Advertisement

ಆಸ್ಟ್ರೇಲಿಯಾ ತಂಡದಲ್ಲಿ ಆಡುತ್ತಿರುವ ಈ ಇಬ್ಬರು ಸ್ಟಾರ್ ಆಟಗಾರರನ್ನು ಗುರುತಿಸಬಲ್ಲಿರಾ?

04:19 PM Jan 14, 2022 | Team Udayavani |

ಹೊಬಾರ್ಟ್: ಸದ್ಯ ನಡೆಯುತ್ತಿರುವ ಆ್ಯಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಮೇಲುಗೈ ಸಾಧಿಸಿದೆ. ಮೊದಲ ನಾಲ್ಕು ಪಂದ್ಯಗಳಲ್ಲಿ ಮೂರನ್ನು ಗೆದ್ದು, ಒಂದು ಪಂದ್ಯದಲ್ಲಿ ಡ್ರಾ ಸಾಧಿಸಿರುವ ಆಸೀಸ್ ತಂಡ ಇಂದು ಹೊಬಾರ್ಟ್ ನಲ್ಲಿ ನಾಲ್ಕನೇ ಪಂದ್ಯವಾಡುತ್ತಿದೆ.

Advertisement

ಈ ಮಧ್ಯೆ ಆಸೀಸ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ತಮ್ಮ ಹಳೆಯ ಫೋಟೊವೊಂದನ್ನು ಪೋಸ್ಟ್ ಮಾಡಿದ್ದಾರೆ. ಸಹ ಆಟಗಾರ ಉಸ್ಮಾನ್ ಖವಾಜಾ ಜೊತೆಗಿನ ಬಾಲ್ಯದ ಚಿತ್ರಗಳನ್ನು ವಾರ್ನರ್ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಬಾಲ್ಯದಲ್ಲಿ ಒಟ್ಟಾಗಿ ಕ್ರಿಕೆಟ್ ಆಡಿದ್ದ ಎರಡು ಚಿತ್ರಗಳನ್ನು ಪೋಸ್ಟ್ ಮಾಡಿರುವ ವಾರ್ನರ್, “ 90 ರ ದಶಕವು ನಮಗೆ ಸುಲಭ ರೀತಿಯಲ್ಲಿ ತೋರುತ್ತಿತ್ತು ಉಸ್ಮಾನ್” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಹೀಗೂ ಔಟಾಗಬಹುದೇ?: ವಿಚಿತ್ರ ರೀತಿಯಲ್ಲಿ ಔಟಾದ ಆಸ್ಟ್ರೇಲಿಯಾದ ಮಾರ್ನಸ್ ಲಬುಶೇನ್

ಪಾಕಿಸ್ಥಾನದಲ್ಲಿ ಜನಿಸಿದ್ದ ಉಸ್ಮಾನ್ ಖವಾಜಾ ತನ್ನ ಐದನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾಗೆ ವಲಸೆ ಬಂದಿದ್ದರು. ಬಾಲ್ಯದಲ್ಲಿ ಒಟ್ಟಾಗಿ ಆಡಿದ್ದ ವಾರ್ನರ್ ಮತ್ತು ಉಸ್ಮಾನ್ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಟ್ಟಿಗೆ ಆಡುತ್ತಿದ್ದಾರೆ.

Advertisement

ಮೂರು ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ ಗೆ ಮರಳಿದ್ದ ಉಸ್ಮಾನ್ ಖವಾಜಾ ಸಿಡ್ನಿ ಟೆಸ್ಟ್ ನ ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಬಾರಿಸಿ ಮಿಂಚಿದ್ದರು. ಕೋವಿಡ್ ಸೋಂಕಿಗೆ ಒಳಗಾಗಿದ್ದ ಟ್ರಾವಿಸ್ ಹೆಡ್ ಬದಲಿಗೆ ಸಿಡ್ನಿ ಪಂದ್ಯದಲ್ಲಿ ಅವಕಾಶ ಪಡೆದಿದ್ದ ಉಸ್ಮಾನ್, ಹೊಬಾರ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next