Advertisement
ಆದರೆ ಸ್ನೇಹಿತರಿಬ್ಬರ ಅನ್ವೇಷಣೆಯ ಪರಿಣಾಮ ರನ್ನಿಂಗ್ ಶ್ಯೂನಲ್ಲೂ ಮೊಬೈಲ್ ಚಾರ್ಜಿಂಗ್ ಅಳವಡಿಸಲಾಗಿದೆ.
Related Articles
Advertisement
ಯಾವುದೇ ಸಾಧನೆಯಾದರೂ ಏಳು ಬೀಳುಗಳಿರುವುದು ಸಹಜ. ಅದರಂತೆ ಇವರು ಈ ಮಾಡಲ್ ಅನ್ನು ಪ್ರಯತ್ನಿಸುವ ಮುನ್ನ ಹಲವಾರು ಬಾರಿ ಸೋತರೂ ಸಹ ಈ ಸಂಶೋಧನೆ ಜತೆ ಇನ್ನೂ ಮೂರು ಮಾಡಲ್ ಸಿದ್ಧಪಡಿಸಿದ್ದರು. 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುವಾಗ ವಿಜ್ಞಾನದ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತಹ ಸಂದರ್ಭದಲ್ಲಿ ಈ ಪ್ರಯೋಗ ಮಾಡಿದ್ದರು.
ವಾಕಿ ಮೊಬಿ ಚಾರ್ಜರ್ಈ ಇಬ್ಬರು ಸ್ನೇಹಿತರು ತಮ್ಮ ಸಂಶೋಧನೆಗೆ ಇಟ್ಟ ಹೆಸರೇ ವಾಕಿ ಮೊಬಿ ಚಾರ್ಜರ್. ಹೆಸರೇ ಸೂಚಿಸುವಂತೆ ನಾವು ನಡೆಯುವ ಶ್ಯೂ ಮೂಲಕ ಪೊರ್ಟೆಬಲ್ ಚಾರ್ಜ್ ಮಾಡುವ ವ್ಯವಸ್ಥೆ ಇದಾಗಿದೆ. ರೈಲ್ವೇ ಇಲಾಖೆ ಪ್ರಯಾಣಿಕರ ಚಲನೆಯ ಮೂಲಕ ವಿದ್ಯುತ್ ಉತ್ಪಾದನೆ ಮಾಡಲು ಮುಂದಾಗಿರುವ ಲೇಖನಗಳ ಓದು ಇವರ ಈ ಯೋಜನೆಗೆ ಪ್ರಮುಖ ಪ್ರೇರಣೆಯಾಗಿದೆ. ಇದರ ಮತ್ತೊಂದು ವಿಶೇಷತೆ ಎಂದರೆ ಚಲನೆಯ ಶಕ್ತಿಯನ್ನು ಬಳಸಿ ಸಾಮಾನ್ಯ ಚಾರ್ಜರ್‌ನ ಚಾರ್ಜಿಂಗ್‌ಗಿಂತಲೂ ವೇಗವಾಗಿ ಚಾರ್ಜ್ ಆಗುವ ಬ್ಯಾಟರಿ ಸಾಮರ್ಥ್ಯವಿದೆ. ಇದನ್ನು ಡೈನಮೋ ಮತ್ತು ಬಫರ್ ಮೇಷಿನ್ ಕಾರ್ಯವಿಧಾನದಿಂದ ಆವಿಷ್ಕರಿಸಿದ್ದು, ಇದರ ಒಟ್ಟು ಉತ್ಪಾದನಾ ವೆಚ್ಚ 2000 ರೂ. ಆಗಿರುತ್ತದೆ. ಸುತ್ತಾಡಲು, ಓಡಲು ಹೋದ ಬಳಿಕ ಪೋರ್ಟೆಬಲ್ ಚಾರ್ಜರ್ ಮೂಲಕ ಮೊಬೈಲ್ ಚಾರ್ಜ್ ಮಾಡಬಹುದಾಗಿದೆ.
ಮುಂದಿನ ದಿನದಲ್ಲಿ ವಾಕಿ ಮೊಬೈಲ್ ಚಾರ್ಜರ್ ಅನ್ನು ವೈರ್‌ಲೆಸ್ ಮತ್ತು ಪವರ್‌ಬ್ಯಾಂಕ್ ಮಾದರಿಯಲ್ಲಿ ಪ್ರಸ್ತುತ ಪಡಿಸಲು ಇವರು ಪ್ರಯತ್ನಿಸುತ್ತಿದ್ದಾರೆ. ಈ ಪ್ರಯೋಗಕ್ಕೆ ಬೆಂಬಲ ನೀಡುವುದಕ್ಕಿಂತ ಮನೋಸ್ಥೈರ್ಯ ಕುಗ್ಗಿಸುವವರೆ ಹೆಚ್ಚಾಗಿದ್ದರಂತೆ. ಪ್ರತಿಯೊಂದನ್ನು ಶಿಕ್ಷಣದಿಂದ ಪಡೆಯಲು ಸಾಧ್ಯವಿಲ್ಲ. ಯಾವುದೇ ಗುರಿ ಇದ್ದರೆ ಅದಕ್ಕೆ ಸಿದ್ಧತೆ, ತ್ಯಾಗ, ಪರಿಶ್ರಮದಂತಹ ಗುಣಗಳನ್ನು ನಾವು ಬೆಳೆಸಿಕೊಳ್ಳಬೇಕು. ಸ್ನೇಹಿತರೊಂದಿಗಿನ ಕ್ಷಣಿಕ ಖುಷಿ ಮರೆಯಾಯಿತೆಂಬ ಬೇಸರವಿರುವುದು ಸಹಜ. ಅದರಂತೆ ಅದೇ ಕಾಲಾವಧಿ ಉತ್ತಮ ಸಂಶೋಧನೆಗೂ ಕಾರಣವಾಗಿದೆ ಎಂಬ ಹೆಮ್ಮೆ ಸ್ನೇಹಿತರಿಬ್ಬರಿಗೂ ಇದೆ. ಪ್ರಸ್ತುತ ಇವರು ದಿಲ್ಲಿಯ ಭಾರತಿ ವಿದ್ಯಾಪೀಠ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ವಿಐಟಿಯಲ್ಲಿ ತಮ್ಮ ಬಿ.ಟೆಕ್ ಮಾಡುತ್ತಿದ್ದಾರೆ. ಈ ಸಂಶೋಧನೆ ಮತ್ತಷ್ಟು ಹೊಸ ಪ್ರಯೋಗಗಳಿಗೆ ಪ್ರೇರಣೆಯಾಗಿದೆ ಎಂದರೂ ತಪ್ಪಾಗಲಾರದು. ರಾಧಿಕಾ, ಕುಂದಾಪುರ