ಚಂಡೀಗಢ: ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ಖಲಿಸ್ಥಾನ್ ಸಹಾನುಭೂತಿ ಹೊಂದಿರುವವರಿಗೆ ಆಶ್ರಯ ಮತ್ತು ಇತರ ನೆರವು ನೀಡಿದ ಆರೋಪದ ಮೇಲೆ ತೀವ್ರಗಾಮಿ ಬೋಧಕ ಅಮೃತಪಾಲ್ ಸಿಂಗ್‌ನ ಪ್ರಮುಖ ಸಹಾಯಕನನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.
ಲೂಧಿಯಾನ ನಿವಾಸಿ ಮತ್ತು ಪಿಲಿಭಿತ್‌ನ “ಡೇರಾ” ಉಸ್ತುವಾರಿ ಜೋಗಾ ಸಿಂಗ್, ಹರಿಯಾಣದಿಂದ ಪಂಜಾಬ್‌ಗೆ ದಾಟಿದ ನಂತರ ಫತೇಘರ್ ಸಾಹಿಬ್‌ನ ಸಿರ್ಹಿಂದ್‌ನಿಂದ ಬಂಧಿಸಲಾಯಿತು ಎಂದು ಪೊಲೀಸ್ ಉಪ ಮಹಾನಿರೀಕ್ಷಕ ನರೀಂದರ್ ಭಾರ್ಗವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ನಾವು ಅಮೃತಪಾಲ್ ಸಿಂಗ್ ಸಹಾಯಕ ಜೋಗಾ ಸಿಂಗ್ ನನ್ನು ಬಂಧಿಸಿದ್ದೇವೆ” ಎಂದು ಭಾರ್ಗವ್ ಹೇಳಿದರು, ಅಮೃತಸರ ಪೋಲೀಸ್ (ಗ್ರಾಮೀಣ) ಮತ್ತು ಹೋಶಿಯಾರ್ಪುರ್ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಜೋಗಾ ಸಿಂಗ್ ನಾವು ಅಮೃತಪಾಲ್ ಸಿಂಗ್ ಮತ್ತು ಸಹಾಯಕ ಪಾಪಲ್ಪ್ರೀತ್ ಸಿಂಗ್ ಗೆ ಪಿಲಿಭಿತ್‌ನಲ್ಲಿ ಆಶ್ರಯ ನೀಡಿದ್ದ ಮತ್ತು ಅವರಿಗೆ ವಾಹನಗಳನ್ನು ಸಹ ವ್ಯವಸ್ಥೆ ಮಾಡಿದ್ದ. ಅವರೊಂದಿಗೆ ನೇರ ಸಂಪರ್ಕದಲ್ಲಿದ್ದ. ಪಿಲಿಭಿತ್‌ನಲ್ಲಿ ಆಶ್ರಯ ಮತ್ತು ವಾಹನಗಳನ್ನು ವ್ಯವಸ್ಥೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
“ಮಾರ್ಚ್ 28 ರಂದು, ಅಮೃತಪಾಲ್, ಪಾಪಲ್ಪ್ರೀತ್, ಜೋಗಾ ಮತ್ತು ಗುರ್ಸಾಂತ್ — ಹೋಶಿಯಾರ್ಪುರದಲ್ಲಿ ಒಟ್ಟಿಗೆ ಇದ್ದರು,ಸದ್ಯ ಅಮೃತಪಾಲ್ ಹೊರತುಪಡಿಸಿ ಉಳಿದ ಮೂವರನ್ನು ಬಂಧಿಸಲಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.