Advertisement

Tide ನಿಂದ ತಲೆತೊಳೆದುಕೊಂಡೆ: ಕ್ರಿಸನ್‌ ಕಣ್ಣೀರು

08:24 PM Apr 27, 2023 | Team Udayavani |

ಮುಂಬೈ: ವಂಚನೆಗೊಳಗಾಗಿ ಯುಎಇಗೆ ಉದ್ದೀಪನ ಕೊಂಡೊಯ್ದಿದ್ದ ಬಾಲಿವುಡ್‌ ನಟಿ ಕ್ರಿಸನ್‌ ಪೆರೀರಾ ಬುಧವಾರ ರಾತ್ರಿ ಬಿಡುಗಡೆಯಾಗಿದ್ದಾರೆ. ಈ ವೇಳೆ ತಮ್ಮ ಸ್ಥಿತಿಯನ್ನು ತಿಳಿಸಿರುವ ಕ್ರಿಸನ್‌ ತಾನು ಜೈಲಿನಲ್ಲಿದ್ದಾಗ ಶೌಚಾಲಯ ಸ್ವತ್ಛ ಮಾಡುವ ಟೈಡ್‌ನಿಂದ ಕೂದಲನ್ನು ತೊಳೆದುಕೊಳ್ಳಬೇಕಾಯಿತು. ಶೌಚಾಲಯದ ನೀರಿನಲ್ಲಿ ಕಾಫಿ ಮಾಡಿಕೊಂಡು ಕುಡಿಯಬೇಕಾಯಿತು ಎಂದು ಕಣ್ಣೀರು ಹಾಕಿದ್ದಾರೆ.

Advertisement

ಮಾದಕದ್ರವ್ಯ ಸಾಗಣೆ ಪ್ರಕರಣದಲ್ಲಿ ಏ.1ರಂದು ಶಾರ್ಜಾದಲ್ಲಿ ಕ್ರಿಸನ್‌ ಬಂಧನಕ್ಕೊಳಗಾಗಿದ್ದರು. ರವಿ ಬೊಬ್ಹಟೆ, ಆ್ಯಂಥೋನಿ ಪೌಲ್‌ ಎಂಬಿಬ್ಬರು ಹಾಲಿವುಡ್‌ನ‌ಲ್ಲಿ ಅವಕಾಶ ಕೊಡಿಸುತ್ತೇವೆ, ಶಾರ್ಜಾದಲ್ಲಿ ನಡೆಯುವ ಆಡಿಶನ್‌ನಲ್ಲಿ ಭಾಗವಹಿಸಿ ಎಂದು ಕ್ರಿಸನ್‌ರನ್ನು ಕಳುಹಿಸಿದ್ದರು. ಈ ವೇಳೆ ಒಬ್ಬ ನಿರ್ದಿಷ್ಟ ವ್ಯಕ್ತಿಗೆ ಒಂದು ಸ್ಮರಣಿಕೆ ಕೊಡಿ ಎಂದೂ ತಿಳಿಸಿದ್ದರು. ಆ ಸ್ಮರಣಿಕೆಯಲ್ಲಿ ಆ ಇಬ್ಬರು ಮೋಸದಿಂದ ಪುಟ್ಟಪ್ರಮಾಣದಲ್ಲಿ ಉದ್ದೀಪನವನ್ನು ಅಡಗಿಸಿಟ್ಟಿದ್ದರು. ಅದು ಪತ್ತೆಯಾಗುತ್ತಿದ್ದಂತೆ ಶಾರ್ಜಾ ವಿಮಾನ ನಿಲ್ದಾಣದಲ್ಲೇ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಆಕೆಯ ತಾಯಿಗೂ 80 ಲಕ್ಷ ರೂ. ವಂಚಿಸಲು ರವಿ ಮತ್ತು ಆ್ಯಂಥೋನಿ ಯತ್ನಿಸಿದ್ದಾರೆ. ಸದ್ಯ ಇಬ್ಬರು ಬಂಧನಕ್ಕೊಳಗಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next