Advertisement

ರಾಕುಟೆನ್​ ಇಂಡಿಯಾ ಹೆಸರಲ್ಲಿ ಆರ್​ ಓಲೆ (R OLE) ವಂಚನೆ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ

05:38 PM Mar 25, 2024 | Team Udayavani |

ಬೆಂಗಳೂರು: ರಾಕುಟೆನ್ ಗ್ರೂಪ್ ಇಂಕ್ ಸಂಸ್ಥೆಯ ಪ್ರಮುಖ ತಂತ್ರಜ್ಞಾನ ಮತ್ತು ಅಭಿವೃದ್ಧಿ ಕೇಂದ್ರವಾಗಿರುವ ರಾಕುಟೆನ್ ಇಂಡಿಯಾ ಎಂಟರ್ ಪ್ರೈಸ್ ಪ್ರೈವೇಟ್ ಲಿಮಿಟೆಡ್, ತನ್ನ ಬ್ರಾಂಡ್ ಬಳಸಿಕೊಂಡು “ಆರ್ ಒಲೆ” ((R-ole) ಎಂಬ ಅನಧಿಕೃತ ಸಂಸ್ಥೆಯು ನಡೆಸುತ್ತಿರುವ ವಂಚನೆ ಬಗ್ಗೆ ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ ನೀಡಿದೆ.

Advertisement

ಮೋಸದ ಜಾಲವು ರಾಕುಟೆನ್ ಇಂಕ್​​ನ​ ಬ್ರಾಂಡ್ ಮತ್ತು ಸಂಸ್ಥೆಯ ಗುರುತನ್ನು ಬಳಸಿಕೊಂಡು ಸಾರ್ವಜನಿಕರ ಬಳಿಯಿಂದ ಹಣವನ್ನು ಸಂಗ್ರಹಿಸುತ್ತಿದ್ದು, ಅದಕ್ಕೆ ಮೋಸ ಹೋಗದಂತೆ ಮನವಿ ಮಾಡಿದೆ.

ಈ ವಂಚನೆಯನ್ನು ಮುಖ್ಯವಾಗಿ ಟೆಲಿಗ್ರಾಮ್ ಮತ್ತು ವಾಟ್ಸ್​ಆ್ಯಪ್​ನಂಥ ಮೆಸೇಜಿಂಗ್ ಪ್ಲಾಟ್​​ಫಾರ್ಮ್​​ಗಳ ಮೂಲಕ ನಡೆಸಲಾಗುತ್ತಿದೆ. ಈ ಖಾತೆಗಳು 17,000 ಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ ಮತ್ತು ಅಸ್ತಿತ್ವದಲ್ಲಿಲ್ಲದ ಕಚೇರಿ ಪ್ರವಾಸಕ್ಕೆ (Office Tour) ಬೋಗಸ್ ಆಹ್ವಾನಗಳನ್ನು ನೀಡಲಾಗುತ್ತಿದೆ, ಏಪ್ರಿಲ್ 1 ರಿಂದ 3 ರವರೆಗೆ ಪ್ರವಾಸದ ಆಫರ್​ ನೀಡಲಾಗುತ್ತಿದೆ ಎಂದು ರಾಕುಟೆನ್​ ಎಚ್ಚರಿಸಿದೆ.

ಈ ಕಚೇರಿ ಭೇಟಿ ಸಮಯದಲ್ಲಿ ಯೋಜಿಸಲಾದ ಚಟುವಟಿಕೆಗಳನ್ನು ವಿವರಿಸುವ “ಆಕ್ಟಿವಿಟಿ ಫ್ಲೋ ಶೀಟ್” ನಲ್ಲಿ ರಾಕುಟೆನ್ ಇಂಡಿಯಾದ ಕಚೇರಿ ವಿಳಾಸವನ್ನು ಅಕ್ರಮವಾಗಿ ಬಳಸಿಕೊಳ್ಳಲಾಗಿದೆ. ಈ ಆಹ್ವಾನಗಳಂತಹ ನಕಲಿ ದಾಖಲೆಗಳು ಸೋಶಿಯಲ್​ ಮೀಡಿಯಾಗಳಲ್ಲಿ ಹರಿದಾಡುತ್ತಲಿವೆ. “ಆರ್ ಓಲೆ” ಮಾಡುತ್ತಿರುವ ಮೋಸಕ್ಕೆ ಸಂಬಂಧಿಸಿ ಯಾರಾದರೂ ಸಂಪರ್ಕಿಸಿದರೆ ಅಥವಾ ಅನುಮಾನಾಸ್ಪದ ಘಟನೆಗಳು ಕಂಡು ಬಂದರೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಬೇಕು ಮತ್ತು ಈ ಬಗ್ಗೆ ಜಾಗರೂಕರಾಗಿಬೇಕು ಎಂದು ರಾಕುಟೆನ್ ಇಂಡಿಯಾ ಸಾರ್ವಜನಿಕರನ್ನು ಕೋರಿದೆ.

ರಾಕುಟೆನ್ ಇಂಡಿಯಾ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ತನ್ನ ಬ್ರಾಂಡ್ ಅನ್ನು ಅನಧಿಕೃತವಾಗಿ ಬಳಸುತ್ತಿರುವ ವಂಚನೆ ಹಾಗೂ ಕ್ರಿಮಿನಲ್ ಚಟುವಟಿಕೆ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತಿದೆ. ರಾಕುಟೆನ್ ಇಂಡಿಯಾ ಯಾವುದೇ ಉದ್ದೇಶಕ್ಕಾಗಿ ಹಣಕಾಸಿನ ಕೊಡುಗೆಗಳನ್ನು ನೀಡುತ್ತಿಲ್ಲ ಅಥವಾ ವೈಯಕ್ತಿಕ ಬ್ಯಾಂಕಿಂಗ್ ವಿವರಗಳನ್ನು ಸಾರ್ವಜನಿಕರಿಂದ ಎಂದಿಗೂ ಕೇಳುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.

Advertisement

ಮೋಸದ ಜಾಲವನ್ನು ಬೊಟ್ಟು ಮಾಡಿ ತೋರಿಸಲಾಗಿದ್ದು, ಅನುಮಾನಾಸ್ಪದ ವ್ಯಕ್ತಿಗಳು ನಡೆಸುತ್ತಿರುವ ಹಗರಣಕ್ಕೆ ವ್ಯಕ್ತಿಗಳು ಬಲಿ ಬೀಳಬಾರದೆಂದು ರಾಕುಟೆನ್ ಇಂಡಿಯಾ ಆಶಿಸಿದೆ. ಇದಲ್ಲದೆ, ಏಪ್ರಿಲ್ 1 ರಿಂದ 3 ರವರೆಗೆ ಭಾರತದಲ್ಲಿನ ತನ್ನ ಕಚೇರಿಯಲ್ಲಿ ಯಾವುದೇ ಚಟುವಟಿಕೆಗಳನ್ನು ಆಯೋಜಿಸಿಲ್ಲ ಎಂದು ರಾಕುಟೆನ್ ಇಂಡಿಯಾ ಸ್ಪಷ್ಟಪಡಿಸಿದೆ.

ರಾಕುಟೆನ್ ಇಂಡಿಯಾ ಮತ್ತು ಇತರ ಪ್ರತಿಷ್ಠಿತ ಬ್ರಾಂಡ್​​ಗಳೊಂದಿಗೆ ಪಾಲುದಾರಿಕೆ ಪಡೆದಿದೆ ಎಂದು ಸುಳ್ಳು ಹೇಳಿಕೊಂಡು “ಆರ್ ಓಲೆ ನಡೆಸುತ್ತಿರುವ ಮೋಸದ ವ್ಯವಹಾರದಲ್ಲಿ ಜನರು ಮೋಸ ಹೋಗುತ್ತಿರುವುದು ಪತ್ತೆಯಾದ ನಂತರ, ಸೈಬರ್ ಅಪರಾಧ ಪೊಲೀಸರಿಗೆ ರಾಕುಟೆನ್ ಇಂಡಿಯಾ ದೂರು ನೀಡಿದ್ದು, ಈ ಬಗ್ಗೆ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಾಗಿದೆ. ಹಗರಣದ ಕುರಿತು ಸಮಗ್ರ ತನಿಖೆ ಸಕ್ರಿಯವಾಗಿದೆ ಮತ್ತು ಈ ಅಪರಾಧ ಕೃತ್ಯಗಳನ್ನು ನಿಗ್ರಹಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ರಾಕುಟೆನ್ ಹೇಳಿದೆ.

ರಾಕುಟೆನ್ ಇಂಡಿಯಾ ಎಂಟರ್​ಪ್ರೈಸಸ್​ ಬಗ್ಗೆ
ರಾಕುಟೆನ್ ಇಂಡಿಯಾ ರಾಕುಟೆನ್ ಗ್ರೂಪ್, ಇಂಕ್ ನ ಜಾಗತಿಕ ಉತ್ಪನ್ನ ಮತ್ತು ನಾವೀನ್ಯದ ಕೇಂದ್ರವಾಗಿದೆ. ರಾಕುಟೆನ್ ಇಂಡಿಯಾ ಇ ಕಾಮರ್ಸ್, ಫಿನ್ಟೆಕ್, ಜಾಹೀರಾತು, ಮೊಬೈಲ್, ಕಂಟೆಂಟ್​​ ಮತ್ತು ಮನರಂಜನೆ ಕ್ಷೇತ್ರಗಳಲ್ಲಿ ಡೇಟಾ ವಿಜ್ಞಾನ ಮತ್ತು ಎಂಜಿನಿಯರಿಂಗ್, ಯಂತ್ರ ಕಲಿಕೆ, ಕೃತಕ ಬುದ್ಧಿಮತ್ತೆ, ಕ್ಲೌಡ್, ಭದ್ರತೆ, ವಿತರಣಾ ವ್ಯವಸ್ಥೆಗಳು ಮತ್ತು ಹೆಚ್ಚಿನ ಕ್ಷೇತ್ರಗಳಲ್ಲಿ ಆಳವಾದ ಪರಿಣತಿಯೊಂದಿಗೆ ಜಾಗತಿಕ ವ್ಯವಹಾರಗಳನ್ನು ನಡೆಸುತ್ತಿದೆ. ಸುಮಾರು 2000 ಉದ್ಯೋಗಿಗಳನ್ನು ಹೊಂದಿರುವ ಮತ್ತು ಬೆಳೆಯುತ್ತಿರುವ ರಾಕುಟೆನ್ ಇಂಡಿಯಾ ಬೆಂಗಳೂರಿನ ಕ್ರಿಮ್ಸನ್​​ ಹೌಸ್​ನಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next