Advertisement

ಸ್ವಚ್ಛತೆಗಾಗಿ ಹೋಟೆಲ್‌ ಮಾಲಿಕರಿಗೆ ಎಚ್ಚರಿಕೆ

01:07 PM Mar 20, 2020 | Suhan S |

ಹನೂರು: ಜಗತ್ತಿನದ್ಯಾಂತ ಆತಂಕ ಸೃಷ್ಠಿಸಿರುವ ಕೋವಿಡ್ 19 ವೈರಸ್‌ ಒಂದೇ ಸಮನೆ ಎಲ್ಲ ಕಡೆ ಹರಡುತ್ತಿರುವುದರಿಂದ ಜಿಲ್ಲಾಡಳಿತದ ಆದೇಶದಂತೆ ಗುರುವಾರ ಧಿಡೀರನೆ ದಾಳಿ ನೆಡೆಸಿದ ಪ್ರಭಾರಿ ತಹಶೀಲ್ದಾರ್ ಹಾಗೂ ಪಪಂ ಮುಖ್ಯಾಧಿಕಾರಿ ಪಟ್ಟಣದ ಹೋಟೆಲ್‌ ಮತ್ತು ಬೇಕರಿಗಳ ಮೇಲೆ ದಾಳಿ ನೆಡೆಸಿ ಶುಚಿತ್ವ ಇಲ್ಲದಿದ್ದರೆ ಬೀಗ ಜಡಿಯಲಾಗುವುದು ಎಂದು ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದರು.

Advertisement

ಹನೂರಿನ ಪ್ರಭಾರ ತಹಶೀಲ್ದಾರ್‌ ಬಸವರಾಜು ಚಿಗರಿ, ಮುಖ್ಯಾಧಿಕಾರಿ ಮೂರ್ತಿ ಹಾಗೂ ಸಿಬ್ಬಂದಿ ತಂಡ ಪಟ್ಟಣದಲ್ಲಿರುವ ಬೇಕರಿ, ಹೋಟೆಲ್‌ ಹಾಗೂ ಕರ್ನಾಟಕ ರಾಜ್ಯ ಸಾರಿಗೆ ಬಸ್‌ ನಿಲ್ದಾಣದಲ್ಲಿ ಶೌಚಾಲಯ ಅಶುಚಿತ್ವದ ಬಗ್ಗೆ ಕ್ರಮ ವಹಿಸಿ ಪ್ರಯಾಣಿಕರಿಗೆ ಸುಚಿತ್ವ ಕಾಪಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಜೊತೆಗೆ ಬಸ್‌ ನಿಲ್ದಾಣದಲ್ಲಿರುವ ಹೊಟೇಲ್‌ನ ಗೋಡನ್‌ ಸೇರಿದಂತೆ ಅಡುಗೆ ಮನೆ ಎಲ್ಲಾ ಕಡೆ ಪರಿಶೀಲನೆ ನೆಡೆಸಿ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

ಜಾಗೃತಿ ವಹಿಸಿ: ತಹಶೀಲ್ದಾರ್‌ ಬಸವರಾಜು ಚಿಗರಿ ಮಾತನಾಡಿ, ಮಹಾ ಮಾರಿ ಕೋವಿಡ್ 19  ಸೊಂಕು ಮತ್ತು ಅಕ್ಕಿ ಜ್ವರ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರದ ಆದೇಶದಂತೆ ಜಿಲ್ಲಾಡಳಿತ ಆಯಾ ತಾಲೂಕಿನಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದ್ದು, ಮಾಚ್‌ ì 31ರವರೆಗೂ ನಿರ್ಭಂಧ ಮುಂದುವರೆದಿರುವುದರಿಂದ ರಾಜ್ಯದಲ್ಲಿ ಮತ್ತೆ ಮೂವರಿಗೆ ಕೋವಿಡ್ 19 ಸೊಂಕು ಪತ್ತೆಯಾಗಿರುವುದರಿಂದ ಸಾರ್ವಜನಿಕರು ಗುಂಪು ಗುಂಪಾಗಿ ಸೇರುವುದು ನಿಷೇಧಿಸಲಾಗಿದೆ. ಕೋವಿಡ್ 19  ಸೋಂಕು ಹರಡದಂತೆ ಎಚ್ಚರಿಕೆ ವಹಿಸಲು ಹೋಟೇಲ್‌ ಮತ್ತು ಬೇಕರಿ ಹಾಗೂ ತೆರೆದ ವಾಹನಗಳಲ್ಲಿ ಪದಾರ್ಥಗಳನ್ನು ಮಾರಾಟ ಮಾಡಲು ನಿಷೇಧಿಸಲಾಗಿದೆ ಎಂದರು.

ನಿರೀಕ್ಷಕ ಮಾದೇಶ್‌ ಗ್ರಾಮ ಲೆಕ್ಕಿಗ ಶೇಷಣ್ಣ, ಮನಿಯಾ, ಪ್ರಭಾರ ಆರೋಗ್ಯ ಅಧಿಕಾರಿ ಮಹೇಶ್‌ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next