Advertisement

ಆಟೋಗಳ ಮೂಲಕ ತ್ಯಾಜ್ಯ ಸಂಗ್ರಹ

07:12 AM Mar 01, 2019 | Team Udayavani |

ಕೊರಟಗೆರೆ: ಪಟ್ಟಣದ ತ್ಯಾಜ್ಯ ವಸ್ತುಗಳನ್ನು ಮನೆಮನೆಯಿಂದ ಪ್ರತಿನಿತ್ಯ ಸಂಗ್ರಹಿಸಿ ಹೊರಹಾಕಲು ನೂತನ ಆಟೋಗಳನ್ನು ಉಪಯೋಗಿಸುತ್ತಿದ್ದು, ಸಾರ್ವಜನಿಕರು ತಮ್ಮ ಮನೆ ಕಸವನ್ನು ಆಟೋಗಳಲ್ಲಿ ಹಾಕುವಂತೆ ಪಪಂ ಮುಖ್ಯಾಧಿಕಾರಿ ಲಕ್ಷ್ಮಣ್‌ಕುಮಾರ್‌ ತಿಳಿಸಿದರು.

Advertisement

ಪಟ್ಟಣ ಪಂಚಾಯಿತಿ ಆವರಣದಲ್ಲಿ ಪಟ್ಟಣದ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಲು ನೂತನ ಎರಡು ಆಟೋಗಳಿಗೆ ಚಾಲನೆ ನೀಡಿ ಮಾತನಾಡಿ, ಪ್ರಸ್ತುತ ಪಟ್ಟಣದಲ್ಲಿನ ತ್ಯಾಜ್ಯ ಸಂಗ್ರಹಿಸಲು ಒಂದು ಟ್ರ್ಯಾಕ್ಟರ್‌ ಇದ್ದು, ಅದರ ಕಾರ್ಯ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ತ್ಯಾಜ್ಯ ಸಂಗ್ರಹ ಕಾರ್ಯಕ್ಕೆ ತೊಡಕು ಉಂಟಾಗುತ್ತಿದೆ.

ಟ್ರ್ಯಾಕ್ಟರ್‌ನೊಂದಿಗೆ ಎರಡು ಆಟೋಗಳನ್ನು ತ್ಯಾಜ್ಯ ಸಂಗ್ರಹಕ್ಕೆ ಉಪಯೋಗಿಸುತ್ತಿದ್ದು, ಪತ್ರಿನಿತ್ಯ ಪ್ರತಿ ಬೀದಿಗಳಿಗೂ ಆಟೋ ತೆರಳಲಿದೆ. ಮಹಿಳೆಯರು ಹಸಿ ಕಸ ಮತ್ತು ಒಣ ಕಸಗಳನ್ನು ಪ್ರತ್ಯೇಕವಾಗಿ ಸ್ವಚ್ಛಕಾರ್ಯಕ್ಕೆ ನೇಮಕವಾಗಿರುವ ಪೌರಕಾರ್ಮಿಕರಿಗೆ ನೀಡುವ ಮೂಲಕ ಪಟ್ಟಣದ ಸ್ವಚ್ಛತೆಗೆ ಸಹಕರಿಸುವಂತೆ ಮನವಿ ಮಾಡಿದರು.

ಈ ವೇಳೆ ಪಪಂ ಆರೋಗ್ಯಾಧಿಕಾರಿ ರೈಸ್‌ ಅಹಮದ್‌, ಸದಸ್ಯರಾದ ಪುಟ್ಟ ನರಸಪ್ಪ, ಲಕ್ಷ್ಮೀನಾರಾಯಣ್‌, ನಟರಾಜು, ಎನ್‌.ಕೆ.ನರಸಿಂಹಪ್ಪ, ನಾಗರಾಜು, ಮುಖಂಡರಾದ ಗಣೇಶ್‌, ರಮೇಶ್‌, ಸತ್ಯನಾರಾಯಣ್‌, ಮಂಜುನಾಥ್‌, ಖಲೀಂಉಲ್ಲಾ, ರಘು ಸೇರಿದಂತೆ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next