ಯಾದಗಿರಿ: ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಸೇವಾ ಸಮಿತಿ ಹಾಗೂ ಶ್ರೀ
ವೀರ ಮಾರುತಿ ದೇವಸ್ಥಾನ ಸೇವಾ ಸಮಿತಿ ಆಶ್ರಯದಲ್ಲಿ ಕಲಬುರಗಿ ಶ್ರೀ ಶರಣ ಬಸವೇಶ್ವರ ಜಾತ್ರೆಗೆ ಭಕ್ತರು ಪಾದಯಾತ್ರೆ ಆರಂಭಿಸಿದರು.
ಕಳೆದ 21ವರ್ಷಗಳಿಂದ ಗ್ರಾಮದ ಭಕ್ತರು ಪಾದಯಾತ್ರೆ ನಡೆಸುತ್ತಿದ್ದಾರೆ. ಬೆಳಗ್ಗೆ ಗ್ರಾಮಸ್ಥರು ಮತ್ತು ಪಾದಯಾತ್ರೆ ಹಮ್ಮಿಕೊಂಡ ಭಕ್ತರು ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಹಾಗೂ ಶ್ರೀ ಹನುಮಾನ ದೇವಸ್ಥಾನದಲ್ಲಿ ಕೇದಾರನಾಥ ಸ್ವಾಮಿ ಚರ್ತುಚಾರ್ಯಮಠ ವಿಶೇಷ ಪೂಜೆ ಸಲ್ಲಿಸಿದರು.
ಬಲಕಲ್, ಚಟ್ನಳ್ಳಿ, ಇಬ್ರಾಹಿಂಪುರ, ಹುರಸುಗುಂಡಿಗಿ, ಅಣಬಿ, ಹೊಸೂರ, ಆಂದೋಲಾ, ಗೂಡೂರ, ಕಟ್ಟಿಸಂಗಾವಿ, ಫರತಬಾದ, ನಂದಿಕೂರ, ಕೊಟೂರ ಮೂಲಕ ಭಕ್ತರು ಪಾದಯಾತ್ರೆ ಬೆಳೆಸುವ ಮೂಲಕ ಮಾ. 6ರಂದು ಮಂಗಳವಾರ ಬೆಳಗ್ಗೆ 11:30ಕ್ಕೆ ಕಲಬುರಗಿಯ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ತಲುಪಲಿದ್ದಾರೆ. ಸಂಜೆ ಜರುಗುವ ಮಹಾರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಪಾದಯಾತ್ರೆ ತಂಡದ ನೇತೃತ್ವ ವಹಿಸಿದ ಶಿಕ್ಷಕ ಶರಣಬಸಪ್ಪ ನಾಸಿ ತಿಳಿಸಿದ್ದಾರೆ.
ಪ್ರಮುಖರಾದ ಸತೀಶ ಕುಮಾರ ಹಳಿಮನಿ, ಡಾ|ರಾಜಶೇಖರ ತಡಿಬಿಡಿ, ಶಿಕ್ಷಕ ತಾಯಪ್ಪ ಯಾದಗಿರಿ, ಪ್ರಕಾಶ ಹಳಿಮನಿ, ಪರಮಣ್ಣ ನೀಡಿಗಿ, ಸಂತೋಷಗೌಡ ವಡ್ವಡಿಗಿ, ವಿರುಪಾಕ್ಷರಡ್ಡಿ ಹಿರೇಗೌಡ, ಮಹಿಪಾಲ ರಡ್ಡಿ, ಡಾ| ಮಹ್ಮದ ಮೌಲಾ ರಾಯಚೂರ, ಪರ್ವತಪ್ಪ ನಾಸಿ, ಶರಣಪ್ಪ ಪಸಫೂಲ್, ಮೋನಪ್ಪ ಗೌಂಡಿ, ವಿಶ್ವರಾಧ್ಯ ಹಿರೇಮಠ, ಶೇಖರಡ್ಡಿ ವಡ್ವಡಿಗಿ ಸೇರಿದಂತೆ ಗ್ರಾಮಸ್ಥರು ಪಾದಯಾತ್ರೆ ಭಕ್ತರನ್ನು ಬೀಳ್ಕೊಟ್ಟರು.