Advertisement

Waqf Property: ವಕ್ಫ್ ಆಸ್ತಿ ಅಕ್ಬರ್, ಔರಂಗಜೇಬ್‌ ಬಿಟ್ಟುಹೋದ ಆಸ್ತಿಯಾ?: ಪ್ರತಾಪ್‌ ಸಿಂಹ

05:19 PM Oct 29, 2024 | Team Udayavani |

ಮೈಸೂರು: ವಕ್ಫ್ ಆಸ್ತಿ ಅಂದರೇನು? ಎಲ್ಲಿಂದ ಬಂತು? ಮುಸ್ಲಿಮರಿಗೆ ಯಾರಿಂದ ಬಂತು? ಸೌದಿ ಅರೇಬಿಯಾದ ಯಾವುದೋ ಮುಲ್ಲಾ, ಮೌಲ್ವಿ ಅಥವಾ ಇಮಾಮ್ ನಿಂದ ನಿಮಗೆ ಬಳುವಳಿಯಾಗಿ ಬಂದಿದ್ದಾ? ಅಥವಾ ಅಕ್ಬರ್, ಜಹಾಂಗೀರ್, ಔರಂಗಜೇಬ ನಿಮಗೆ ಬಿಟ್ಟುಹೋಗಿರುವ ಆಸ್ತಿಯಾ? ಅಥವಾ ಜಿನ್ನಾ ನಿಮಗಾಗಿ ಭಾರತದಲ್ಲಿ ಬಿಟ್ಟು ಹೋಗಿರುವ ಭೂಮಿನಾ? ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

Advertisement

ಮೈಸೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ ವಿಜಯಪುರದಲ್ಲಿ ರೈತರಿಗೆ ಸೇರಿದ ಜಮೀನು ತನ್ನದೆಂದು ವಕ್ಫ್ ಬೋರ್ಡ್ ಹೇಳಿದೆ. ಈ ವಕ್ಫ್ ಎಂದರೆ ಏನು? ಇವರಿಗೆ ಜಮೀನು ಬಳುವಳಿಯಾಗಿ ಕೊಟ್ಟಿದ್ದು ಯಾರು? ಇದೇನು ಜಿನ್ನಾ ಕೊಟ್ಟ ಭೂಮಿಯೇ? ಎಂದು ಪ್ರಶ್ನಿಸಿದರು. ಕೇವಲ ವಿಜಯಪುರ ಮಾತ್ರವಲ್ಲ, ಹುಣಸೂರಿನ ಗಣೇಶ ದೇವಸ್ಥಾನದ 17ಎಕರೆ, ಚಿಕ್ಕಮಗಳೂರಿನ ಕೇಂದ್ರ ಪ್ರದೇಶದಲ್ಲಿ ಖಾಸಗಿ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಹೇಳಿ ಕಬಳಿಸುವ ಪ್ರಯತ್ನ ನಡೆದಿದೆ ಎಂದು ವಾಗ್ದಾಳಿ ನಡೆಸಿದರು.

ವಕ್ಫ್ ಆಸ್ತಿಯಲ್ಲಿ ಏನು ಘನ ಕಾರ್ಯ ಮಾಡಿದ್ದೀರಿ?
ರಾಜ್ಯದಲ್ಲಿನ 1.25 ಲಕ್ಷ ಎಕರೆ ಜಮೀನು ತಮಗೆ ಸೇರಿದ್ದು ಎಂದು ವಕ್ಫ್ ಮಂಡಳಿ ವಾದಿಸುತ್ತಿದೆ. ಕಂಡವರ ಜಮೀನಿಗೆಲ್ಲಾ ಮುಲ್ಲಾಗಳು ನೋಟಿಸ್ ಕೊಡ್ತಾರೆ, ಇದು ನಮ್ಮದು ಅಂತಿದ್ದಾರೆ. ವಕ್ಫ್ ಬೋರ್ಡ್ ಜಮೀನಿನಲ್ಲಿ ಏನು ಘನ ಕಾರ್ಯ ಮಾಡಿದ್ದೀರಿ. ಮುಸ್ಲಿಮರಿಗೆ ಉಳುಮೆ ಮಾಡಲು ಅವಕಾಶ ಕೊಟ್ಟಿದ್ದಿರಾ? ಅಥವಾ ನಮ್ಮ ದೇವಾಲಯ, ಮಠಗಳಲ್ಲಿ ಹಾಕುವಂತೆ ಯಾವತ್ತಾದರೂ ಮಸೀದಿ, ಚರ್ಚ್ ಗಳಲ್ಲಿ ಹಿಡಿ ಅನ್ನ ಯಾರಿಗಾದ್ರೂ ಹಾಕಿದ್ದೀರಾ? ಯಾವ ಮುಸಲ್ಮಾನರಿಗೂ ಕೃಷಿಗೆ ಜಮೀನು ಬಿಟ್ಟುಕೊಟ್ಟಿಲ್ಲ. ಬದಲಾಗಿ ರಿಯಲ್ ಎಸ್ಟೇಟ್ ದಂದೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಕೂಡಲೇ ವಕ್ಫ್ ಕಾಯ್ದೆಯ ತಿದ್ದುಪಡಿ ಮಾಡದೇ ಕೂಡಲೇ ವಜಾ‌ ಮಾಡಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಅವರಿಗೆ ಮುಡಾ ಪ್ರಕರಣ ನಂತರ ಚಾಮುಂಡೇಶ್ವರಿ, ಹಾಸನಾಂಬೆ ಸೇರಿದಂತೆ ಹಿಂದೂ ದೇವತೆಗಳ ಮೇಲೆ ನಂಬಿಕೆ ಬಂದಿದೆ. ಹೀಗಾಗಿ ವಿಜಯಪುರ ವಿಚಾರದಲ್ಲಿ ಹಿಂದೂಗಳಿಗೆ ಅನ್ಯಾಯ  ಮಾಡುವ ಕೆಲಸ ಮಾಡಬೇಡಿ ಎಂದು ಪ್ರತಾಪ‌ ಸಿಂಹ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next