Advertisement
ನೀರಿಗಿಳಿಯುವ ದುಸ್ಸಾಹಸಫಲಕ ಅಳವಡಿಸಿದ ಮೇಲೂ ಕೆಲವರು ಈಜಾಟಕ್ಕೆಂದು ನೀರಿಗಿಳಿದ ಪ್ರಸಂಗ ನಡೆದಿದೆ. ಪ್ರತಿ ವರ್ಷವೂ ಇಂತಹ ಕೃತ್ಯಗಳು ಪುನಾರವರ್ತನೆ ಆಗುತ್ತಿವೆ. ಕೆಲ ದಿನಗಳ ಹಿಂದೆ ನದಿ ನೀರಿಗೆ ಇಳಿದ ವ್ಯಕ್ತಿಯೋರ್ವ ಮುಳುಗಿ ಮೃತಪಟ್ಟ ಘಟನೆಯೂ ನಡೆದಿತ್ತು. ಹೀಗಾಗಿ ನಗರದ ನೀರಿನ ದಾಹ ನೀಗಿಸುವ ಮರಳು ಕಟ್ಟದಲ್ಲಿ ಶುಚಿತ್ವ ಕಾಪಾಡಲು ಸ್ವತಃ ಜನರೇ ಎಚ್ಚರ ವಹಿಸಬೇಕಿದೆ.
ಮರಳು ಕಟ್ಟದ ಮೇಲ್ಭಾಗದ 50 ಮೀ. ಅಂತರದಲ್ಲಿ ಸಾರ್ವಜನಿಕರು ಸ್ನಾನ ಮಾಡುವುದಾಗಲಿ, ಈಜುವುದಾಗಲಿ, ಬಟ್ಟೆ ಒಗೆಯುವುದಾಗಲಿ, ಮೀನು ಬೇಟೆ ಅಥವಾ ಇತ್ಯಾದಿಗಳ ಮೂಲಕ ನೀರನ್ನು ಕಲ್ಮಶಗೊಳಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿದವರ ಮೇಲೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.