Advertisement

ಮಾದಕವಸ್ತು ಮುಕ್ತ ಕರ್ನಾಟಕಕ್ಕೆ ಪಣ

10:59 PM Nov 01, 2019 | Lakshmi GovindaRaju |

ಉಡುಪಿ: ರಾಜ್ಯವನ್ನು ಮಾದಕವಸ್ತು ಮುಕ್ತ ಮಾಡಲು ಪಣ ತೊಟ್ಟಿದ್ದೇವೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಸಿಂಥೆಟಿಕ್‌ ಡ್ರಗ್ಸ್‌ ಬಹಳ ಅಪಾಯಕಾರಿ. ರಾಜ್ಯದ ಡ್ರಗ್ಸ್‌ ಸಂಸ್ಕೃತಿಯನ್ನು ಬದಲಾಯಿಸುತ್ತೇವೆ.

Advertisement

ಇದು ಇಲ್ಲಿ ಆಳವಾಗಿ ಬೇರೂರಿದೆ. ಮಾದಕ ವಸ್ತುಗಳ ಸಾಗಾಟ, ದಾಸ್ತಾನು, ಬಳಕೆಯನ್ನು ಹತ್ತಿಕ್ಕಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಣಕಾಸು ವಿನಿಮಯಗಳೆಲ್ಲ ಆನ್‌ಲೈನ್‌ ಮುಖಾಂತರ ನಡೆಯುತ್ತಿವೆ. ದೇಶದಲ್ಲಿ ಸೈಬರ್‌ ಅಪರಾಧ ಪ್ರಕರಣಗಳು ಹೆಚ್ಚಾಗಿದೆ. ಕರ್ನಾಟಕ ರಾಜ್ಯ ಮಾಹಿತಿ ತಂತ್ರಜ್ಞಾನದಲ್ಲಿ ಬಹಳ ಮುಂದಿದ್ದು, ಡಿಜಿಟಲೈಸೇಶನ್‌ ದುರುಪಯೋಗ ಆಗುತ್ತಿದೆ.

ಸೈಬರ್‌ ಅಪರಾಧಗಳನ್ನು ನಿಯಂತ್ರಿಸಲು ರಾಜ್ಯದಲ್ಲಿ ಸೆನ್‌ ಪೊಲೀಸ್‌ ಠಾಣೆಗಳ ಸಂಖ್ಯೆ ಹೆಚ್ಚು ಮಾಡುತ್ತೇವೆ. ಇಸ್ರೇಲಿ ಗೂಢಚರ್ಯೆಯನ್ನು ಕೂಡ ಪತ್ತೆ ಮಾಡುತ್ತೇವೆ. ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ 300 ಮಂದಿ ಬಾಂಗ್ಲಾ ವಲಸಿಗರನ್ನು ಪತ್ತೆ ಮಾಡಿದ್ದೇವೆ. ಯಾವುದೇ ಗುರುತು ಚೀಟಿ ಇಲ್ಲದ 69 ಜನರನ್ನು ಪತ್ತೆ ಮಾಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next