Advertisement

ಕಾರೆ ಬಳಿ ತ್ಯಾಜ್ಯ ವಿಲೇವಾರಿ: ಕ್ರಮಕ್ಕೆ ಒತ್ತಾಯ

05:43 PM Jul 25, 2021 | Team Udayavani |

ದೇವನಹಳ್ಳಿ: ಸರ್ಕಾರ ಕೋಟ್ಯಂತರ ರೂ.ಗಳನ್ನು ಸ್ವತ್ಛತೆಮತ್ತು ಕಸವಿಲೇವಾರಿಗೆ ಖರ್ಚು ಮಾಡುತ್ತಿದ್ದರೂ ಸಹತಾಲೂಕಿನ ಪಂಡಿತಪುರ ಗ್ರಾಮದ ಅಂಚಿನಲ್ಲಿರುವಕಲ್ಲು ತೆಗೆಯುತ್ತಿದ್ದ ಕ್ವಾರೆಯಲ್ಲಿ ಯಾರೋ ಅನಾಮಿಕರುಕೋಳಿ ತ್ಯಾಜ್ಯ ಹಾಗೂ ಇತರೆ ತ್ಯಾಜ್ಯಗಳನ್ನು ಹಾಕಿಸುತ್ತಮುತ್ತಲಿನ ಗ್ರಾಮಸ್ಥರು ಮೂಗು ಮುಚ್ಚಿಕೊಂಡುಓಡಾಡುವ ಪರಿಸ್ಥಿತಿ ಬಂದೊದಗಿದೆ.

Advertisement

ಕ್ವಾರೆ ಜಾಗದಲ್ಲಿ ಕೋಳಿ ತ್ಯಾಜ್ಯಸುರಿಯುತ್ತಿರುವುದರಿಂದ ವಾತಾವರಣಕಲುಷಿತಗೊಳ್ಳುತ್ತಿದೆ. ಕೋಳಿ ತ್ಯಾಜ್ಯದಿಂದ ಉತ್ಪತ್ತಿಯಾದರಸವು ಕ್ವಾರೆಯ ಹಳ್ಳಿದಲ್ಲಿನ ನೀರಿನಲ್ಲಿ ಬೆರೆತುಅಂತರ್ಜಲ ಕಲುಷಿತಗೊಳ್ಳುತ್ತಿದೆ. ಮೂರು ಗ್ರಾಪಂಗಳಪೈಕಿ ಯಾವ ಗ್ರಾಪಂ ನಿರ್ವಹಣೆ ಮಾಡುತ್ತದೆ ಎಂದುಸ್ಥಳೀಯರಲ್ಲಿ ಪ್ರಶ್ನೆಯಾಗಿದೆ.

ಸ್ಥಳೀಯವಾಗಿ ಈ ಕ್ವಾರೆ ಇರುವ ಜಾಗವು ವಾಸ್ತವದಲ್ಲಿಮೂರು ಪಂಚಾಯಿತಿಗಳ ದ್ಯಾವರಹಳ್ಳಿ, ಪಂಡಿತಪುರ,ಬಚ್ಚಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿದಿನ ಈರಸ್ತೆಯಲ್ಲಿ ಓಡಾಡುವ ಗ್ರಾಮಗಳ ಮುಖ್ಯರಸ್ತೆಯಾಗಿದೆ.ತಿಂಡ್ಲು ಗ್ರಾಮಕ್ಕೆ ಹೋಗುವ ಕಾಲುದಾರಿ ದ್ಯಾವರಹಳ್ಳಿ,ಪಂಡಿತಪುರ, ಬಚ್ಚಹಳ್ಳಿಗೆ ಸಂಬಂಧಪಟ್ಟ ಜನರು ಇದೇರಸ್ತೆಯಲ್ಲಿ ಓಡಾಡುವರು. ಈ ಸ್ಥಳದಲ್ಲಿ ತ್ಯಾಜ್ಯದಿಂದನಾರು ಗಬ್ಬುತ್ತಿದ್ದು ಸ್ವತ್ಛತೆ ಮರೀಚಿಕೆಯಾಗಿದೆ. ತ್ಯಾಜ್ಯಹಾಕಿರುವವರ ವಿರುದ್ಧ ಕ್ರಮ ವಹಿಸಬೇಕು ಎಂದುಸ್ಥಳೀಯರ ಒತ್ತಾಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next