Advertisement

ಚಾಪೆಲ್‌ ಇ-ಮೇಲನ್ನು ಬಹಿರಂಗ ಮಾಡಿದ್ದೇ ನಾನು: ಸೆಹವಾಗ್‌!

12:44 PM Apr 22, 2018 | |

ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಮತ್ತು ಮಾಜಿ ಕೋಚ್‌ ಗ್ರೆಗ್‌ ಚಾಪೆಲ್‌ ನಡುವಿನ ವಿವಾದ ಬಹಿರಂಗವಾಗಿದ್ದು ಒಂದು ಇ-ಮೇಲ್‌ ಮೂಲಕ. ಗಂಗೂಲಿ ವಿರುದ್ಧ ಬಿಸಿಸಿಐಗೆ ಚಾಪೆಲ್‌ ಕಳಿಸಿದ್ದ ಇ-ಮೇಲ್‌ ಮುಂದೆ ದೊಡ್ಡ ಘರ್ಷಣೆಗೆ ಕಾರಣವಾಗಿತ್ತು. 

Advertisement

ಇಂಥದೊಂದು ಇ-ಮೇಲನ್ನು ಚಾಪೆಲ್‌ ಕಳಿಸಿದ್ದಾರೆಂದು ಗಂಗೂಲಿಗೆ ತಿಳಿಸಿದ್ದು ಯಾರು ಗೊತ್ತೇ? ವೀರೇಂದ್ರ ಸೆಹವಾಗ್‌! ಹೌದು,  ಈ ಸ್ಫೋಟಕ ಮಾಹಿತಿಯನ್ನು ಸ್ವತಃ ಸೆಹವಾಗ್‌ ಬಹಿರಂಗಪಡಿಸಿದ್ದಾರೆ.

ವಿರಾಮದ ವೇಳೆ ಬಯಲು !
ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸೆಹವಾಗ್‌, ಚಾಪೆಲ್‌ ಅವರ ಕೃತ್ಯವನ್ನು ಕಣ್ಣಾರೆ ನೋಡಿದ ಅನಂತರ ತಾನು ಗಂಗೂಲಿಗೆ ಮಾಹಿತಿ ನೀಡಿದ್ದಾಗಿ ಹೇಳಿಕೊಂಡಿದ್ದಾರೆ. “ಆಗ ನನಗೆ ಹೊಟ್ಟೆ ನೋವಿತ್ತು.  ನನಗೆ 5 ಓವರ್‌ ವಿರಾಮ ಬೇಕೆಂದು ಅಂಪಾಯರ್‌ಗೆ ಮುಂಚಿತವಾಗಿ ತಿಳಿಸಿದ್ದೆ. ಆ ಹೊತ್ತಿಗೆ ನಾನು ಶೌಚಾಲಯಕ್ಕೆ ತೆರಳುವ ಸ್ಥಳದಲ್ಲೇ ಚಾಪೆಲ್‌ ಕುಳಿತು ಏನೋ ಬರೆಯುತ್ತಿದ್ದರು. ನಾನು ಅಲ್ಲೇ ಅವರ ಪಕ್ಕದಲ್ಲಿ ಕುಳಿತಿದ್ದೆ. ಒಳಗೇನಿದೆ ಎಂದು ಗೊತ್ತಾಗಲಿಲ್ಲ. ಏನೋ ಗಂಭೀರವಾಗಿದ್ದೇ ನಡೆಯುತ್ತಿದೆ ಎಂದು ಅನಿಸಿ ಗಂಗೂಲಿಗೆ ವಿಷಯ ಮುಟ್ಟಿಸಿದೆ’ ಎಂದು ಸೆಹವಾಗ್‌ ಹೇಳಿದ್ದಾರೆ.

ತನ್ನ ಕ್ರಿಕೆಟ್‌ ಜೀವನ ರೂಪಿಸಿದ ಗಂಗೂಲಿಯನ್ನು ಸೆಹವಾಗ್‌ ಮನಃಪೂರ್ತಿ ಶ್ಲಾ ಸಿದ್ದಾರೆ. “ನಾನು ಟೆಸ್ಟ್‌ ಆಟಗಾರ ಅಲ್ಲ ಎಂದು ಭಾವಿಸಲಾಗಿತ್ತು. ನನಗೆ ಅವಕಾಶ ನೀಡಿ ಟೆಸ್ಟ್‌ನಲ್ಲೂ ಮಿಂಚಬಲ್ಲೆ ಎಂದು ತೋರಿಸಲು ಗಂಗೂಲಿ ಕಾರಣವಾದರು. ಮೊದಲ ಟೆಸ್ಟ್‌ನಲ್ಲೇ ನಾನು ಶತಕ ಬಾರಿಸಿದಾಗ ಗಂಗೂಲಿಯನ್ನು ಬಿಗಿದಪ್ಪಿಕೊಂಡಿದ್ದೆ. ಅವರು ನನಗೋಸ್ಕರ ತನ್ನ ಆರಂಭಿಕನ ಸ್ಥಾನವನ್ನೇ ತ್ಯಾಗ ಮಾಡಿದ ನಾಯಕ’ ಎಂದು ಸೆಹವಾಗ್‌ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next