Advertisement

ಕುಡಿಯುವ ನೀರಿಗಾಗಿ ಜನರ ಅಲೆದಾಟ

09:11 PM Mar 29, 2021 | Girisha |

ದೇವದುರ್ಗ: ತಾಲೂಕಿನಲ್ಲಿ ಕೃಷ್ಣಾನದಿ ಉಕ್ಕಿ ಹರಿದರೂ ಪಟ್ಟಣದಲ್ಲಿ ಕಳೆದ ಎರಡೂ¾ರು ದಿನಗಳಿಂದ ಕುಡಿವ ನೀರಿಗಾಗಿ ಜನ ಪರದಾಡುವಂತಾಗಿದೆ. ಕುಡಿವ ನೀರಿನ ಸಮಸ್ಯೆ ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದು, ನೀರು ಪೂರೈಸುವ ಗಾಗಲ್‌ ಬಳಿಯ ಜಾಕ್‌ವೆಲ್‌ ನಿರ್ವಹಣೆ ಮಾಡುವಲ್ಲಿ ಅಧಿಕಾರಿಗಳು ವಿಫಲವಾದ್ದರಿಂದ ಜನರು ನೀರಿಗಾಗಿ ಎಲ್ಲೆಂದರಲ್ಲಿ ಅಲೆಯುವಂತಾಗಿದೆ.

Advertisement

ಆದರೀಗ ಜಾಕ್‌ವೆಲ್‌ದೊಳಗೆ ಕಸಕಡ್ಡಿ ಇತರೆ ವಸ್ತುಗಳು ಹಾವು, ಪ್ರಾಣಿ-ಪಕ್ಷಿ ಬಿದ್ದು ಮೃತಪಟ್ಟಿದ್ದರಿಂದ ನೀರು ಪೂರೈಕೆಗೆ ಸಮಸ್ಯೆ ಉಂಟಾಗಿದೆ. ಕುಡಿವ ನೀರಿಗಾಗಿ ನಿವಾಸಿಗಳು ವಾರ್ಡ್‌ನ ಸದಸ್ಯರ ಬೆನ್ನತ್ತಿದ್ದಾರೆ. ಜನ-ಜಾನುವಾರುಗಳಿಗೆ ಕುಡಿವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕಿದೆ. ಎರಡ್ಮೂರು ದಿನದಿಂದ ದುರಸ್ತಿ ಕಾರ್ಯ ನಡೆದಿದ್ದು, ನಾಳೆ ಅಥವಾ ನಾಡಿದ್ದು, ಪಟ್ಟಣಕ್ಕೆ ನೀರು ಪೂರೈಸುವ ಚಿಂತನೆ ನಡೆದಿದೆ.

ಆಗಾಗ ಪೈಪ್‌ ಒಡೆದು ಲಕ್ಷಾಂತರ ರೂ. ಅನುದಾನ ವ್ಯಯ ಮಾಡಲಾಗಿದೆ. ಆದರೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಪುರಸಭೆ ವಿಫಲವಾಗಿದೆ ಎಂದು ಆರೋಪಿಸುತ್ತಾರೆ ನಾಗರಿಕರು.

Advertisement

Udayavani is now on Telegram. Click here to join our channel and stay updated with the latest news.

Next