Advertisement

ಖರ್ಚಿಲ್ಲದೇ ಸುಂದರಿ ಆಗಬೇಕೇ?

06:00 AM Nov 28, 2018 | |

ಮುಖದ ಅಂದ ಕೆಡಲು ಚರ್ಮದ ಅಶುಚಿತ್ವ, ಮಾನಸಿಕ ಹಾಗೂ ದೈಹಿಕ ಒತ್ತಡಗಳು ಪ್ರಮುಖ ಕಾರಣ. ಜಾಹೀರಾತುಗಳಿಗೆ ಮಾರುಹೋಗಿ ಸೋಪು, ಕ್ರೀಮು, ಫೇಸ್‌ವಾಶ್‌ ಹಿಂದೆ ಬಿದ್ದವರ ಚರ್ಮವೂ ಅಂದಗೆಟ್ಟಿದೆ. ಊಟ-ತಿಂಡಿಯಲ್ಲಿ ಸ್ವಲ್ಪ ನಿಯಂತ್ರಣ, ಜೀವನಶೈಲಿಯಲ್ಲಿ ಸ್ವಲ್ಪ ಶಿಸ್ತು ರೂಢಿಸಿಕೊಂಡರೆ ಖರ್ಚಿಲ್ಲದೆ ಸುಂದರಿಯರಾಗಬಹುದು. ಅಡುಗೆಮನೆಯಲ್ಲಿರುವ ಪದಾರ್ಥಗಳು, ಸೌಂದರ್ಯವರ್ಧಕವೂ ಹೌದು ಎಂದು ಮರೆಯಬೇಡಿ. 

Advertisement

– ರಾತ್ರಿ ಮಲಗುವಾಗ, ಹಾಲಿನ ಕೆನೆಗೆ ಅರಿಶಿನ ಬೆರೆಸಿ ಲೇಪಿಸಿಕೊಂಡು, ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ  

– ಸೇಬಿನ ತಿರುಳಿನ ಭಾಗವನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿ ಹದಿನೈದು ನಿಮಿಷ ಬಿಟ್ಟು ತೊಳೆಯಿರಿ. 

– ಹಸಿ ಕ್ಯಾರೆಟ್‌ ತಿನ್ನುವುದರಿಂದ ಹಾಗೂ ಅದರ ರಸವನ್ನು ಮುಖಕ್ಕೆ ಹಚ್ಚಿ ಹತ್ತು ನಿಮಿಷ ಬಿಟ್ಟು ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.

– ಪ್ರತಿದಿನ ಮುಖಕ್ಕೆ ಟೊಮೇಟೊ ರಸ ಹಚ್ಚಿ ಹತ್ತು ನಿಮಿಷ ಬಿಟ್ಟು ತೊಳೆದರೆ ಚರ್ಮದ ಸುಕ್ಕು ಹೋಗುತ್ತದೆ.

Advertisement

ಜೀವನಶೈಲಿ ಹೀಗಿರಲಿ
1. ದಿನಕ್ಕೆ ಮೂರು ಬಾರಿಯಾದರೂ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ.
2. ದಿನಕ್ಕೆ ಕನಿಷ್ಠ ಎರಡು ಲೀಟರ್‌, ಉಗುರು ಬೆಚ್ಚಗಿನ ನೀರು ಕುಡಿದರೆ ಒಳ್ಳೆಯದು. 
3. ಕೂದಲಿಗೆ ರಾಸಾಯನಿಕ ಶ್ಯಾಂಪೂ ಬಳಸದೆ, ಸೀಗೆಕಾಯಿ ಬಳಸಿ  
4. ಬೆಳಗ್ಗೆ ವಾಯು ವಿಹಾರ, ಹದಿನೈದು ನಿಮಿಷ ಧ್ಯಾನ, ಯೋಗ ಮಾಡಿ. 
5. ಕೋಪಕ್ಕೆ ಕಡಿವಾಣ ಹಾಕಿದರೆ ಒಳಿತು. 
6. ಕರಿದ ತಿಂಡಿಯ ಮೋಹ ಬಿಡಿ. 
7. ಹಸಿ ತರಕಾರಿ ಸೊಪ್ಪು, ಹಣ್ಣುಗಳನ್ನು ಹೆಚ್ಚು ಸೇವಿಸಿ.

ರತ್ನಮ್ಮ ಎ.ಆರ್‌., ಅರಕಲಗೂಡು

Advertisement

Udayavani is now on Telegram. Click here to join our channel and stay updated with the latest news.

Next