Advertisement
ಇಲ್ಲಿ ನಮ್ಮ ರಾಜಧಾನಿ ನವದೆಹಲಿಗೆ ಹೋಗುವವರು ಅವಶ್ಯವಾಗಿ ನೋಡಬೇಕಾದ ಸ್ಥಳ ಇಂಡಿಯಾ ಗೇಟ್. ಮೊದಲನೆಯ ಮಹಾಯುದ್ಧದಲ್ಲಿ ಮಡಿದ ಭಾರತೀಯ ಸೈನಿಕರ ಸ್ಮರಣಾರ್ಥವಾಗಿ ಕಟ್ಟಲ್ಪಟ್ಟ ಸ್ಮಾರಕ. ರಾಜಪಥದ ಕೊನೆಯಲ್ಲಿದೆ. ಇದರ ವಿನ್ಯಾಸಕಾರ ಸರ್ ಎಡ್ವಿ ನ್ ಲೂಟೆನ್ಸ್. ಕ್ರಿ.ಶ. 1921ರ ಫೆ. 10ರಂದು ಇಂಗ್ಲೆಂಡಿನ ರಾಜಕುಮಾರನು ಇದರ ಶಿಲಾನ್ಯಾಸ ನೆರವೇರಿಸಿದ. ಭಾರತೀಯ ಸೇನಾಪಡೆಯ ಮುಖ್ಯಸ್ಥ, ಅಧಿಕಾರಿಗಳು ಹಾಗೂ ವೈಸರಾಯ್ ಚೆಮ್ ಫೋರ್ಡ್ ಉಪಸ್ಥಿತರಿದ್ದರು. ವೀರಯೋಧರ ಸ್ಮಾರಕವು ಎಲ್ಲರಿಗೂ ತ್ಯಾಗಮಾಡಲು ಪ್ರೇರಣೆಯಾಗಲಿ ಎಂದು ವೈಸರಾಯ್ ತನ್ನ ಭಾಷಣದಲ್ಲಿ ಹೇಳಿದ. ರಾಜಕುಮಾರನು ಬ್ರಿಟನ್ ರಾಜನ ಸಂದೇಶವನ್ನು ಹೀಗೆ ಓದಿ ಹೇಳಿದ- ಭಾರತದ ರಾಜಧಾನಿಯಲ್ಲಿ ಸ್ಥಾಪಿಸಲಾಗುವ ಈ ಸ್ಮಾರಕವು ಮುಂದಿನ ಪೀಳಿಗೆಗೆ ಹುತಾತ್ಮ ಯೋಧರ ತ್ಯಾಗ-ಬಲಿದಾನಗಳ ಪಾಠವಾಗಲಿ’. ಈ ಸಮಾರಂಭದಲ್ಲಿ ವೀರಯೋಧರಿಗೆ ರಾಯಲ… ಪದವಿಯನ್ನು ಪ್ರದಾನಿಸಲಾಯಿತು. Related Articles
Advertisement
ಅಲ್ಲಿ ಪ್ಯಾರಿಸ್ ನಗರದಲ್ಲಿ ಇರುವ ಯುದ್ಧದ ಸ್ಮಾರಕವು (ಆರ್ಕ್ ಡ್ಯು ಟ್ರಿಯುಂಫ್) ಅಲ್ಲಿನ ಪ್ರಮುಖವಾದ ಆಕರ್ಷಣೆ ಆಗಿದೆ. ಸೈನ್ ನದಿಯ ಬಲದಂಡೆಯಲ್ಲಿರುವ ಈ ಸ್ಮಾರಕದ ವರ್ತುಲಕ್ಕೆ ಹನ್ನೆರಡು ರಸ್ತೆಗಳು ಬಂದು ಕೂಡುತ್ತವೆ. ಫ್ರೆಂಚ್ ಕ್ರಾಂತಿ ಮತ್ತು ನೆಪೋಲಿಯನ್ ಯುದ್ಧದಲ್ಲಿ ಫ್ರಾನ್ಸ್ ಪರವಾಗಿ ಹೋರಾಡಿ ಮಡಿದ ಯೋಧರ ಸ್ಮಾರಕವಾಗಿ ಕಟ್ಟಲಾಗಿದೆ.
ಜೀನ್ ಚಾಲ್ ಗ್ರಿನ್ ಎಂಬಾತನು ಕ್ರಿ.ಶ. 1806ರಲ್ಲಿ ನೆಪೋಲಿಯನ್ನನ ಅಣತಿಯಂತೆ ಇದರ ನಕ್ಷೆಯನ್ನು ತಯಾರಿಸಿದ. ಮರದ ಮಾದರಿಯೊಂದು ಈ ಸ್ಥಳದಲ್ಲಿ ಕೆಲವು ವರ್ಷಗಳ ಕಾಲ ಪ್ರದರ್ಶನಕ್ಕಿತ್ತು. 1811ರಲ್ಲಿ ಚಾಲ್ ಗ್ರಿನ್ ಮೃತನಾದ. ಇದರ ನಂತರ ಪದೇಪದೇ ವಿಘ್ನಗಳುಂಟಾದವು. ಕೊನೆಗೂ ಲೂಯಿ ಫಿಲಿಪ್ ರಾಜನ ಕಾಲದಲ್ಲಿ ಪೂರ್ಣಗೊಂಡು 1836ರಲ್ಲಿ ಈ ಯುದ್ಧ ಸ್ಮಾರಕ ಉದ್ಘಾಟಿತವಾಯಿತು. ಸೈನಿಕ ಪಡೆಗಳ ವಿಜಯದ ಪಥ ಸಂಚಲನಗಳು, ವಾರ್ಷಿಕ ಪೆರೇಡುಗಳು ಇಲ್ಲಿ ನಡೆಯುತ್ತಿದ್ದವು. ನೆಪೋಲಿಯನ್ನನ ಅಂತಿಮಯಾತ್ರೆಯು ಈ ನಿರ್ಮಾಣದ ಕೆಳಗೆ ಸಾಗಿ ಸಮಾಧಿ ಸ್ಥಳಕ್ಕೆ ರವಾನೆಯಾಯಿತು (1840ರಲ್ಲಿ). ಮೇ 22, 1885ರ ರಾತ್ರಿ ವಿಕ್ಟರ್ ಹ್ಯೂಗೋನ ಶವವನ್ನು ಇದರ ಕೆಳಗೆ ಇಡಲಾಗಿತ್ತು. ಚಾಲ್ಸ…ì ಗಾಡ್ ಫ್ರೈ ಎಂಬ ವಿಮಾನ ಚಾಲಕ 1919ರಲ್ಲಿ ಈ ನಿರ್ಮಾಣದ ಕೆಳಗಿನಿಂದ ತನ್ನ ಯುದ್ಧ ವಿಮಾನವನ್ನು ಹಾರಿಸಿಕೊಂಡು ಹೋಗಿದ್ದ. ಈ ಸಂದರ್ಭವನ್ನು ಚಿತ್ರೀಕರಿಸಲಾಯಿತು. 50 ಮೀ. ಎತ್ತರ, 45 ಮೀ. ಅಗಲವಿರುವ ಈ ಸ್ಮಾರಕದ ಒಳಭಾಗದಲ್ಲಿ 30 ಫ್ರೆಂಚ್ ವಿಜಯಗಳನ್ನು ನಮೂದಿಸಲಾಗಿದೆ. ಹಾಗೆಯೇ 660 ಫ್ರೆಂಚ್ ಸೈನ್ಯದ ಪ್ರಮುಖರ ಹೆಸರುಗಳನ್ನು ಬರೆಯಲಾಗಿದೆ. ರೋಮನ್ ಮಾದರಿಯ ಈ ಕಟ್ಟಡದ ಹೊರಮೈಯಲ್ಲಿ ಪ್ರಸಿದ್ಧವಾದ ಶಿಲ್ಪಿಗಳನ್ನು ಪ್ರತಿನಿಧಿಸುವ ಕಲಾಕೃತಿಗಳು ಅಡಕವಾಗಿವೆ. ಮೊದಲನೆಯ ಮಹಾಯುದ್ಧದಲ್ಲಿ ಮಡಿದ ಅನಾಮಧೇಯ ಸೈನಿಕನ ಸಮಾಧಿ ಇದರ ಕೆಳಗಿದೆ. ಇದಲ್ಲದೆ ಸತತವಾಗಿ ಉರಿಯುವ ಜ್ಯೋತಿಯೊಂದನ್ನು ಎರಡೂ ಮಹಾಯುದ್ಧಗಳಲ್ಲಿ ಮಡಿದ ಯೋಧರ ಸ್ಮರಣಾರ್ಥ ಇಡಲಾಗಿದೆ. ಕಟ್ಟಡದ ಮೇಲ್ಛಾವಣಿಗೆ ಮೆಟ್ಟಿಲುಗಳ ಮೂಲಕ ಅಥವಾ ಲಿಫ್ಟಿನ ಮೂಲಕ ಹೋಗಬಹುದು. ಮೇಲ್ಛಾವಣಿಯ ಒಂದು ಅಂತಸ್ತು ಕೆಳಗೆ ಈ ಸ್ಮಾರಕವನ್ನು ವಿವರಿಸುವ ವಸ್ತು ಸಂಗ್ರಹಾಲಯವಿದೆ. ಮೇಲ್ಛಾವಣಿಯಲ್ಲಿ ನಿಂತು ನೋಡಿದರೆ ಇಡೀ ಪ್ಯಾರಿಸ್ ನಗರದ ಮನಮೋಹಕ ದೃಶ್ಯ ಲಭ್ಯ. ಉಮಾಮಹೇಶ್ವರಿ ಎನ್.