ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ಅವರನ್ನ ಮದುವೆ ಆಗಬೇಕು ಅನ್ನೋದು ಅದೆಷ್ಟೋ ಹುಡುಗಿಯರ ಹೃದಯದಲ್ಲಿರುವ ಕನಸು. ಇದೀಗ ಬಾಲಿವುಡ್ ನಟಿಮಣಿಯೋರ್ವಳೂ ಕೂಡ ಅವಕಾಶ ಸಿಕ್ಕರೆ ಪ್ರಭಾಸ್ ಜೊತೆ ಹಸೆಮಣೆ ಏರುತ್ತೇನೆ ಎಂದಿದ್ದಾರೆ.
ಅಂದಹಾಗೆ ಹೀಗೆ ಪ್ರಭಾಸ್ ಅವರನ್ನು ಮದುವೆ ಆಗುವುದಾಗಿ ಹೇಳಿರುವುದು ಬೇರೆ ಯಾರೂ ಅಲ್ಲ, ಅವರೇ ಕೃತಿ ಸನೂನ್. ಆದಿ ಪುರುಷ ಸಿನಿಮಾದಲ್ಲಿ ಪ್ರಭಾಸ್ ಜೊತೆ ತೆರೆ ಹಂಚಿಕೊಂಡಿರುವ ಈ ನಟಿ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ರ್ಯಾಪಿಡ್ ಫೈರ್ ರೌಂಡ್ ನಲ್ಲಿ ನೀವು ಯಾರನ್ನು ಮದುವೆ ಆಗುತ್ತೀರಿ, ಯಾರ ಜೊತೆ ಫ್ಲರ್ಟ್ ಮಾಡುತ್ತೀರಿ ಮತ್ತು ಯಾರ ಜೊತೆ ಡೇಟಿಂಗ್ ಮಾಡುತ್ತೀರಿ ಎಂದು ನಿರೂಪಕರು ಕೇಳಿದ ಪ್ರಶ್ನೆಗೆ ಕೃತಿ, ತಕ್ಷಣಕ್ಕೆ ಪ್ರಭಾಸ್ ಅವರನ್ನು ಮದುವೆ ಆಗುವುದಾಗಿ ಹೇಳಿದ್ದು, ನಟ ಕಾರ್ತಿಕ್ ಆರ್ಯನ್ ಜೊತೆ ಫ್ಲರ್ಟ್ ಮಾಡುತ್ತಾರಂತೆ. ಮತ್ತೋರ್ವ ನಟ ಟೈಗರ್ ಶ್ರಾಫ್ ಜೊತೆ ಡೇಟಿಂಗ್ ಮಾಡುವುದಾಗಿ ನುಡಿದರು.
ತೆಲುಗು ಸಿನಿಮಾರಂಗ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಈ ಚೆಲುವೆ ಬಾಲಿವುಡ್ ನಲ್ಲಿ ಸಖತ್ ಮಿಂಚುತ್ತಿದ್ದಾರೆ. ಇವರು ನಟಿಸಿದ್ದ ‘ಮಿಮಿ’ ಚಿತ್ರ ಇತ್ತೀಚಿಗೆ ತೆರೆ ಕಂಡಿದ್ದು ಭರ್ಜರಿ ಯಶಸ್ಸು ಪಡೆದುಕೊಂಡಿದೆ.
Related Articles
ಇನ್ನು ಬಹುನಿರೀಕ್ಷೆಯ ಆದಿಪುರುಷ್ ಸಿನಿಮಾ ಮುಂದಿನ ವರ್ಷ 2022ಗೆ ಬಿಡುಗಡೆಯಾವುದಾಗಿ ಸಿನಿಮಾತಂಡ ಅಧಿಕೃತವಾಗಿ ಬಹಿರಂಗ ಪಡಿಸಿದೆ. ಮುಂದಿನ ವರ್ಷ ಆಗಸ್ಟ್ 11ಕ್ಕೆ ವರ್ಲ್ಡ್ ವೈಡ್ ಬಿಡುಗಡೆಯಾಗುವುದಾಗಿ ಘೋಷಣೆ ಮಾಡಿದೆ. ಪ್ಲಾನ್ ಇಂಡಿಯಾ ಸಿನಿಮಾವಾಗಿದ್ದು, ಭಾರತ ಅನೇಕ ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ.