ಡೇವಿಡ್ ವಾರ್ನರ್ ಅವರನ್ನು 2018ರ ಐಪಿಎಲ್‌ನಿಂದ ನಿಷೇಧಿಸುವ ಮುನ್ನ ಸನ್‌ರೈಸರ್ ಹೈದರಾಬಾದ್ ತಂಡದ ನಾಯಕತ್ವದಿಂದ ಕೆಳಗಿಳಿಸ ಲಾಗಿತ್ತು. ಐಪಿಎಲ್‌ನ ಹೈದರಾಬಾದ್ ಫ್ರಾಂಚೈಸಿಯ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಕೆ. ಷಣ್ಮುಗಂ ಬುಧವಾರ ತಂಡದ ಅಧಿಕೃತ ಟ್ವಿಟರ್‌ನಲ್ಲಿ ಈ ಸುದ್ದಿಯನ್ನು ಪ್ರಕಟಿಸಿದ್ದರು.
“ಇತ್ತೀಚಿನ ಕೇಪ್‌ಟೌನ್ ಟೆಸ್ಟ್ ಪಂದ್ಯದ ಘಟನಾವಳಿಯನ್ನು ಗಮನಿಸಿ ಡೇವಿಡ್ ವಾರ್ನರ್ ಅವರನ್ನು ನಮ್ಮ ಸನ್‌ರೈಸರ್ ಹೈದರಾಬಾದ್ ತಂಡದ ನಾಯಕತ್ವದಿಂದ ಕೈಬಿಡಲು ನಿರ್ಧರಿಸಿದ್ದೇವೆ. ನೂತನ ನಾಯಕನನ್ನು ಶೀಘ್ರದಲ್ಲೇ ನೇಮಿಸಲಾಗುವುದು’ ಎಂದು ಷಣ್ಮುಗಂ ತಿಳಿಸಿದ್ದಾರೆ.
2016ರಲ್ಲಿ ಹೈದರಾಬಾದ್ ತಂಡ ವನ್ನು ಯಶಸ್ವಿಯಾಗಿ ಮುನ್ನಡೆಸಿ, ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ ಹೆಗ್ಗಳಿಕೆ ವಾರ್ನರ್ ಪಾಲಿಗಿದೆ. ಕಳೆದ ವರ್ಷವೂ ಉತ್ತಮ ನಿರ್ವಹಣೆ ಕಾಯ್ದುಕೊಂಡು ಬಂದ ಸನ್‌ರೈಸರ್ ತಂಡ ಎಲಿಮಿನೇಟರ್ ಸುತ್ತಿನ ತನಕ ಸಾಗಿತ್ತು. ವಾರ್ನರ್ ಗೈರು ತಂಡಕ್ಕೆ ಭಾರೀ ಹೊಡೆತ ನೀಡುವುದರಲ್ಲಿ ಅನುಮಾನವಿಲ್ಲ.ಇದರೊಂದಿಗೆ 2018ರ ಐಪಿಎಲ್ ತಂಡದ ನಾಯಕತ್ವದಿಂದ ಆಸ್ಟ್ರೇಲಿಯದ ಇಬ್ಬರು ನಾಯಕರನ್ನು ಈ ಹುದ್ದೆ ಯಿಂದ ಕೆಳಗಿಳಿಸಿದಂತಾಯಿತು.
ಮಂಗಳವಾರವಷ್ಟೇ ಸ್ಟೀವನ್ ಸ್ಮಿತ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡದ ಕ್ಯಾಪ್ಟನ್ಸಿಯಿಂದ ಕೈಬಿಡಲಾಗಿತ್ತು. ಇವ ರಿಬ್ಬರೂ ದಕ್ಷಿಣ ಆಫ್ರಿಕಾ ವಿರುದ್ಧದ ಕೇಪ್‌ಟೌನ್ ಟೆಸ್ಟ್ ಪಂದ್ಯದ ಬಾಲ್ ಟ್ಯಾಂಪರಿಂಗ್ ಪ್ರಕರಣದ “ಪಾಲುದಾರ’ರಾಗಿದ್ದು, “ಕ್ರಿಕೆಟ್ ಆಸ್ಟ್ರೇಲಿಯ’ದಿಂದ ಒಂದು ವರ್ಷದ ನಿಷೇಧಕ್ಕೊಳಗಾಗಿದ್ದಾರೆ.
ರಾಜಸ್ಥಾನ್ ಫ್ರಾಂಚೈಸಿ ಸ್ಟೀವನ್ ಸ್ಮಿತ್ ಅವರನ್ನು ಉಚ್ಚಾಟಿಸಿದ ಬೆನ್ನಲ್ಲೇ ಅಜಿಂಕ್ಯ ರಹಾನೆ ಅವರನ್ನು ನೂತನ ನಾಯಕನೆಂದು ಘೋಷಿಸಿತ್ತು. ಆದರೆ ಸನ್‌ರೈಸರ್ ಈ ಆಯ್ಕೆ ಯನ್ನು ಕಾದಿರಿಸಿದೆ. ಭಾರತೀಯ ನಾಯಕನಾದರೆ ಇದು ಶಿಖರ್ ಧವನ್ ಪಾಲಾಗುವ ಸಾಧ್ಯತೆ ಇದೆ. ವಿದೇಶಿ ಆಟಗಾರರಲ್ಲಿ ವಿಲಿಯಮ್ಸನ್, ಶಕಿಬ್ , ಬ್ರಾತ್‌ವೇಟ್‌ಮುಂಚೂಣಿಯಲ್ಲಿದ್ದಾರೆ.