Advertisement

ಕಾಂಗ್ರೆಸ್‌ ವಿರುದ್ಧ ಜಿಗಜಿಣಗಿ ವಾಗ್ಧಾಳಿ

03:45 PM Mar 08, 2018 | |

ಇಂಡಿ: ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಮಾನ-ಮರ್ಯಾದೆ ಇದೆ ಏನ್ರೀ? ಅದು ಸರ್ಕಾರ ಏನ್ರಿ? ರಾಜ್ಯದಲ್ಲಿ ಹಿಂದೂ ಯುವಕರ ಕೊಲೆ ನಡೆದಿವೆ. ಅಲ್ಪ ಸಂಖ್ಯಾತರ ಕೊಲೆ ಮಾಡಿ ಬಿಜೆಪಿ ತಲೆಗೆ ಕೊಲೆ ಪಟ್ಟ ಕಟ್ಟುವ ಪ್ರಯತ್ನ ಸರ್ಕಾರ
ಮಾಡುತ್ತಿದೆ. ಈ ಬಾರಿ ಕಾಂಗ್ರೆಸ್‌ ಪಕ್ಷ ಮೂರನೇ ಸ್ಥಾನಕ್ಕೆ ಹೋಗಲಿದೆ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹೇಳಿದರು.

Advertisement

ಪಟ್ಟಣದ ಆಮಂತ್ರಣ ಹೊಟೇಲ್‌ ಹಿಂಭಾಗದಲ್ಲಿ ಬಿಜೆಪಿ ಇಂಡಿ ಮಂಡಲ ವತಿಯಿಂದ ಹಮ್ಮಿಕೊಂಡ ನವ ಕರ್ನಾಟಕ ನಿರ್ಮಾಣಕ್ಕಾಗಿ ನವಶಕ್ತಿ ಸಮಾವೇಶ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕಾಲುವೆ ನಿರ್ಮಾಣ ಮಾಡಲಾಗಿದೆ. ಆದರೆ ರೈತರ ಜಮೀನಿಗೆ ಬೆಲೆ ಕಟ್ಟದೆ ಅವರ ತೋಟದಲ್ಲಿ ಕಾಲುವೆ ಮಾಡಿದ್ದಾರೆ. ಆ ಕಾಲುವೆಗಳಲ್ಲಿ ನೀರೂ ಹರಿಸಿಲ್ಲ ಎಂದು ಆರೋಪಿಸಿದ ಅವರು, ವಿಜಯಪುರ ನಗರದಲ್ಲಿ 4 ಓವರ್‌ ಬ್ರಿಡ್ಜ್ ನಿರ್ಮಾಣ ಮಾಡಿಸಿದ್ದೇನೆ. ಇಂಡಿಯಲ್ಲಿ ಒಂದು ಓವರ್‌ ಬ್ರಿಡ್ಜ್ ನಿರ್ಮಾಣ, ಶಿರಾಡೋಣ ಲಿಂಗಸೂರು ರಸ್ತೆ ಮೇಲ್ದರ್ಜೆಗೇರಿಸಲಾಗಿದೆ.  ವಿಜಯಪುರ-ಸೊಲ್ಲಾಪುರ, ವಿಜಯಪುರ-ಸಂಕೇಶ್ವರ ಸೇರಿದಂತೆ ರಸ್ತೆ ನಿರ್ಮಾಣಕ್ಕೆ 2000 ಕೋಟಿ ಅನುದಾನ ನೀಡಲಾಗಿದೆ ಎಂದರು. 

ಡಾ| ಬಿ.ಆರ್‌. ಅಂಬೇಡ್ಕರ್‌ ಅವರಿಗೆ ಮೋಸ ಮಾಡಿದ ಪಕ್ಷ ಕಾಂಗ್ರೆಸ್‌ ಪಕ್ಷ ದಲಿತರ್ಯಾರೂ ಕಾಂಗ್ರೆಸ್‌ ಗೆ ಮತ ನೀಡಬೇಡಿ. ಇಂದು ಮೋದಿಯವರು ಡಾ| ಅಂಬೇಡ್ಕರ್‌ ನೆಲೆಸಿದ್ದ ಮನೆಯನ್ನು ಪ್ರವಾಸಿ ತಾಣವಾನ್ನಾಗಿ ಮಾಡಿದ್ದಾರೆ. ಅಲ್ಲಿ ಉತ್ತಮ ಗ್ರಂಥಾಲಯ ನಿರ್ಮಿಸಿದ್ದಾರೆ. ಮೋದಿಯವರಿಗೆ ಎಲ್ಲ ದಲಿತರೂ ಬೆಂಬಲಿಸಬೇಕು ಎಂದರು. 

ನನ್ನ ಹತ್ತಿರ ಟಿಕೆಟ್‌ ಕೇಳಲು ಯಾರೂ ಬರಬಾರದು, ನನ್ನ ಕೈಯಲ್ಲಿ ಟಿಕೆಟ್‌ ನೀಡುವ ಶಕ್ತಿ ಇಲ್ಲ. ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಹಾಗೂ ನರೇಂದ್ರ ಮೋದಿಯವರೆ ಟಿಕೆಟ್‌ ನೀಡಲಿದ್ದಾರೆ. ಮುಂದೆ ನನಗೂ ಟಿಕೆಟ್‌ ಇದೆಯೋ ಇಲ್ಲವೋ ಗೊತ್ತಿಲ್ಲ.
ದಯಮಾಡಿ ಯಾರೂ ಟಿಕೆಟ್‌ಗಾಗಿ ನನ್ನ ಹತ್ತಿರ ಬರಬಾರದು ಎಂದು ಟಿಕೆಟ್‌ ಆಕಾಂಕ್ಷಿಗಳಿಗೆ ಶಾಕ್‌ ನೀಡಿದರು.

Advertisement

ಅಥಣಿ ಶಾಸಕ ಲಕ್ಷ್ಮಣ ಸವದಿ, ಬಿಜೆಪಿ ಮಂಡಲ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಶಾಸಕರುಗಳಾದ ರವಿಕಾಂಂತ ಪಾಟೀಲ, ಸಾರ್ವಭೌಮ ಬಗಲಿ, ಅಶೋಕ ಅಲ್ಲಾಪೂರೆ, ಪ್ರಕಾಶ ಅಕ್ಕಲಕೋಟ, ಕಾಸುಗೌಡ ಬಿರಾದಾರ, ಸಂಗ್ರಾಜ ದೇಸಾಯಿ, ಶ್ರೀಶೈಲಗೌಡ ಬಿರಾದಾರ, ಮುತ್ತು ದೇಸಾಯಿ, ದಯಾಸಾಗರ ಪಾಟೀಲ, ಪ್ರಭಾವತಿ ಪಾಟೀಲ, ಪಂಚಪ್ಪ ಕಲಬುರ್ಗಿ, ರವಿಕಾಂತ ಬಗಲಿ, ಜಿ.ಎಸ್‌. ಭಂಕೂರ, ಸಿದ್ದಲಿಂಗ ಹಂಜಗಿ, ಪಾಪು ಕಿತ್ತಲಿ, ಶೀಲವಂತ ಉಮರಾಣಿ, ಮಲ್ಲಯ್ಯ ಪತ್ರಿಮಠ, ಮಂಜುನಾಥ ವಂದಾಲ, ರವಿ ಖಾನಾಪುರ, ಹೇಮಂತ ಟೆಂಗಳೆ, ಪ್ರದೀಪ ದೇಶಪಾಂಡೆ, ವಿರಾಜ ಪಾಟೀಲ, ಬಿ.ಎಸ್‌. ಪಾಟೀಲ, ಶ್ರೀಕಾಂತ ದೇವರ, ಭೌರಮ್ಮ ಮುಳಜಿ, ಸುನಂದಾ ವಾಲೀಕಾರ, ಪ್ರಭಾವತಿ ಪಾಟಿಲ, ಅಣ್ಣಪ್ಪ ಖೈನೂರ, ಸುಶೀಲ ಪತ್ತಾರ, ಹನುಮಂತ್ರಾಯಗೌಡ ಪಾಟಿಲ, ಭೀಮನಗೌಡ ಪಾಟೀಲ, ಪುಟ್ಟಣಗೌಡ ಪಾಟೀಲ, ಜಗುಗೌಡ ಬಿರಾದಾರ, ಗೌಡಪ್ಪಗೌಡ ಬಿರಾದಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next