Advertisement
ತಿರುವನಂತಪುರಕ್ಕೆ ರವಿವಾರ ಆಗಮಿಸಿದ ಸಚಿವ ಜೇಟ್ಲಿ ಅವರು ರಾಜೇಶ್ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ನಂತರ ಸಂತಾಪ ಸಭೆಯಲ್ಲಿ ಆಡಳಿತಾರೂಢ ಸಿಪಿಎಂ ವಿರುದ್ಧ ಹರಿಹಾಯ್ದರು. “ಕೇರಳದಲ್ಲಿ ಸರಣಿ ಹತ್ಯೆಗಳು ನಡೆಯುತ್ತಿದ್ದರೂ ಸರಕಾರ ಮೌನವಾಗಿರುವುದೇಕೆ? ಸಿಪಿಎಂ ತನ್ನ ಕಾರ್ಯಕರ್ತರನ್ನು ಬಳಸಿಕೊಂಡು ಬೇರೆ ಪಕ್ಷದ ಕಾರ್ಯಕರ್ತರನ್ನು ಇಲ್ಲವಾಗಿಸಲು ಹೊರಟಿದೆ. ಈ ಬಗ್ಗೆ ಆ ಪಕ್ಷ ಆತ್ಮವಿಮರ್ಶೆ ಮಾಡಿಕೊಳ್ಳಲಿ. ರಾಜೇಶ್ ಮೇಲೆ ನಡೆದ ಕ್ರೌರ್ಯ ಭೀಕರವಾಗಿದ್ದು, ದೇಶದ ಶತ್ರುವೂ ಇಂಥ ಕ್ರೌರ್ಯ ಎಸಗಲಿಕ್ಕಿಲ್ಲ. ಇಂಥ ಘಟನೆ ಬಿಜೆಪಿ ಆಡಳಿತದ ರಾಜ್ಯದಲ್ಲಿ ಆಗಿದ್ದರೆ ಈಗಾಗಲೇ ಕೆಲವರು ಪ್ರಶಸ್ತಿ ವಾಪ್ಸಿ ಅಭಿಯಾನ ಮಾಡುತ್ತಿದ್ದರು. ಆದರೆ, ಹಿಂಸೆಯ ಮೂಲಕ ಆರೆಸ್ಸೆಸ್, ಬಿಜೆಪಿಯನ್ನು ಕುಗ್ಗಿಸಲು ಸಾಧ್ಯವಿಲ್ಲ,’ ಎಂದಿದ್ದಾರೆ. Advertisement
ಕೇರಳದಂತೆ ಬೇರೆಡೆ ಆಗಿದ್ರೆ ಪ್ರಶಸ್ತಿ ವಾಪ್ಸಿ ಆಗ್ತಿತ್ತು: ಜೇಟ್ಲಿ
08:30 AM Aug 07, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.