Advertisement
ಪಾಟಾಜೆ ನಿವಾಸಿ ಬಾಬು (55) ಮೃತಪಟ್ಟವರು. ಅವರ ಪುತ್ರ ಕುಮಾರ (24) ಆರೋಪಿ. ಬಾಬು ಅವರ ಪತ್ನಿ ವಿಮಲಾ ಅವರು ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಾಬು ಕುಡಿತದ ಚಟವುಳ್ಳವರಾಗಿದ್ದು ಶನಿವಾರ ರಾತ್ರಿ ಕುಡಿದುಕೊಂಡು ಬಂದು ಮಲಗಿದ್ದರು. ಬೆಳಗ್ಗೆ ಎದ್ದು ನೋಡುವಾಗ ಸಾವನ್ನಪ್ಪಿದ್ದಾರೆ ಎಂದು ವಿಮಲಾ ಅವರು ದೂರಿನಲ್ಲಿ ತಿಳಿಸಿದ್ದರು.
Related Articles
Advertisement
ಪೊಲೀಸರು ತನಿಖೆ ನಡೆಸಿದಾಗ ಬಾಬು ಶನಿವಾರ ರಾತ್ರಿ ಮದ್ಯ ಸೇವಿಸಿಕೊಂಡು ಬಂದು ಮನೆಮಂದಿಯೊಂದಿಗೆ ಜಗಳ ಆಡಿದ್ದು ಹಾಗೂ ಆ ಸಂದರ್ಭದಲ್ಲಿ ಮಗ ಕುಮಾರ ದೊಣ್ಣೆಯಿಂದ ಹೊಡೆದು ಕೊಲೆ ನಡೆಸಿರುವುದು ಬೆಳಕಿಗೆ ಬಂತು. ಕೊಲೆ ನಡೆಸಿರುವುದನ್ನು ಕುಮಾರ ಒಪ್ಪಿಕೊಂಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.