Advertisement

ಹಳ್ಳಿಗೆ ನಡೆಯಿರಿ ಅಧಿಕಾರಿಗಳೇ

10:17 AM Jan 10, 2020 | Team Udayavani |

ಉಡುಪಿ: ಕಂದಾಯ ಇಲಾಖೆ ವತಿಯಿಂದ ಜನರ ಮನೆ ಬಾಗಿಲಿಗೆ ತೆರಳಿ ಸೌಲಭ್ಯ ವಿತರಿಸುವ “ಹಳ್ಳಿಗಳಿಗೆ ನಡೆಯಿರಿ ಅಧಿಕಾರಿಗಳೇ’ ಎಂಬ ವಿನೂತನ ಕಾರ್ಯಕ್ರಮವನ್ನು ಶೀಘ್ರದಲ್ಲಿ ಜಾರಿಗೆ ತರಲಾಗುತ್ತದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದರು.

Advertisement

ಜಿಲ್ಲಾಡಳಿತ, ಜಿ.ಪಂ. ಸಹಯೋಗದಲ್ಲಿ ಬುಧವಾರ ಬನ್ನಂಜೆಯಲ್ಲಿ ನಿರ್ಮಾಣಗೊಂಡ ಉಡುಪಿ ತಾಲೂಕಿನ ನೂತನ ಮಿನಿವಿಧಾನ ಸೌಧವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಂದಾಯ ಸೇವೆಗಳನ್ನು ಗ್ರಾಮೀಣ ಜನರಿಗೆ ತಲುಪಿಸಲು ಎಲ್ಲ ಜಿಲ್ಲಾಧಿಕಾರಿಗಳು, ಉಪವಿಭಾಗಾ ಧಿಕಾರಿಗಳು ಮತ್ತು ತಹಶೀಲ್ದಾರ್‌ಗಳು ತಿಂಗಳಲ್ಲಿ ಒಂದು ದಿನ ತಮ್ಮ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಅರ್ಜಿ ಸಲ್ಲಿಕೆ ಮತ್ತು ವಿಲೇವಾರಿಗೆ ಬಾಕಿಯಿರುವ ಅರ್ಜಿದಾರರ ಮನೆ ಬಾಗಿಲಿಗೆ ತೆರಳಿ, ಸಮಸ್ಯೆ ಆಲಿಸಿ, ಸ್ಥಳದÇÉೇ ಬಗೆಹರಿಸುವ ಕಾರ್ಯಕ್ರಮ ಇದಾಗಿದೆ ಎಂದರು. ಶಾಸಕರ ಮನವಿಯಂತೆ ಉಡುಪಿಯಲ್ಲಿ ಕಂದಾಯ ಉಪ ವಿಭಾಗ ತೆರೆಯಲಾಗುತ್ತದೆ ಎಂದರು.

ಶವಸಂಸ್ಕಾರ ಮೊತ್ತ ಬಿಡುಗಡೆ
ಪ್ರತಿ ಗ್ರಾಮದಲ್ಲೂ ಶ್ಮಶಾನ ನಿರ್ಮಾಣಕ್ಕೆ ಜಾಗ ಗುರುತಿಸುವಂತೆ ಸರಕಾರ ಸೂಚಿಸಿದೆ. ರಾಜ್ಯದಲ್ಲಿ ಬಾಕಿ ಇರುವ ಶವಸಂಸ್ಕಾರ ಪರಿಹಾರದ ಮೊತ್ತ 70 ಕೋ.ರೂ. ಗಳನ್ನು ಬಿಡುಗಡೆಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಶವಸ್ಕಾರದ ಮೊತ್ತ 5,000 ರೂ. ಮನೆಯವರ ಕೈ ಸೇರುವಂತೆ ಮಾಡಲಾಗುತ್ತದೆ ಎಂದರು.

5 ಕೋ.ರೂ.
ಘೋಷಣೆಗೆ ಮನವಿ
ಕಂದಾಯ ವಿಭಾಗದ ರಾಜ್ಯ ಪಟ್ಟಿಯಲ್ಲಿ ಉಡುಪಿ ಜಿಲ್ಲೆ ನಂಬರ್‌ ಸ್ಥಾನ ಪಡೆದುಕೊಂಡಿದೆ. ಕಂದಾಯ ಇಲಾಖೆಯ ವತಿಯಿಂದ ನೀಡುವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ವಾರ್ಷಿಕ 5ಕ್ಕಿಂತ ಹೆಚ್ಚು ಬಾರಿ ಪ್ರಥಮ ಸ್ಥಾನ ಪಡೆದುಕೊಂಡ ಜಿಲ್ಲೆಗೆ 5 ಕೋ.ರೂ. ಬಹುಮಾನ ಘೋಷಣೆ ಮಾಡಬೇಕು ಎಂದು ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

Advertisement

ಏಜೆಂಟರನ್ನು ದೂರವಿಡಿ
ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಪಾರದರ್ಶಕತೆ ಉದ್ದೇಶದಿಂದ ಏಜೆಂಟರನ್ನು ದೂರವಿಡಬೇಕು. ಬಡವರಿಗೆ ಮನೆಕಟ್ಟಲು ಅಗತ್ಯವಿರುವ ಕಾನೂನು ಹಾಗೂ ಕೈಗಾರಿಕೆ ಅಭಿವೃದ್ಧಿಗೆ ಬೇಕಾದ ಭೂಮಿಯನ್ನು ಪಡೆಯುವಾಗ ಒಡ್ಡುವ ಷರತ್ತುಗಳನ್ನು ಸರಳಗೊಳಿಸುವಂತೆ ಮನವಿ ಮಾಡಿದರು.

ಉಡುಪಿಗೆ ಮೆಡಿಕಲ್‌ ಕಾಲೇಜು
ಸಬ್‌ ರಿಜಿಸ್ಟ್ರಾರ್‌ ಕಚೇರಿ ಉದ್ಘಾಟಿಸಿದ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕೇಂದ್ರ ಸರಕಾರ ಕೊಡಮಾಡುವ ಮೆಡಿಕಲ್‌ ಕಾಲೇಜು ಈ ಬಜೆಟ್‌ನಲ್ಲಿ ಚಿಕ್ಕಮಗಳೂರಿಗೆ ಬಂದಿದೆ. ಮೆಡಿಕಲ್‌ ಕಾಲೇಜು ನೀಡುವ ಹೆಸರಿನ ಪಟ್ಟಿಯಲ್ಲಿ ಉಡುಪಿಯೂ ಇದೆ. ಇದಕ್ಕೆ ಉಪ್ಪೂರಿನಲ್ಲಿ ಜಾಗವನ್ನು ನೀಡಿ ಕಾಲೇಜಿನ ನಿರ್ಮಾಣಕ್ಕೆ ಜಿಲ್ಲಾಡಳಿತ ಸಹಕಾರ ನೀಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ವಸತಿ ಸಚಿವ ವಿ. ಸೋಮಣ್ಣ, ಶಾಸಕ ಸುನಿಲ್‌ ಕುಮಾರ್‌, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾ.ಪಂ. ಅಧ್ಯಕ್ಷೆ ನೀತಾ ಗುರುರಾಜ್‌ ಪೂಜಾರಿ, ಜಿಲ್ಲಾಧಿಕಾರಿ ಜಿ. ಜಗದೀಶ್‌, ಜಿ.ಪಂ. ಸಿಇಒ ಪ್ರೀತಿ ಗೆಹೊÉàಟ್‌,ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಪವಿಭಾಗಾಧಿಕಾರಿ ರಾಜು ಉಪಸ್ಥಿತರಿದ್ದರು.
ಉಡುಪಿ ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌ ಸ್ವಾಗತಿಸಿದರು, ಶಾಸಕ ಕೆ. ರಘುಪತಿ ಭಟ್‌ ಪ್ರಸ್ತಾವನೆಗೈದರು. ಕಂದಾಯ ಪರಿವೀಕ್ಷಕ ವಿಶ್ವನಾಥ್‌ ವಂದಿಸಿದರು. ಕುದಿ ವಸಂತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಬ್ರಹ್ಮಾವರ: ಮಿನಿವಿಧಾನ
ಸೌಧಕ್ಕೆ ಶಿಲಾನ್ಯಾಸ
ಬ್ರಹ್ಮಾವರ: ಇಲ್ಲಿನ ಮಿನಿವಿಧಾನ ಸೌಧಕ್ಕೆ ಕಂದಾಯ ಸಚಿವ ಆರ್‌. ಅಶೋಕ್‌ ಬುಧವಾರ ಶಿಲಾನ್ಯಾಸ ನೆರವೇರಿಸಿದರು. ಸಚಿವ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಮನೆ ಬಾಗಿಲಿಗೆ ಪಿಂಚಣಿ
ಸಾಮಾಜಿಕ ಭದ್ರತಾ ಯೋಜನೆ ಅಡಿ ವೃದ್ಧಾಪ್ಯ ವೇತನಕ್ಕಾಗಿ ಸರಕಾರಿ ಕಚೇರಿಗಳಿಗೆ ಅಲೆದಾಟ ತಪ್ಪಿಸುವ ನಿಟ್ಟಿನಲ್ಲಿ ಸರಕಾರ ಇದೀಗ ಮನೆ ಬಾಗಿಲಿಗೆ ತೆರಳಿ ಪಿಂಚಣಿ ನೀಡುವ ಕಾರ್ಯಕ್ಕೆ ಸಂಪೂರ್ಣ ತಯಾರಿ ನಡೆಸಿದ್ದು, ಪ್ರಾಯೋಗಿಕ ಯೋಜನೆಯನ್ನು ಉಡುಪಿಯಲ್ಲಿ ಅನುಷ್ಠಾನ ಮಾಡಲಾಗಿದೆ. ಪಿಂಚಣಿಗೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸದೇ, ಸರಕಾರದ ವತಿಯಿಂದಲೇ ಅರ್ಹರಾದವನ್ನು ಗುರುತಿಸಿ ಫ‌ಲಾನುಭವಿಗಳ ಮನೆ ಬಾಗಿಲಿಗೇ ಸೌಲಭ್ಯಗಳನ್ನು ಒದಗಿಸುವ ವಿನೂತನ ಯೋಜನೆಯಾಗಿದೆ.
– ಆರ್‌. ಅಶೋಕ್‌, ಕಂದಾಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next