ವಾಕಿಂಗ್ ಒಂದು ಸುಲಭವಾದ ವ್ಯಾಯಾಮ. ಆರೋಗ್ಯದ ವಿಷಯಕ್ಕೆ ಬಂದರೆ ವಾಕಿಂಗ್ ಅತಿಮುಖ್ಯ. ನಮ್ಮ ದೈನಂದಿನ ದಿನದಲ್ಲಿ 30 ನಿಮಿಷ ವಾಕಿಂಗ್ ಗಾಗಿ ಮೀಸಲಿಟ್ಟರೆ ದೇಹಕ್ಕೆ ಅನೇಕ ಪ್ರಯೋಜನಗಳನ್ನು ಲಭಿಸುತ್ತದೆ.
ತೂಕ ಇಳಿಕೆಗೆ ನಡಿಗೆ ಅತ್ಯುತ್ತಮ. ಆದರೆ ದಿನದ ಯಾವ ಸಮಯದಲ್ಲಿ ವಾಕಿಂಗ್ ಮಾಡಿದರೆ ಹೆಚ್ಚು ಪ್ರಯೋಜನಗಳಿವೆ ಎಂಬುದು ಹಲವರಿಗೆ ಗೊತ್ತಿರುವುದಿಲ್ಲ. ಬೆಳಗ್ಗೆ ಮಾಡುವ ವಾಕಿಂಗ್ ಒಳ್ಳೆಯದೇ ಅಥವಾ ಸಂಜೆ ಸಮಯದ ವಾಕಿಂಗ್ ಪ್ರಯೋಜನಕಾರಿಯೇ? ಎಂಬ ಗೊಂದಲಕ್ಕೆ ಇಲ್ಲಿದೆ ಉತ್ತರ..
ದಿನನಿತ್ಯ ವಾಕಿಂಗ್ ಮಾಡುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ವಾಕ್ ಮಾಡುವುದರಿಂದ ದೇಹ ಫಿಟ್ ಆಗುತ್ತದೆ. ದಿನವಿಡೀ ಸಕ್ರಿಯರಾಗಿರಲು ಸಹಾಯ ಮಾಡುತ್ತದೆ. ಮಾತ್ರವಲ್ಲದೇ ಬಿಪಿ ನಿಯಂತ್ರಣ, ತೂಕ ನಿಯಂತ್ರಣ ಸೇರಿದಂತೆ ಹಲವಾರು ರೀತಿಯಾಗಿ ದೇಹದ ಆರೋಗ್ಯಕ್ಕೆ ಸಹಖಾರಿಯಾಗಿದೆ. ಮಧುಮೇಹಿಗಳಿಗೆ ಆರೋಗ್ಯ ನಿರ್ವಹಣೆಗೆ ನಡಿಗೆ ಹೆಚ್ಚಿನ ಸಹಾಯ ಮಾಡುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಳ:
ನಮಗೆ ರೋಗಗಳು ಬಾರದಂತೆ ತಡೆಯಲು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರಬೇಕು. ಅದಕ್ಕಾಗಿ ಕೆಲ ದೈಹಿಕ ದಂಡನೆ ಅತ್ಯವಶ್ಯಕ. ಅತಿಯಾದ ದೈಹಿಕ ದಂಡನೆಯ ಬದಲಾಗಿ ವಾಕಿಂಗ್ ಮತ್ತು ಪೌಷ್ಟಿಕ ಆಹಾರಗಳು ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗಾಗಿ ನಮ್ಮ ದೈನಂದಿನ ದಿನದಲ್ಲಿ ವಾಕಿಂಗ್ ಮಾಡುವುನ್ನು ಅಭ್ಯಾಸ ಮಾಡಿಕೊಳ್ಳಬೇಕು.
ದೇಹದ ಕೊಬ್ಬು ಕಡಿಮೆ ಮಾಡಿಕೊಳ್ಳಲು:
ನಡಿಗೆ ದೇಹದ ಕೊಬ್ಬು ಕಡಿಮೆ ಮಾಡುವುದಲ್ಲದೇ, ದೇಹದ ತೂಕ ಇಳಿಸಿಕೊಳ್ಳಬಹುದು. ತೂಕ ಕಡಿಮೆ ಆಗಲು ಬಯಸುವವರು ಪ್ರತಿನಿತ್ಯ ಬಿರುಸಾದ ವಾಕಿಂಗ್ ಮಾಡುವುದು ಅತಿ ಅಗತ್ಯ. ವಾಕ್ ನೊಂದಿಗೆ ಜಂಕ್ ಫುಡ್ ಗಳ ಬದಲಾಗಿ ಪೌಷ್ಟಿಕಾಂಶವುಳ್ಳ ಆಹಾರ ಸೇವಿಸುವುದು ಕೂಡಾ ಮುಖ್ಯ.
ಕಾಯಿಲೆಗಳು ಬಾರದಂತೆ ತಡೆಯಲು:
ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ರೋಗಗಳು ಕಾಡುತ್ತಿದೆ. ಅದಕ್ಕೆ ನಮ್ಮ ದೈನಂದಿನ ಜೀವನ ಶೈಲಿಯೇ ಮುಖ್ಯ ಕಾರಣ. ಹಾಗಾಹದ ಹಾಗೇ ತಡೆಯಲು ನಮ್ಮ ದಿನಚರಿಯಲ್ಲಿ ವಾಕಿಂಗ್ ಮಾಡುವುದನ್ನು ರೂಢಿಸಿಕೊಳಬೇಕು. ಅಧಿಕ ರಕ್ತದೊತ್ತಡ ಹೊಂದಿರುವವರು ವಾಕಿಂಗ್ ಮಾಡುವುದರಿಂದ ಬಿಪಿ ನಿಯಂತ್ರಣದಲ್ಲಿರಿಸಲು ಸಹಾಯ ಮಾಡುತ್ತದೆ. ವಾಕ್ ಮಾಡುವುದರಿಂದ ಟೈಪ್-2 ಮಧುಮೇಹ ಸುಧಾರಿಸಿಕೊಳ್ಳಬಹುದು. ವಾಕಿಂಗ್ ಮಾಡುವುದರಿಂದ ಹೃದಯ ರಕ್ತನಾಳ ಆರೋಗ್ಯಕರವಾಗಿರುವಂತೆ ಮಾಡುತ್ತದೆ. ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ. ದೇಹದಲ್ಲಿನ ಶಕ್ತಿಯ ಮಟ್ಟ ಹೆಚ್ಚಿಸಲು ಸಹಾಯ ಮಾಡುತ್ತದೆ.
ಆಹಾರ ಸೇವಿಸಿದ ಬಳಿಕ ವಾಕಿಂಗ್ ಉತ್ತಮ:
ಬೆಳಗ್ಗೆ ವಾಕಿಂಗ್ ಆರೋಗ್ಯಕ್ಕೆ ಒಳ್ಳೆಯದು. ತೂಕ ಇಳಿಸಿಕೊಳ್ಳಲು ಬಯಸುವವರು ಸಂಜೆಯ ಸಮಯದಲ್ಲಿ ಬಿರುಸಾದ ವಾಕಿಂಗ್ ಉತ್ತಮ. ಆಹಾರ ಸೇವಿಸಿದ ಬಳಿಕ 10-20 ನಿಮಿಷಗಳ ವಾಕಿಂಗ್ ಮಾಡುವುದು ಒಳ್ಳೆಯ ಅಭ್ಯಾಸ.
ಬೆಳಿಗ್ಗೆ ವಾಕಿಂಗ್ ಮಾಡುವುದರ ಪ್ರಯೋಜನಗಳು:
ಹೆಚ್ಚಿನ ಜನರು ಬೆಳಗ್ಗಿನ ಸಮಯದಲ್ಲಿ ವಾಕಿಂಗ್ ಮಾಡುತ್ತಾರೆ. ಬೆಳಗಿನ ಬಿಸಿಲಿನಲ್ಲಿ ನಡೆಯುವುದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಬೆಳಗಿನ ಬಿಸಿಲಿನಿಂದ ನಮ್ಮ ದೇಹ ಅಗತ್ಯವಾದ ವಿಟಮಿನ್ ಡಿ ಪಡೆಯುತ್ತದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಕ್ಯಾಲೋರಿ ಬೇಗ ಬರ್ನ್ ಆಗುತ್ತವೆ. ದೇಹದಲ್ಲಿ ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ ಎನ್ನಲಾಗುತ್ತದೆ.
ಬೆಳಿಗ್ಗೆ ವಾಕಿಂಗ್ ಮಾಡುವುದರಿಂದ ಒತ್ತಡ ನಿವಾರಣೆಯಾಗುತ್ತದೆ. ಮಾನಸಿಕ ಶಾಂತಿ ದೊರೆಯುತ್ತದೆ. ದಿನವಿಡೀ ಕ್ರಿಯಾಶೀಲರಾಗಿರಬಹುದು. ಬೆಳಗಿನ ಪ್ರಶಾಂತ ಹಾಗೂ ಶುದ್ಧ ಗಾಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಸಂಜೆಯ ವಾಕಿಂಗ್ ಮಾಡುವುದರ ಪ್ರಯೋಜನಗಳು:
ಸಂಜೆಯ ನಡಿಗೆ ನಮ್ಮ ಇಡೀ ದಿನದ ಆಯಾಸ ಮತ್ತು ಒತ್ತಡವನ್ನು ಹೋಗಲಾಡಿಸುತ್ತದೆ. ದೇಹದಲ್ಲಿನ ಸ್ನಾಯುಗಳಿಗೆ ಸಾಕಷ್ಟು ವಿಶ್ರಾಂತಿ ಸಿಗುತ್ತದೆ ಎಂದು ಹೇಳಲಾಗುತ್ತದೆ. ಸಂಜೆ ವಾಕ್ ಮಾಡುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ ಹಾಗೂ ರಾತ್ರಿಯ ನಿದ್ದೆಗೆ ಸಹಕಾರಿಯಾಗಿದೆ.
ಸಂಜೆಯ ವಾಕಿಂಗ್‌ನ ಸಮಸ್ಯೆ ಎಂದರೆ ಶುದ್ಧ ಗಾಳಿ ಸಿಗದಿರುವುದು. ಸಂಜೆ ವಾಕಿಂಗ್ ಮಾಡುವುದರಿಂದ ಹಸಿವು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಆದಷ್ಟು ಸಂಜೆ ವಾಕಿಂಗ್ ಮಾಡುವುದಕ್ಕಿಂತ ಬೆಳಗ್ಗೆ ವಾಕಿಂಗ್ ಮಾಡುವುದು ಆರೋಗ್ಯಕ್ಕೆ ತುಂಬಾ ಉತ್ತಮ ಎಂಬುದು ಆರೋಗ್ಯ ತಜ್ಞರ ಸಲಹೆ.
ಮುಖ್ಯವಾಗಿ ದಿನದ ಯಾವುದೇ ಸಮಯದಲ್ಲಿ ವಾಕಿಂಗ್ ಮಾಡುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಉತ್ತಮ. ಊಟದ ನಂತರ ನಡೆಯುವುದು ತೂಕ ನಷ್ಟ ಮತ್ತು ಮಧುಮೇಹ ಸುಧಾರಿಸಿಕೊಳ್ಳಲು ಬಯಸುವವರಿಗೆ ಉತ್ತಮ ಸಮಯ. ಸಂಜೆ ವಾಕ್ ಮಾಡುವುದು ದೇಹದ ಮೂಳೆ, ಸ್ನಾಯುಗಳನ್ನು ಬಲ ಪಡಿಸುತ್ತದೆ.