Advertisement

Lawrwnce: ಬಿಷ್ಣೋಯಿ ಗ್ಯಾಂಗ್‌ ಸದಸ್ಯರ ಗಡಿಪಾರು ಮನವಿಗೆ ಕೆನಡಾ ಪ್ರತಿಕ್ರಿಯೆ ಇಲ್ಲ: ಭಾರತ

05:39 PM Oct 17, 2024 | Team Udayavani |

ನವದೆಹಲಿ: ಗ್ಯಾಂಗ್‌ ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ನ ಸದಸ್ಯರನ್ನು ಗಡಿಪಾರು (Extradition) ಮಾಡುವಂತೆ ಕೆನಡಾ ಬಳಿ ಭಾರತ ಕೆಲವು ವರ್ಷಗಳ ಹಿಂದೆ ಮನವಿ ಮಾಡಿಕೊಂಡಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ (Ministry Of External Affairs) ಗುರುವಾರ (ಅ.17) ತಿಳಿಸಿದೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌, ಇತ್ತೀಚೆಗೆ ಮತ್ತೆ ಬಿಷ್ಣೋಯಿ ಗ್ಯಾಂಗ್‌ ಸದಸ್ಯರನ್ನು ಗಡಿಪಾರು ಮಾಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಕೆನಡಾ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದರು.

ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ಸದಸ್ಯರಾದ ಗುರ್ಜಿತ್‌ ಸಿಂಗ್‌, ಗುರ್ಜಿಂದರ್‌ ಸಿಂಗ್‌, ಅರ್ಷ್‌ ದೀಪ್‌ ಸಿಂಗ್‌ ಗಿಲ್‌, ಲಖ್ಬೀರ್‌ ಸಿಂಗ್‌ ಲಾಂಡಾ, ಗುರ್ ಪ್ರೀತ್‌ ಸಿಂಗ್‌ ಗಡಿಪಾರು ಮಾಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು ಎಂದು ಎಂಇಎ ವಿವರಿಸಿದೆ.

ಕೆನಡಾಕ್ಕೆ ನಾವು ಗ್ಯಾಂಗ್‌ ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ಬಗ್ಗೆ ಮಾಹಿತಿ ನೀಡಿ, ಸಿಂಡಿಕೇಟ್‌ ನ ಚಟುವಟಿಕೆ ಬಗ್ಗೆ ತಿಳಿಸಿ ಗಡಿಪಾರು ಮಾಡುವಂತೆ ತಿಳಿಸಲಾಗಿತ್ತು. ಆದರೆ ಕೆನಡಾ ಪ್ರತಿಕ್ರಿಯೆ ನೀಡಿಲ್ಲ ಎಂದು ಸಚಿವಾಲಯ ತಿಳಿಸಿದೆ.

Advertisement

ಈ ಸಂದರ್ಭದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್‌ ಸಿಂಗ್‌ ನಿಜ್ಜರ್‌ ಕೊ*ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಯಾವುದೇ ಪುರಾವೆಯನ್ನು ಹಂಚಿಕೊಂಡಿಲ್ಲ ಎಂದು ರಣಧೀರ್‌ ಜೈಸ್ವಾಲ್‌ ಹೇಳಿದರು.

ಭಾರತೀಯ ರಾಯಭಾರಿಗಳು ಕೆನಡಾ ನಿವಾಸಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅದನ್ನು ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ಗೆ ರವಾನಿಸುತ್ತಿದೆ ಎಂದು ಕೆನಡಾ ಪ್ರಧಾನಿ ಟ್ರ್ಯೂಡೊ ಆರೋಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next