Advertisement
ಬಂಟ್ಸ್ ಹಾಸ್ಟೆಲ್‌ನಲ್ಲಿರುವ ಅಮೃತೋತ್ಸವ ಕಟ್ಟಡದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಚೇರಿಯಲ್ಲಿ ಫಲಾನುಭವಿಗಳಿಗೆ ಸಹಾಯ ಧನ ವಿತರಿಸಿ ಮಾತನಾಡಿದ ಅವರು, ಬಂಟರು ಅಂದರೆ ಒಂದು ಕುಟುಂಬವಿದ್ದಂತೆ. ಮನುಷ್ಯನಿಗೆ ಕಷ್ಟ–ಸುಖ ಸಾಮಾನ್ಯ, ಬಂಟ ಸಮಾಜದಲ್ಲಿ ಬಡತನದಲ್ಲಿರುವ ಕುಟುಂಬಗಳಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ ನಿರಂತರ ಸಹಾಯ ಧನ ನೀಡಿ ಅವರ ಕಷ್ಟಗಳನ್ನು ನಿವಾರಿಸುವ ಕೆಲಸದಲ್ಲಿ ತೊಡಗಿದೆ. ಒಕ್ಕೂಟ ಸಹಾಯಧನ ವಿತರಿಸುವಲ್ಲಿ ಯಾವುದೇ ತಾರತಮ್ಯ ಮಾಡದೆ ಸಮಾನವಾಗಿ ಹಂಚಿ ನಿಸ್ವಾರ್ಥ ಸೇವೆ ಮಾಡುತ್ತಿದೆ. ಈ ಸಂಘಟನೆ ಇತರ ಬಂಟರ ಸಂಘಗಳಿಗೆ ಮಾದರಿಯಾಗಿದೆ. ಮಕ್ಕಳಿಗೆ ವಿದ್ಯೆ ಕೊಡಿ. ವಿದ್ಯೆಯ ಜತೆಗೆ ಸಂಪರ್ಕವೂ ಬೆಳೆಯುತ್ತದೆ. ಮುಂದೆ ಉದ್ಯೋಗ ದೊರೆತಾಗ ಕಷ್ಟ ತನ್ನಿಂದ ತಾನೆ ನಿವಾರಣೆ ಆಗುತ್ತದೆ ಎಂದರು.
Related Articles
Advertisement
ಸಮಾರಂಭದಲ್ಲಿ ಒಕ್ಕೂಟದ ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ, ಜತೆ ಕಾರ್ಯದರ್ಶಿ ಸತೀಶ್ ಅಡಪ ಸಂಕಬೈಲ್, ಒಕ್ಕೂಟದ ಕಾರ್ಯಕಾರಿ ಸಮಿತಿಯ ಸದಸ್ಯ ಕೊಲ್ಲಾಡಿ ಬಾಲಕೃಷ್ಣ ರೈ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ, ಕೆಮ್ಮಣ್ಣು ಬಂಟರ ಸಂಘದ ಅಧ್ಯಕ್ಷ ತೋನ್ಸೆ ಮನೋಹರ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ, ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ, ಸುರೇಶ್ ಶೆಟ್ಟಿ ಸೂರಿಂಜೆ, ಹೇಮನಾಥ ಶೆಟ್ಟಿ, ಚೆಲ್ಲಡ್ಕ ರಾಧಾಕೃಷ್ಣ ಶೆಟ್ಟಿ, ಒಕ್ಕೂಟದ ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಪ್ರತೀಕ್ಷಾ ಶೆಟ್ಟಿ ಮತ್ತು ಸೌಂದರ್ಯ ಸ್ಪರ್ಧೆಯಲ್ಲಿ ಸಾಧನೆಗೈದ ಸಾನ್ವಿ ಆರ್. ಶೆಟ್ಟಿ ಸುರತ್ಕಲ್ ಹಾಗೂ ಒಕ್ಕೂಟಕ್ಕೆ ಪ್ರಥಮ ನಿರ್ದೇಶಕರಾಗಿ 25 ಲ. ರೂ. ದೇಣಿಗೆ ನೀಡಿದ ತೋನ್ಸೆ ಆನಂದ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.
ಒಕ್ಕೂಟದಿಂದ ಎಂ. ಫ್ರೆಂಡ್ಸ್ ಸಂಸ್ಥೆಯ ಕಾರುಣ್ಯ ಯೋಜನೆಗೆ ವೆನ್ಲಾಕ್ಆ ಸ್ಪತ್ರೆಯಲ್ಲಿ ರೋಗಿಗಳ ಪೋಷಕರಿಗೆ ಒಂದು ತಿಂಗಳ ರಾತ್ರಿ ಊಟದ ವ್ಯವಸ್ಥೆಗೆ ಧನ ಸಹಾಯ ನೀಡಲಾಯಿತು. ಎಂ. ಫ್ರೆಂಡ್ಸ್ ಸಂಸ್ಥೆಯ ಸುಜಾಹ್ ಮೊಹಮ್ಮದ್ ಅಲಂಕಾರ್ ಮತ್ತು ಝುಬೇರ್ ಕಂಬಳಬೆಟ್ಟು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಾಮಾಜಿಕ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಒಕ್ಕೂಟದ ಜತೆಕಾರ್ಯದರ್ಶಿ ಸತೀಶ್ ಅಡಪ ಸಂಕಬೈಲ್ ಕಾರ್ಯಕ್ರಮ ನಿರ್ವಹಿಸಿದರು.