Advertisement

ಐತಿಹಾಸಿಕ ಲಾರ್ಡ್ಸ್ ಮೈದಾನದ ಲಾಂಗ್ ರೂಮ್ ನಲ್ಲಿ ವಾರ್ನರ್- ಖ್ವಾಜಾ ಗಲಾಟೆ

11:45 AM Jul 03, 2023 | Team Udayavani |

ಲಾರ್ಡ್ಸ್: ಲಾರ್ಡ್ಸ್‌ ನಲ್ಲಿ ನಡೆದ ಆಶಸ್ ಟೆಸ್ಟ್‌ನ ಅಂತಿಮ ದಿನದಂದು ಬೆಳಗಿನ ಸೆಷನ್‌ ನ ನಂತರ, ಆಸ್ಟ್ರೇಲಿಯನ್ ಆರಂಭಿಕ ಉಸ್ಮಾನ್ ಖ್ವಾಜಾ ಮತ್ತು ಡೇವಿಡ್ ವಾರ್ನರ್ ಡ್ರೆಸ್ಸಿಂಗ್ ರೂಮ್‌ ಗಳಿಗೆ ಹಿಂತಿರುಗುತ್ತಿರುವಾಗ ಲಾಂಗ್ ರೂಮ್‌ ನಲ್ಲಿ ಸದಸ್ಯರೊಂದಿಗೆ ವಾಗ್ವಾದದಲ್ಲಿ ಕಾಣಿಸಿಕೊಂಡರು.

Advertisement

ಆಸ್ಟ್ರೇಲಿಯನ್ ಆಟಗಾರರಿಬ್ಬರನ್ನು ಅಂತಿಮವಾಗಿ ಸೆಕ್ಯೂರಿಟಿ ಗಾರ್ಡ್‌ ಗಳು ಮತ್ತು ಅವರ ಸಹ ಆಟಗಾರರು ಸಮಾಧಾನಗೊಳಿಸಿದರು.

ಇದನ್ನೂ ಓದಿ:ವಿಧಾನ ಪರಿಷತ್ ಗೆ ನೂತನವಾಗಿ ಆಯ್ಕೆಯಾದ ಶಾಸಕರ ಪ್ರಮಾಣ ವಚನ ಸ್ವೀಕಾರ

ಸ್ಕೈ ಸ್ಪೋರ್ಟ್ಸ್ ಜೊತೆ ಮಾತನಾಡಿದ ಇಂಗ್ಲೆಂಡ್ ವಿಶ್ವಕಪ್ ವಿಜೇತ ನಾಯಕ ಇಯಾನ್ ಮೋರ್ಗನ್, “ನಾನು 16 ವರ್ಷದವನಾಗಿದ್ದ ಇಲ್ಲಿಗೆ ಬಂದಿದ್ದೆ. ನನ್ನ ಸಂಪೂರ್ಣ ವೃತ್ತಿಜೀವನವನ್ನು ಇಲ್ಲಿ ಆಡುವ ಅದೃಷ್ಟಶಾಲಿಯಾಗಿದ್ದೆ. ಆದರೆ ಅಂತಹ ದೃಶ್ಯಗಳನ್ನು ನಾನು ಎಂದಿಗೂ ನೋಡಿಲ್ಲ” ಎಂದರು.

Advertisement

52ನೇ ಓವರ್ ನಲ್ಲಿ ಜಾನಿ ಬೆರಿಸ್ಟೋ ಅವರು ವಿವಾದಾತ್ಮಕ ರೀತಿಯಲ್ಲಿ ಔಟಾದರು. ಗ್ರೀನ್ ನ ಓವರ್ ನ ಕೊನೆಯ ಎಸೆತವನ್ನು ಹಿಂದಕ್ಕೆ ಹೋಗಲು ಬಿಟ್ಟ ಬೇರಿಸ್ಟೋ ಕ್ರೀಸ್ ಬಿಟ್ಟು ಮುಂದೆ ನಡೆದರು. ಈ ವೇಳೆ ಕೀಪರ್ ಅಲೆಕ್ಸ್ ಕ್ಯಾರಿ ಅವರು ನೇರವಾಗಿ ವಿಕೆಟ್ ಗೆ ಚೆಂಡೆಸೆದರು. ಈ ವೇಳೆ ಬೇರಿಸ್ಟೋ ಕ್ರೀಸ್ ನಲ್ಲಿ ಇರದ ಕಾರಣ ಅವರು ಔಟ್ ಎಂದು ಘೋಷಿಸಿದರು. ಇದು ವಿವಾದಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next