾವಲಂಬನೆ ಹೊಂದಿವೆ.

ರಾಜ್ಯಕ್ಕೆ ಮಾದರಿ
80 ಬಡಗಬೆಟ್ಟು ಗ್ರಾ.ಪಂ.ಅತೀ ಹೆಚ್ಚು (21 ಲ.ರೂ.)ಆದಾಯ ಗಳಿಸುತ್ತಿದೆ. ತ್ಯಾಜ್ಯ ಮುಕ್ತ ಗ್ರಾಮೀಣ ಉಡುಪಿಯ ಕನಸನ್ನು ವೆಲ್ಲೂರಿನ ಡಾ| ಶ್ರೀನಿವಾಸನ್‌ ಅವರು ಕಾರ್ಯರೂಪಕ್ಕೆ ತಂದಿದ್ದು, ಉಡುಪಿ ಈ ಕಾರ್ಯದಲ್ಲಿ ರಾಜ್ಯಕ್ಕೆ ಮಾದರಿಯಾಗಿದೆ. ಈ ಮೂಲಕ ಜನರನ್ನು ಆಕರ್ಷಿಸುವ ಕೆಲಸ ಮಾಡುತ್ತಿದೆ. ವಂಡ್ಸೆ ಗ್ರಾ.ಪಂ.ಗೆ 50ಕ್ಕೂ ಅಧಿಕ ಜಿಲ್ಲೆಗಳ ಜನತೆ ಭೇಟಿ ನೀಡಿ ತಮ್ಮೂರಲ್ಲೂ ಇದನ್ನು ಅಳವಡಿಸುವ ಯತ್ನ ಮಾಡಿದ್ದಾರೆ.

100ರಿಂದ ಸಾವಿರ ರೂ. ದಂಡ
ಎಲ್ಲೆಂದರಲ್ಲಿ ಕಸ ಚೆಲ್ಲಿದರೆ ಅಥವಾ ಹಾನಿ ಪಡಿಸಿದರೆ 100ರಿಂದ 1 ಸಾವಿರ ರೂ.ಗಳವರೆಗೆ ದಂಡ ವಿಧಿಸುವ ಅವಕಾಶವಿದೆ. ಗ್ರಾ.ಪಂ.ಗಳು ಎಸ್‌ಎಲ್‌ಆರ್‌ಎಂ ಘಟಕ ನಿರ್ಮಾಣಕ್ಕೆ 10ರಿಂದ 20 ಸೆಂಟ್ಸ್‌ ಜಾಗ, ವಾಹನ ವ್ಯವಸ್ಥೆ ಕಲ್ಪಿಸಲು ಅವಕಾಶವಿದ್ದು, ಕಂದಾಯ ಇಲಾಖೆ 110 ಗ್ರಾ.ಪಂ.ಗಳಿಗೆ ಜಾಗ ಒದಗಿಸಿದೆ. ಜಾಗ ಇಲ್ಲದಿದ್ದರೆ ನೆರೆಹೊರೆಯ ಗ್ರಾ.ಪಂ. ಒಟ್ಟಾಗಿ ಎಸ್‌ಎಲ್‌ಆರ್‌ಎಂ ಘಟಕ ನಿರ್ಮಿಸಬಹುದಾಗಿದೆ.

Advertisement

ಯಾವುದೇ ಸಮಸ್ಯೆಯಿಲ್ಲ
ಶೂನ್ಯ ತ್ಯಾಜ್ಯ ನಿರ್ವಹಣೆ ನಿಟ್ಟಿನಲ್ಲಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಶೇ.90ರಷ್ಟು ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ರಾ.ಹೆ.ಬದಿಗಳಲ್ಲಿ ಸ್ವತ್ಛತೆ ಜತೆಗೆ ಮಾಹಿತಿ, ಎಚ್ಚರಿಕೆ ಫ‌ಲಕವನ್ನು ಹಾಕಲಾಗುವುದು. ಎಸ್‌ಎಲ್‌ಆರ್‌ಎಂ ಘಟಕದಿಂದ ಯಾವುದೇ ಸಮಸ್ಯೆಯಿಲ್ಲ. ಈ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ.
ಶ್ರೀನಿವಾಸ ರಾವ್‌, ಮುಖ್ಯ ಯೋಜನಾಧಿಕಾರಿ, ಉಡುಪಿ ಜಿ.ಪಂ.

ಲಾಭದಾಯಕ ಗ್ರಾ.ಪಂ.ಗಳು
ಪಂಚಾಯತ್‌ ಲಾಭ (ಲ.ರೂ.ಗಳಲ್ಲಿ)
ವಂಡ್ಸೆ              14.15
ಸಿದ್ದಾಪುರ          4.66
ಹಂಗಳೂರು        2.24
ಕಾಡೂರು           2.52
80ಬಡಗಬೆಟ್ಟು       21
ಹೆಜಮಾಡಿ           11.99

Advertisement

Udayavani is now on Telegram. Click here to join our channel and stay updated with the latest news.

Next