Advertisement

ವಾರಿಯರ್ಸ್‌ ಕಾರ್ಯ ಶ್ಲಾಘನೀಯ: ಚವ್ಹಾ ಣ

07:44 PM May 28, 2021 | Girisha |

ಚಡಚಣ: ಕೊರೊನಾ ವಾರಿಯರ್ಸ್‌ ಇಡಿ ಸಮಾಜವನ್ನು ರಕ್ಷಣೆ ಮಾಡುತ್ತಿದ್ದು ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ನಾಗಠಾಣ ಶಾಸಕ ಡಾ| ದೇವಾನಂದ ಚವ್ಹಾಣ ಹೇಳಿದರು. ಹಿಟ್ಟಿನಹಳ್ಳಿ, ಜುಮನಾಳ, ಉತ್ನಾಳ, ಹೆಗಡಿಹಾಳ ಐನಾಪುರ ಗ್ರಾಮಗಳಲ್ಲಿ ಕೊರೊನಾ ವಾರಿಯರ್ಸ್‌ಗೆ ಆಹಾರ ಧಾನ್ಯದ ಕಿಟ್‌, ಮಾಸ್ಕ್ ಹಾಗೂ ಸ್ಯಾನಿಟೈಸರ್‌ ವಿತರಿಸಿ ಅವರು ಮಾತನಾಡಿದರು.

Advertisement

ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲೂ ತಮ್ಮ ಜೀವದ ಹಂಗು ತೊರೆದು ಕೊರೊನಾ ನಿಯಂತ್ರಣಕ್ಕೆ ವಾರಿಯರ್ಸ್‌ ಹೋರಾಡುತ್ತಿದ್ದಾರೆ. ಇಡಿ ಸಮಾಜ ಇವರ ಬೆನ್ನಿಗಿದೆ ಎಂದ ಅವರು, ಸಾರ್ವಜನಿಕರು ಅನಗತ್ಯವಾಗಿ ಹೊರಗೆ ಬರದೆ ಮನೆಯಲ್ಲಿಯೇ ಇರಬೇಕು.

ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ ಎಮದು ಆತಂಕ ವ್ಯಕ್ತಪಡಿಸಿದರು. ಗ್ರಾಮೀಣ ಭಾಗದಲ್ಲಿ ಜನ ಗುಂಪು ಗುಂಪಾಗಿ ಕುಳಿತುಕೊಳ್ಳುವುದು, ಮಾಸ್ಕ್ ಧರಿಸದೇ ಇರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿರ್ಲಕ್ಷé ವಹಿಸುವುದು ಕೊರೊನಾ ಹೆಚ್ಚಳಕ್ಕೆ ಕಾರಣವಾಗುತ್ತಿದೆ.

ಇದರ ನಿಯಂತ್ರಣವಾಗಬೇಕೆಂದರೆ ಕಡ್ಡಾಯವಾಗಿ ಸರಕಾರದ ನಿಯಮಗಳನ್ನು ಪಾಲಿಸಬೇಕು ಎಂದರು. ಪಿಡಿಒ ರಾಜಶೇಖರ ಬಿರಾದಾರ, ಮಹಾದೇವಿ ಬಿರಾದಾರ, ಶ್ರೀಧರ ಜಾಧವ, ಮಂಜು ಬಿರಾದಾರ, ಯಲ್ಲಪ್ಪ ದುರ್ಗವಗೋಳ, ಸಂಗು ಬಿರಾದಾರ, ವಿವಿಧ ಇಲಾಖೆ ಅ ಧಿಕಾರಿಗಳು, ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು,ಆರೋಗ್ಯ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next