ಮುಂಬೈ: ನಿವೃತ್ತಿ ನಂತರ ಹೊಸ ಹೊಸ ಟ್ವೀಟ್ ಗಳಿಂದ, ಮೀಮ್ ಗಳಿಂದ ಸದಾ ಸುದ್ದಿಯಲ್ಲಿರುವ ಭಾರತದ ಮಾಜಿ ಆರಂಭಕಾರ ವಾಸಿಮ್ ಜಾಫರ್ ಮತ್ತೆ ಸುದ್ದಿಯಲ್ಲಿದ್ದಾರೆ. ಕ್ವೀನ್ಸ್‌ಲ್ಯಾಂಡ್‌ನ ಆರೋಗ್ಯ ಮತ್ತು ಆ್ಯಂಬುಲೆನ್ಸ್ ಸರ್ವಿಸ್‌ನ ಸಹಾಯಕ ಸಚಿವೆ ರಾಸ್ ಬೇಟ್ಸ್ ಅವರ ಹೇಳಿಕೆಯೊಂದಕ್ಕೆ ಬಲವಾದ ಟ್ವೀಟ್ ಏಟೊಂದನ್ನು ನೀಡಿದ್ದಾರೆ.
ಶನಿವಾರದ ಬೆಳವಣಿಗೆ ಬಳಿಕ ಹೇಳಿಕೆಯೊಂದನ್ನು ನೀಡಿದ ರಾಸ್ ಬೇಟ್ಸ್, “ನಮ್ಮ ನಿಯಮಾವಳಿಯನ್ನು ಪಾಲಿಸಿ ಆಟವಾಡಿ, ಇಲ್ಲವೇ ಬ್ರಿಸ್ಬೇನ್‌ಗೆ ಬರಲೇಬೇಡಿ’ ಎಂದು ಭಾರತ ತಂಡಕ್ಕೆ ಸೂಚಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ವಾಸಿಮ್ ಜಾಫರ್, “ಭಾರತ ತಂಡ ತವರಿಗೆ ವಾಪಸಾಗಲು ಸಿದ್ಧವಿದೆ. ಸರಣಿ 1-1 ಸಮಬಲದಲ್ಲಿದ್ದು, ಬೋರ್ಡರ್-ಗಾವಸ್ಕರ್ ಟ್ರೋಫಿ ಹೇಗೂ ನಮ್ಮ ಚೀಲದಲ್ಲಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಕ್ರಿಕೆಟ್ ಆಸ್ಟ್ರೇಲಿಯದ ಮೇಲೆ “ಬ್ರಿಸ್ಬೇನ್ ಬಾಣ’ ಬಿಟ್ಟ ಭಾರತ!
ಜತೆಗೆ ಬ್ಯಾಗ್ ಒಂದನ್ನು ಹಿಡಿದು ನಗುತ್ತಿರುವ ಜೋಫ್ರಾ ಆರ್ಚರ್ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ. ಕಾರಣ? ಆರ್ಚರ್ ಜೈವಿಕ ಸುರಕ್ಷಾ ನಿಯಮವನ್ನು ಮುರಿದ ಮೊದಲ ಕ್ರಿಕೆಟಿಗನಾಗಿರುವುದು! ಜಾಫರ್ ಅವರ ಈ ಟ್ವೀಟ್‌ಗೆ ಕ್ರಿಕೆಟ್ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.