Advertisement
ಅದಕ್ಕೆ ಸುಲಭೋಪಾಯ ಇಲ್ಲಿದೆ. ದಿನದ ಸುಮಾರು ಒಂದು ತಾಸನ್ನು ಸ್ಕಿಪ್ಪಿಂಗ್ ಮಾಡಲು ಮೀಸಲಿಡಿ. ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲಾಗುವ ಸಕರಾತ್ಮಕ ಪರಿಣಾಮಗಳಿಂದ ನಿಮಗೇ ಆಶ್ಚರ್ಯ ಉಂಟಾಗುತ್ತದೆ ಎನ್ನುವುದರಲ್ಲಿ ಸಂದೇಹ ಬೇಡ.
ಸ್ಕಿಪ್ಪಿಂಗ್ ಎಲ್ಲರಿಗೂ ಸುಲಭವಾಗಿ ಜೀವನದಲ್ಲಿ ಅಳವಡಿಕೆ ಮಾಡಿಕೊಳ್ಳಬಹುದಾದ, ಎಲ್ಲರಿಗೂ ಚಿರಪರಿಚಿತವಾದ ಆಟ. ಕೈಕಾಲುಗಳ ಚಲನೆಯ ಕಾರಣದಿಂದ ರಕ್ತ ಪರಿಚಲನೆಯೂ ಸರಿಯಾಗಿ ಆಗುತ್ತದೆ. ಅಲ್ಲದೆ ರಕ್ತ ಪಂಪ್ ಮಾಡುವ ಹೃದಯಕ್ಕೂ ಇದು ಹೆಚ್ಚು ಉಲ್ಲಾಸ ತುಂಬುವ ಕೆಲಸವನ್ನು ಮಾಡುತ್ತದೆ. ದಿನಕ್ಕೆ ಸುಮಾರು ಒಂದು ಗಂಟೆಗಳಷ್ಟು ಕಾಲ ನಾವು ಸ್ಕಿಪ್ಪಿಂಗ್ ಮಾಡಿದೆವು ಎಂದಾದಲ್ಲಿ 1,074 ಕ್ಯಾಲರಿಗಳಷ್ಟು ಕೊಬ್ಬು ಕರಗಿಸುತ್ತದೆ. ಸ್ನಾಯುಗಳನ್ನು ದೃಢಪಡಿಸುವ ಜತೆಯಲ್ಲಿ ಮನಸ್ಸು ಹಗುರಾಗುವುದಕ್ಕೂ ಸ್ಕಿಪ್ಪಿಂಗ್ ಸಹಕಾರಿ. ಆರಂಭದ ದಿನಗಳಲ್ಲಿ ಸ್ಕಿಪ್ಪಿಂಗ್ ನಮ್ಮನ್ನು ಆಯಾಸಗೊಳಿಸುವುದು ಸಾಮಾನ್ಯ. ಹಾಗೆಂದು ನಾವು ಆಗಲ್ಲಪ್ಪ ಎಂದು ಕೈಬಿಡಬಾರದು.
Related Articles
Advertisement
– ಭುವನ ಬಾಬು, ಪುತ್ತೂರು