ನವದೆಹೆಲಿ: ನಿಮ್ಮ ಮೆಚ್ಚಿನ ಸಿನಿಮಾ ಕಲಾವಿದರು ನಿಮ್ಮ ಜೊತೆ ಒಂದು ಸೆಲ್ಫಿ ತೆಗಿಸಿಕೊಂಡರೆ ತುಂಬಾ ಖುಷಿ ಪಡ್ತೀರ ಅಲ್ವಾ? ಇನ್ನೂ ಕೆಲವು ಅಭಿಮಾನಿಗಳು ತಮ್ಮ ಮೆಚ್ಚಿನ ನಟ-ನಟಿಯರಿಗಾಗಿ ಕೈರ ಮೇಲೆ ಟ್ಯಾಟೋ ಹಾಕಿಕೊಳ್ಳುತ್ತಾರೆ. ಇಲ್ಲೊಬ್ಬ ಅಭಿಮಾನಿ ತನ್ನ ಮೆಚ್ಚಿನ ನಟನನ್ನು ಭೇಟಿಯಾಗಲು 900 ಕಿ.ಮಿ. ನಡೆದುಕೊಂಡು ಬಂದಿದ್ದಾರೆ.!
ಗುಜರಾತಿನ ಪರ್ಬತ್ ಎನ್ನುವ ಹುಡುಗ ನಟ ಅಕ್ಷಯ್ ಕುಮಾರ್ ಭೇಟಿಯಾಗಲು ದ್ವಾರಕಾದಿಂದ ಬರೋಬ್ಬರಿ 900 ಕೀ.ಮಿ ದೂರ ನಡೆದುಕೊಂಡೇ ಮುಂಬಯಿ ವರೆಗೆ ಬಂದಿದ್ದಾರೆ. ಪರ್ಬತ್ ಕಳೆದ ಹದಿನೆಂಟು ದಿನಗಳಿಂದ ಸುಮಾರು 900 ಕೀ.ಮಿ ದೂರ ಕ್ರಮಿಸಿಕೊಂಡು ಬಂದಿದ್ದಾರೆ. ಇಂದು ಕೊನೆಗೂ ಅಕ್ಷಯ್ ಕುಮಾರ್ ಭೇಟಿಯಾಗಿದ್ದಾರೆ.
ಅಕ್ಷಯ್ ಕುಮಾರ್ ತನ್ನ ಅಭಿಮಾನಿಯ ಈ ಕಥೆಯನ್ನು ತನ್ನ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸೆಲ್ಫಿ ತೆಗೆಸಿಕೊಂಡು ಇನ್ನೊಮ್ಮೆ ಈ ರೀತಿ ಮಾಡಬೇಡ ಅನ್ನುವ ಕಿವಿ ಮಾತನ್ನು ಹೇಳಿದ್ದಾರೆ. ತಾನು ಯಾವಗಲೂ ಶಾರೀರಿಕವಾಗಿ ಸಧೃಡವಾಗಿ ಇರಲು ಇಚ್ಛಿಸುತ್ತೇನೆ ಅದಕ್ಕಾಗಿ ನಿಮ್ಮನ್ನು ಭೇಟಿಯಾಗಲು ನಡೆದುಕೊಂಡು ಬಂದಿದ್ದೇನೆ ಎನ್ನುತ್ತಾರೆ ಪರ್ಬತ್.
View this post on InstagramRelated Articles
AdvertisementA post shared by Akshay Kumar (@akshaykumar) on