Advertisement
ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ಸಾಕಷ್ಟು ಕೋಲಾಹಲ ಸೃಷ್ಟಿರುವ ನಡುವೆ ಸಂಸತ್ತಿನಲ್ಲಿ ಮಂಡನೆಯಾದ ವಕ್ಫ್ ತಿದ್ದುಪಡಿ ಕಾಯ್ದೆ ಕುರಿತು ರಚಿಸಲಾದ ಜಂಟಿ ಸಂಸದೀಯ ಸಮಿತಿಯ ಅಂಗಳಕ್ಕೆ ವಿವಾದ ತಲುಪಿದೆ.
Related Articles
Advertisement
ಇದೇ ವೇಳೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಯತ್ನಾಳ್ ವಕ್ಫ್ ವಿವಾದವನ್ನು ಅಧ್ಯಕ್ಷರ ಗಮನಕ್ಕೆ ತರಲು ಸಿದ್ಧತೆ ನಡೆಸಿದ್ದಾರೆ. ಧರಣಿ ಸ್ಥಳದಲ್ಲೇ ರೈತರ ಅಹವಾಲುಗಳು, ವಕ್ಫ ಕುರಿತ ನ್ಯಾಯಾಲಯಗಳ ಆದೇಶಗಳು, ನೋಟಿಸ್ ಸೇರಿದಂತೆ ಹಲವು ದಾಖಲೆಗಳನ್ನು ಶೋಭಾ ಹಾಗೂ ಯತ್ನಾಳ್ ಪರಿಶೀಲನೆ ನಡೆಸಿದರು.