Advertisement

ಮೋದಿ ಗೆದ್ದಿದ್ದಕ್ಕೆ ತಿರುಪತಿ ಬೆಟ್ಟಕ್ಕೆ ಪಾದಯಾತ್ರೆ

07:44 AM Jun 07, 2019 | Team Udayavani |

ಕೋಲಾರ: ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಎರಡನೇ ಬಾರಿ ಬಹುಮತದಿಂದ ಆಯ್ಕೆಯಾಗಿದ್ದಕ್ಕೆ ನಗರದ ಬಿಜೆಪಿ ರತ್ನಮ್ಮ ಅನಾರೋಗ್ಯದಲ್ಲೂ ತಿರುಮಲ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಹತ್ತಿ ಹರಕೆ ತೀರಿಸಿ ಗಮನ ಸೆಳೆದಿದ್ದಾರೆ.

Advertisement

ಗಲ್ಪೇಟೆ ನಿವಾಸಿ ಬಿಜೆಪಿ ತಾಲೂಕು ಘಟಕದ ಉಪಾಧ್ಯಕ್ಷರೂ ಆಗಿರುವ ರತ್ನಮ್ಮ ತಮ್ಮೊಂದಿಗೆ ಸೊಸೆ, ಮೊಮ್ಮಗಳು ಸೇರಿದಂತೆ ಒಂಬತ್ತು ಮಂದಿಯನ್ನು ಕರೆದೊಯ್ದು ಈ ಹರಕೆ ತೀರಿಸಿದ್ದಾರೆ.

ನರೇಂದ್ರ ಮೋದಿ ಅಭಿಮಾನಿ ಹಾಗೂ ಬಿಜೆಪಿ ಕಾರ್ಯಕರ್ತರಾಗಿರುವ ರತ್ನಮ್ಮ ದೈಹಿಕವಾಗಿ ಹಾಗೂ ವಯೋಸಹಜ ಸಮಸ್ಯೆಗಳಿಂದ ನರಳುತ್ತಿದ್ದರೂ ಲೆಕ್ಕಿಸದೆ ಮೋದಿ ಎರಡನೇ ಬಾರಿ ಗೆದ್ದಿದ್ದಕ್ಕೆ ತಾವಂದುಕೊಂಡಂತೆ ಹರಕೆ ತೀರಿಸಿದ್ದಾರೆ.

2014 ರಲ್ಲೂ ನರೇಂದ್ರ ಮೋದಿ ಮೊಟ್ಟ ಮೊದಲ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದಾಗಲೂ ಇದೇ ರೀತಿಯಲ್ಲಿಯೇ ತಿರುಮಲ ಬೆಟ್ಟ ವನ್ನು ಕಾಲ್ನಡಿಗೆಯಲ್ಲಿ ಹತ್ತಿದ್ದರು. ಈ ಬಾರಿಯೂ ಅದೇ ಸಾಹಸ ಮಾಡಿರುವ ರತ್ನಮ್ಮ, ನರೇಂದ್ರ ಮೋದಿ ದೇಶಕ್ಕಾಗಿ ಕುಟುಂಬದಿಂದಲೇ ದೂರ ಇದ್ದು ಶ್ರಮಿಸುತ್ತಿರುವಾಗ ತಾವು ದೈಹಿಕ ಸಮಸ್ಯೆಗಳ ನಡುವೆ ಬೆಟ್ಟ ಹತ್ತಿದ್ದು ದೊಡ್ಡ ವಿಷಯವೇನಲ್ಲ ಎಂದು ವಿನೀತ ಭಾವ ವ್ಯಕ್ತಪಡಿಸುತ್ತಾರೆ.

ರತ್ನಮ್ಮರೊಂದಿಗೆ ಅವರ ಸೊಸೆ ಮಂಜುಳ, ಮೊಮ್ಮಗಳು ಝಾನ್ಸಿ, ನೆರೆ ಹೊರೆಯ ಮಹಿಳೆಯರಾದ ಕಮಲಮ್ಮ, ಶಾಂತಮ್ಮ, ಶಾರದಮ್ಮ, ಲಲಿತಮ್ಮ, ಸತ್ಯವತಿ, ಚಿನ್ನಮ್ಮ, ಜಯಲಕ್ಷ್ಮಿ ಇತರರು ತಿರುಮಲ ಬೆಟ್ಟಕ್ಕೆ ಪಾದಸೇವೆ ಮಾಡಿ ಬಂದಿದ್ದಾರೆ.

Advertisement

ಇದಲ್ಲದೆ ಬೆಂಗಳೂರಿನ ಸತ್ಯಸಾಯಿ ಆಸ್ಪತ್ರೆಯಲ್ಲಿ ತಿಂಗಳಿಗೊಮ್ಮೆ ಸೇವೆ ಸಲ್ಲಿಸುವ ಸಂಪ್ರದಾಯ ಪಾಲಿಸುತ್ತಾರೆ. ಮಂತ್ರಾಲಯ, ಹರಿದ್ವಾರದಲ್ಲೂ ಸ್ನೇಹಿತರೊಂದಿಗೆ ಸೇವೆ ಸಲ್ಲಿಸಿದ್ದು, ಇವರ ಸೇವೆ ಉಡುಪಿ ಮತ್ತು ವಿಜಯವಾಡ ಕನಕದುರ್ಗ ದೇವಾಲಯಗಳಲ್ಲೂ ತಪ್ಪದೇ ನಡೆಯುತ್ತಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next