Advertisement

Warning… ಶವರ್ಮಾದಲ್ಲೂ ಬ್ಯಾಕ್ಟೀರಿಯಾ ಈಸ್ಟ್‌ ! ತಯಾರಕರ ವಿರುದ್ಧ ಕಾನೂನು ಕ್ರಮ

12:11 AM Jul 01, 2024 | Team Udayavani |

ಬೆಂಗಳೂರು: ಹೊಟೇಲ್‌ಗ‌ಳಲ್ಲಿ ನೀವು ಸೇವಿಸುವ ಎಲ್ಲ ಆಹಾರವೂ ಸುರಕ್ಷಿತವಲ್ಲ. ಈ ಬಗ್ಗೆ ತುಸು ಎಚ್ಚರಿಕೆಯ ಅಗತ್ಯವೂ ಇದೆ. ಈಗಾಗಲೇ ಕಾಟನ್‌ ಕ್ಯಾಂಡಿ ಹಾಗೂ ಗೋಬಿಯಲ್ಲಿ ಬಳಸುತ್ತಿದ್ದ ಬಣ್ಣಗಳು ನಿಷೇಧ ಆದ ಬೆನ್ನಲ್ಲೇ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಇಲಾಖೆ ಹಲವು ತಿನಿಸುಗಳ ಬೆನ್ನು ಹತ್ತಿ ಹೊರಟಿದೆ. ಇದೀಗ ಹಲವರ ಇಷ್ಟದ ಖಾದ್ಯವಾಗಿರುವ ಶವರ್ಮಾ ಸಹ ತಿನ್ನಲು ಯೋಗ್ಯವಲ್ಲ ಎಂಬ ವರದಿಯೊಂದು ಕೈಸೇರಿದೆ.

Advertisement

ಶವರ್ಮಾ ಸೇವಿಸಿ ಅನಾರೋಗ್ಯಕ್ಕೆ ಒಳಗಾದ ಪ್ರಕರಣದ ಹಿನ್ನೆಲೆಯಲ್ಲಿ ಇಲಾ ಖೆಯು ರಾಜ್ಯದ ಹಲವು ಕಾರ್ಪೊರೇಷನ್‌ ವ್ಯಾಪ್ತಿಯಲ್ಲಿ ಮಾರಾಟವಾಗುತ್ತಿದ್ದ ಶವರ್ಮಾ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಿತ್ತು. ಕೆಲವು ಮಾದರಿಗಳಲ್ಲಿ ಬ್ಯಾಕ್ಟೀರಿಯಾ ಹಾಗೂ ಈಸ್ಟ್‌ ಪತ್ತೆಯಾಗಿದೆ. ಈ ಬಗ್ಗೆ ಕಠಿನ ನಿಲುವು ತೆಗೆದುಕೊಂಡಿರುವ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ಆಹಾರ ತಯಾರಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

17 ಕಡೆ ಮಾದರಿ ಸಂಗ್ರಹ
ಬಿಬಿಎಂಪಿ, ಬೆಂಗಳೂರು ಗ್ರಾಮಾಂತರ, ಮೈಸೂರು, ತುಮಕೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬಳ್ಳಾರಿ, ಬೆಳಗಾವಿ ಜಿಲ್ಲೆಗಳ ಕಾರ್ಪೊರೇಷನ್‌ ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತಿರುವ 17 ಮಾದರಿಗಳಲ್ಲಿ 9 ಅಂಗಡಿಗಳಲ್ಲಿ ತಯಾರಿಸಿದ ಶವರ್ಮ ಸೇವಿಸಲು ಯೋಗ್ಯವಾಗಿದೆ. ಉಳಿದ 8ರಲ್ಲಿ ಬ್ಯಾಕ್ಟೀರಿಯಾ ಹಾಗೂ ಈಸ್ಟ್‌ ಕಂಡು ಬಂದಿದ್ದು, ಇದು ಸೇವನೆಗೆ ಅಸುರಕ್ಷಿತ ಎಂದು ವರದಿಯಾಗಿದೆ.

ಆಹಾರ ತಯಾರಿಕೆ ಸಂದರ್ಭ ನೈರ್ಮಲ್ಯದ ಕೊರತೆ, ದೀರ್ಘ‌ಕಾಲದ ಸಂಗ್ರಹಣೆ, ವಿತರಣೆ ಸಂದರ್ಭದಲ್ಲಿನ ನೈರ್ಮಲ್ಯತೆಯಿಂದಾಗಿ ಆಹಾರದಲ್ಲಿ ಬ್ಯಾಕ್ಟೀರಿಯಾ ಹಾಗೂ ಈಸ್ಟ್‌ ಕಂಡು ಬರುತ್ತದೆ. ಈ ಹಿನ್ನೆಲೆಯಲ್ಲಿ ಶವರ್ಮಾ ತಯಾರಕರು ಆಹಾರದ ತಯಾರಿ, ವಿತರಣೆ ಸಂದರ್ಭದಲ್ಲಿ ಪೂರ್ಣ ನೈರ್ಮಲ್ಯ ಹಾಗೂ ಆಹಾರ ಸುರಕ್ಷೆ ಕಾಯ್ದೆ ಅನ್ವಯ ಶವರ್ಮಾಗಳನ್ನು ಪ್ರತಿನಿತ್ಯ ತಾಜಾ ಸ್ಥಿತಿಯಲ್ಲಿ ಮಾರಾಟ ಮಾಡಬೇಕು ಎಂದು ಸೂಚನೆ ನೀಡಿದೆ.

ಶವರ್ಮಾ ತಯಾರಕರು ಉದ್ದಿಮೆ ಎಫ್ಎಸ್‌ಎಸ್‌ಎಐ ನೋಂದಣಿ ಪಡೆದುಕೊಂಡು ಸಾರ್ವಜನಿಕರ ಗಮನಕ್ಕೆ ಬರುವಂತೆ ಪ್ರದರ್ಶನಕ್ಕೆ ಇಡತಕ್ಕದ್ದು. ಸಾರ್ವಜನಿಕರು ಆರೋಗ್ಯದ ದೃಷ್ಟಿಯಿಂದ ಎಫ್ಎಸ್‌ಎಸ್‌ಎಐ ನೋಂದಣಿ ಪಡೆದ ಮಾರಾಟಗಾರರಿಂದಲೇ ಖರೀದಿಸುವಂತೆ ಸಲಹೆ ನೀಡಲಾಗಿದೆ.

Advertisement

ಸಲಹೆಗಳೇನು?
-ಶವರ್ಮಾ ತಯಾರಕರು ತಯಾರಿ, ಸಂಗ್ರಹ, ವಿತರಣೆ ವೇಳೆ ನೈರ್ಮಲ್ಯ ಕಾಪಾಡಬೇಕು
– ಸಾರ್ವಜನಿಕರು ಎಫ್ಎಸ್‌ಎಸ್‌ಎಐ ನೋಂದಾಯಿತ ಮಾರಾಟ ಗಾರರಿಂದಲೇ ಖರೀದಿಸಬೇಕು

Advertisement

Udayavani is now on Telegram. Click here to join our channel and stay updated with the latest news.

Next