ಮುಂಬೈ: ಟೀಂ ಇಂಡಿಯಾದ ಮಾಜಿ ಆಟಗಾರ ವಾಸಿಂ ಜಾಫರ್ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುತ್ತಾರೆ. ಸದಾ ತಮ್ಮದೇ ಶೈಲಿಯ ಹಾಸ್ಯಭರಿತ ಪೋಸ್ಟ್ ಮಾಡುವ ಜಾಫರ್, ಭಾರತೀಯ ಕ್ರಿಕೆಟಿಗರನ್ನು ಕೆಣಕಿದವರಿಗೂ ತಿರುಗೇಟು ನೀಡುತ್ತಾರೆ. ಈ ಬಾರಿ ಕೊಹ್ಲಿಯನ್ನು ಅಪಹಾಸ್ಯ ಮಾಡಲು ಪ್ರಯತ್ನಿಸಿದ ಆಸ್ಟ್ರೇಲಿಯಾ ಚಾನೆಲೊಂದಕ್ಕೆ ಜಾಫರ್ ಟಕ್ಕರ್ ನೀಡಿದ್ದಾರೆ.
7 ಕ್ರಿಕೆಟ್ ಎಂಬ ಚಾನೆಲ್ 2019ರ ಬಳಿಕ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾ ಬೌಲರ್ ಮಿಚೆಲ್ ಸ್ಟಾರ್ಕ್ ರ ಟೆಸ್ಟ್ ಬ್ಯಾಟಿಂಗ್ ಸರಾಸರಿಯನ್ನು ಹೋಲಿಕೆ ಮಾಡಿ ಪೋಸ್ಟ್ ಮಾಡಿತ್ತು. ಮಿಚೆಲ್ ಸ್ಟಾರ್ಕ್ 39.63 ಸರಾಸರಿ ಹೊಂದಿದ್ದು, ಭಾರತೀಯ ನಾಯಕ 37.17ರ ಸರಾಸರಿ ಹೊಂದಿದ್ದಾರೆ ಎಂದು ವ್ಯಂಗ್ಯವಾಗಿ ಪೋಸ್ಟ್ ಮಾಡಿತ್ತು.
ಇದನ್ನೂ ಓದಿ:ವಿಕ್ರಾಂತ್ ರೋಣನಿಗೆ ಓಟಿಟಿಯಿಂದ ಭರ್ಜರಿ ಆಫರ್:OTTಯಲ್ಲೇ ರಿಲೀಸ್ ಆಗುತ್ತಾ ಕಿಚ್ಚನ ಚಿತ್ರ
7 ಕ್ರಿಕೆಟ್ ಚಾನೆಲ್ ನ ಪೋಸ್ಟ್ ಗೆ ತಿವಿದಿರುವ ವಾಸಿಂ ಜಾಫರ್, ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. ಆಸೀಸ್ ಆಟಗಾರ ಸ್ವೀವ್ ಸ್ಮಿತ್ ಮತ್ತು ಭಾರತೀಯ ಬೌಲರ್ ನವದೀಪ್ ಸೈನಿಯ ಏಕದಿನ ಬ್ಯಾಟಿಂಗ್ ಸರಾಸರಿಯನ್ನು ಹೋಲಿಕೆ ಮಾಡಿ ಜಾಫರ್ ಕಾಂಗರೂಗಳಿಗೆ ಛೇಡಿಸಿದ್ದಾರೆ.
Related Articles
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬೆನ್ನು ನೋವಿನ ಕಾರಣದಿಂದ ಹೊರಗುಳಿದಿದ್ದರು. ವಿರಾಟ್ ಅನುಪಸ್ಥಿತಿಯಲ್ಲಿ ಕೆ.ಎಲ್ ರಾಹುಲ್ ತಂಡವನ್ನು ಮುನ್ನಡೆಸಿದ್ದರು. ಕೇಪ್ ಟೌನ್ ನಲ್ಲಿ ನಡೆಯಲಿರುವ ನಿರ್ಣಾಯಕ ಅಂತಿಮ ಪಂದ್ಯಕ್ಕೆ ವಿರಾಟ್ ಪುನರಾಗಮನ ಬಹುತೇಕ ಖಚಿತವಾಗಿದೆ.