ಲಕ್ನೋ: ಪೊಲೀಸರ ಎನ್ ಕೌಂಟರ್ ನಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಯೊಬ್ಬನನ್ನು ಹತ್ಯೆಗೈಯಲಾಗಿರುವ ಘಟನೆ ಉತ್ತರ ಪ್ರದೇಶದ ಕೌಶಂಬಿಯಲ್ಲಿ ಮಂಗಳವಾರ ಮುಂಜಾನೆ (ಜೂ.27 ರಂದು) ನಡೆದಿದೆ.
ಗುಫ್ರಾನ್ ಮೃತ ಕ್ರಿಮಿನಲ್.
ಮಂಗಳವಾರ ಮುಂಜಾನೆ 5 ಗಂಟೆಯ ಸುಮಾರಿಗೆ ವಿಶೇಷ ಕಾರ್ಯಪಡೆಯ ತಂಡವು (STF) ಗುಂಡಿನ ಚಕಮಕಿಯಲ್ಲಿ ಗುಫ್ರಾನ್ ಮೇಲೆ ಗುಂಡು ಹಾರಿಸಿ ಆ ಬಳಿಕ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಆತ ಮೃತಪಟ್ಟಿದ್ದಾನೆ ಎಂದು ಯುಪಿ ಪೊಲೀಸರು ಹೇಳಿದ್ದಾರೆ.
ಗುಫ್ರಾನ್ ವಿರುದ್ಧ ಪ್ರತಾಪ್‌ಗಢ ಮತ್ತು ಸುಲ್ತಾನ್‌ಪುರದಲ್ಲಿ 13ಕ್ಕೂ ಹೆಚ್ಚು ಕೊಲೆ, ಲೂಟಿ ಮತ್ತು ದರೋಡೆ ಪ್ರಕರಣಗಳು ದಾಖಲಾಗಿವೆ. ಪ್ರಯಾಗರಾಜ್ ಮತ್ತು ಸುಲ್ತಾನಪುರ ಪೊಲೀಸರು ಈತನ ಪತ್ತೆಗೆ 1,25,000 ಲಕ್ಷ ರೂ. ಬಹುಮಾನವನ್ನು ಘೋಷಿಸಿದ್ದರು.
ಯುಪಿಯಲ್ಲಿ ಕ್ರಿಮಿನಲ್ ಗಳನ್ನು ಎನ್ ಕೌಂಟರ್ ಮಾಡಿರುವುದು ಹೊಸತೇನಲ್ಲ. ಯೋಗಿ ಆದಿತ್ಯನಾಥ್ ಅವರು 2017 ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಬಳಿಕ 10,900 ಕ್ಕೂ ಹೆಚ್ಚು ಎನ್‌ಕೌಂಟರ್‌ಗಳು ನಡೆದಿವೆ. ಇದರಲ್ಲಿ 185 ಕ್ಕೂ ಹೆಚ್ಚು ಕ್ರಿಮಿನಲ್‌ಗಳು ಸಾವನ್ನಪ್ಪಿದ್ದಾರೆ.