Advertisement

ತ್ಯಾಜ್ಯ: ಗ್ರಾಮಸ್ಥರ ಪ್ರತಿಭಟನೆ

01:12 PM Sep 06, 2019 | Suhan S |

ದೊಡ್ಡಬಳ್ಳಾಪುರ: ತಾಲೂಕಿನ ಶಿರವಾರ ಗ್ರಾಮದ ಸಮೀಪದ ಆನಂದರೆಡ್ಡಿ ಎಂಬುವವರ ಖಾಸಗಿ ಜಮೀನಿನಲ್ಲಿ ಬೆಂಗಳೂರಿನ ಮಾರುಕಟ್ಟೆಯಿಂದ ತ್ಯಾಜ್ಯ ತಂದು ಸುರಿಯಲು ಅವಕಾಶ ನೀಡಿರುವ ಜಮೀನು ಮಾಲೀಕನ ವಿರುದ್ಧ ಗ್ರಾಮಸ್ಥರು ಗುರುವಾರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

Advertisement

ಘಟನೆಯಿಂದ ಕಂಗೆಟ್ಟಿರುವ ಸ್ಥಳೀಯರು: ಟೆರ್ರಾ ಫಾರ್ಮ ಹಾಗೂ ಎಂಎಸ್‌ಜಿಪಿ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಘಟಕಗಳು ತಾಲೂಕಿನ ಜನತೆಗೆ ತೊಂದರೆ ನೀಡಿರುವ ಬೆನ್ನಲ್ಲೆ ಮತ್ತೂಮ್ಮೆ ತ್ಯಾಜ್ಯ ಸುರಿಯುವ ಪ್ರಕರಣ ನಡೆದಿದ್ದು, ಸ್ಥಳೀಯರು ಕಂಗೆಡುವಂತೆ ಮಾಡಿದೆ.

ತ್ಯಾಜ್ಯದ ವಾಹನ ಬಿಟ್ಟು ಚಾಲಕರು ಪರಾರಿ: ತಾಲೂಕಿನ ಶಿರವಾರ ಗ್ರಾಮದ ಸಮೀಪ ಆನಂದರೆಡ್ಡಿ ಜಮೀನಿನಲ್ಲಿ ಬುಧವಾರ ರಾತ್ರಿ ಬೆಂಗಳೂರಿನ ಮಾರುಕಟ್ಟೆ ಯಿಂದ ತ್ಯಾಜ್ಯ ತಂದು ಸುರಿಯುತ್ತಿರುವುದನ್ನ ಕಂಡು ಗ್ರಾಮಸ್ಥರು ಸ್ಥಳಕ್ಕೆ ತೆರಳಿದ್ದಾರೆ. ಸ್ಥಳಕ್ಕೆ ಧಾವಿಸಿದ ಜನರನ್ನು ಕಂಡು ತ್ಯಾಜ ಸಾಗಣೆ ಲಾರಿಗಳ ಚಾಲಕರು ಸ್ಥಳದಲ್ಲೆ ವಾಹನ ಬಿಟ್ಟು ಓಡಿಹೋಗಿದ್ದಾರೆ. ಇದರಿಂದ ಕೆರಳಿದ ಗ್ರಾಮಸ್ಥರು ಲಾರಿಗಳ ಟೈರ್‌ ಗಾಳಿ ತೆಗೆದು ಮರಳಿ ಬಂದಿದ್ದಾರೆ.

20ಕ್ಕೂ ಹೆಚ್ಚು ಟನ್‌ ತ್ಯಾಜ್ಯ ಸಂಗ್ರಹ: ಬೆಳಗ್ಗೆ ರಾಜ್ಯ ರೈತ ಸಂಘದ ಮುಖಂಡರ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿ, ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಟನ್‌ ತ್ಯಾಜ್ಯ ಸಂಗ್ರಹವಾಗಿರುವುದು ಕಂಡು ಆತಂಕ ನಿರ್ಮಾಣವಾಗಿದೆ. ಸ್ಥಳಕ್ಕೆ ಜಮೀನು ಮಾಲಿಕರ ಕರೆಸುವಂತೆ ಪೊಲೀಸರನ್ನು ಒತ್ತಾಯಿಸಿದರು.

ಜಮೀನು ಮಾಲಿಕನಿಗೆ ಗ್ರಾಮಸ್ಥರ ಎಚ್ಚರಿಕೆ: ಮಧ್ಯಾಹ್ನದ ನಂತರ ಸ್ಥಳಕ್ಕೆ ಬಂದ ಜಮೀನು ಮಾಲೀಕ ಆನಂದರೆಡ್ಡಿ, ಗೊಬ್ಬರ ಸಿದ್ಧಪಡಿಸುವುದಕ್ಕಾಗಿ ತ್ಯಾಜ್ಯವನ್ನು ತರಿಸಲಾಗಿತ್ತು. ಎಂದು ತಿಳಿಸಿದರು. ಇದಕ್ಕೆ ಆಕ್ಷೇಪವೇತ್ತಿದ ರೈತ ಸಂಘ ಹಾಗೂ ಗ್ರಾಮಸ್ಥರು ತ್ಯಾಜ್ಯ ವಿಲೇವಾರಿ ಮಾಡಿರುವುದು ಅಕ್ರಮವಾಗಿದೆ. ಯಾವುದೇ ಅನುಮತಿ ಪಡೆಯದೆ ಕಳ್ಳ ಮಾರ್ಗದಲ್ಲಿ ತಂದು ತ್ಯಾಜ್ಯವನ್ನು ಸುರಿಯುವ ಮೂಲಕ ಮತ್ತೂಂದು ತ್ಯಾಜ್ಯವಿಲೇವಾರಿ ಘಟಕ ಸ್ಥಾಪಿಸುವ ಹುನ್ನಾರವಾಗಿದೆ. ಇದಕ್ಕೆ ಆವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.

Advertisement

ನಂತರ ಪೊಲೀಸರ ಮಧ್ಯಸ್ಥಿಕೆಯಲ್ಲಿ ತ್ಯಾಜ್ಯ ತೆರವುಗೊಳಿಸಲು ಸೂಚನೆ ನೀಡಲಾಯಿತು. ಯಾವುದೇ ಕಾರಣಕ್ಕೂ ತ್ಯಾಜ್ಯ ಸಂಸ್ಕರಣೆಗೆ ಅವಕಾಶ ನೀಡಬಾರದು ಎಂದು ಜಮೀನು ಮಾಲಿಕನಿಗೆ ಎಚ್ಚರಿಕೆ ನೀಡಿದರು.

ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಮುತ್ತೆಗೌಡ, ತಾಲೂಕು ಮುಖ್ಯಸ್ಥ ರವಿ ಶಿರವಾರ, ತೂಬಗೆರೆ ಹೋಬಳಿ ಕಾರ್ಯದರ್ಶಿ ರಾಮ್‌ ಕುಮಾರ್‌ ಸೇರಿದಂತೆ ಕಲ್ಲುದೇವನಹಳ್ಳಿ, ತಿಪ್ಪೂರು, ಹೊಸಹಳ್ಳಿ, ಹೊಸಹಳ್ಳಿ ತಾಂಡ, ನೆಲ್ಲುಕುಂಟೆ, ಸೋಮಶೆಟ್ಟಹಳ್ಳಿಯ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next