Advertisement

ಭಾರಿ ಮಳೆಗೆ ಗೋಡೆ ಕುಸಿತ |ಮೂರು ಮಂದಿಗೆ ಗಾಯ

08:13 PM Oct 11, 2021 | Team Udayavani |

ಕುಣಿಗಲ್ : ಭಾರಿ ಮಳೆಗೆ ಮನೆ ಗೋಡೆ ಕುಸಿದು ಇಬ್ಬರು ಮಕ್ಕಳು ಸೇರಿದಂತೆ ಮೂರು ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ  ಕೊತ್ತಗೆರೆ ಹೋಬಳಿ ಕುರಿಬೋರಯ್ಯನಪಾಳ್ಯ ಗ್ರಾಮದಲ್ಲಿ ನಡೆದಿದೆ.

Advertisement

ಘಟನೆಯಲ್ಲಿ ಆದ್ಯ ಶ್ರೀ (2), ಆಕ್ಷಯ್ (6), ಲಕ್ಷ್ಮಮ್ಮ (66) ಗಾಯಗೊಂಡು ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದ ಹನುಮೇಗೌಡ ಅವರಿಗೆ ಸೇರಿದ ಮೇಲ್ಛಾವಣಿಯ ಸಿಮೆಂಟ್ ಸೀಟು ಹಾಗೂ ಗೋಡೆ ಕುಸಿದು ಈ ಅವಘಡ ಸಂಬವಿಸಿದೆ.  ಸ್ಥಳಕ್ಕೆ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next