Advertisement

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

05:14 PM Nov 25, 2024 | Team Udayavani |

ಚಿಕ್ಕಮಗಳೂರು: ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ. ದಾನದ ಆಸ್ತಿಯನ್ನು ಪ್ರಭಾವಿಗಳು ದುರ್ಬಳಕೆ ಮಾಡಿಕೊಂಡಿರುವುದು ಅನ್ವರ್ ಮಾನಪ್ಪಾಡಿ ವರದಿಯಲ್ಲಿ ಉಲ್ಲೇಖವಾಗಿದೆ. ನಾವು ಆ ಆಸ್ತಿಯನ್ನು ಉಳಿಸಿ ಎಂದು ಹೇಳಿರುವುದು ನಿಜ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

Advertisement

ಕಾಂಗ್ರೆಸ್‌ ಗಿಂತ ಬಿಜೆಪಿ ಅವಧಿಯಲ್ಲಿ ಹೆಚ್ಚು ವಕ್ಛ್ ನೋಟಿಸ್ ನೀಡಿರುವ ವಿವಾದಕ್ಕೆ ಸೋಮವಾರ ನಗರದಲ್ಲಿ ಪ್ರತಿಕ್ರಿಯಿಸಿ, ಎಲ್ಲಾ ನಂದು ನಂದು ಎಂದು ಕಂಡವರ ಆಸ್ತಿಗೆ ಕಣ್ಣು ಹಾಕುವ ಕೆಲಸ ವಕ್ಫ್‌ ಬೋರ್ಡ್ ಮಾಡುತ್ತಿದೆ. ದೇವಸ್ಥಾನ, ವಿಧಾನಸೌಧ, ಸಂಸತ್ತು ಎಲ್ಲಾ ನಮ್ದು ಎನ್ನುವುದು ಬಕಾಸುರ ಸಂಸ್ಕೃತಿ ಎಂದು ಹೇಳಿದ್ದು ನಾನು. ರೈತರ ಆಸ್ತಿ, ದೇವಸ್ಥಾನ, ಸ್ಮಶಾನ, ಶಾಲೆ, ಆಸ್ಪತ್ರೆ, ಕೆರೆಯನ್ನು ಅತಿಕ್ರಮಿಸಿಕೊಳ್ಳಲು ಯಾವತ್ತೂ ಆದೇಶಿಸಿಲ್ಲ. 1500 ವಷದ ದೇವಸ್ಥಾನವನ್ನು ಅತಿಕ್ರಮಿಸಿ ಎಂದು ಬಿಜೆಪಿ ಹೇಳಿತ್ತಾ? ರೈತರ 18 ಸಾವಿರ ಎಕರೆ ದಾಖಲೆ ಇಲ್ಲದೆ ವಕ್ಫ್‌ ಬೋರ್ಡ್‌ ಮಾಡಲಿಕ್ಕೆ ನಾವು ಹೇಳಿದ್ದೇವಾ ಎಂದು ಪ್ರಶ್ನಿಸಿದರು.

ದುರ್ಬಳಕೆ ಆಗಿರುವ ದಾನದ ಆಸ್ತಿಯನ್ನು ಹಿಂಪಡೆದುಕೊಳ್ಳುವುದಕ್ಕೆ ನಾವೂ ಈಗಲೂ ಬದ್ಧ. ದಾನ ಬೇರೆ, ಕಂಡರ ಆಸ್ತಿ ಮೇಲೆ ಕಣ್ಣಾಕುವುದು ಬೇರೆ. ಹೀಗೆ ಕಂಡವರ ಆಸ್ತಿಗೆ ಕಣ್ಣು ಹಾಕಿದರೆ ಜನ ಬರೀ ಬಡಿಗೆ ತಗೆದುಕೊಳ್ಳಲ್ಲ. ಬಡಿಗೆ ಜತೆಗೆ ಕಾಲಿನಲ್ಲಿರುವುದನ್ನು ತಗೆದುಕೊಳ್ಳುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next