Advertisement

ಶಾಂತಿ ಮಾರ್ಗದಲ್ಲಿ ನಡೆದರೆ ಸುಂದರ ಸಮಾಜ ಸೃಷ್ಟಿ

03:45 PM Aug 14, 2017 | |

ಸಿಂಧನೂರು: ಕೆಲ ಯುವಕರು ದಾರಿ ತಪ್ಪುತ್ತಿದ್ದಾರೆ. ಅಧರ್ಮ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಇದರಿಂದ ಸ್ವಸ್ಥ ಸಮಾಜ
ನಿರ್ಮಿಸಲು ಸಾಧ್ಯವಿಲ್ಲ. ಯುವಕರು ಸನ್ಮಾರ್ಗದಲ್ಲಿ ಶಾಂತಿ ಮಂತ್ರ ಪಠಿಸುತ್ತಾ ಸಾಗಿದರೆ ಸುಂದರ ಸಮಾಜದ ನಿರ್ಮಾಣ
ಮಾಡಲು ಸಾಧ್ಯ ಎಂದು ಮಾಜಿ ಶಾಸಕ ವೆಂಕಟರಾವ ನಾಡಗೌಡ ಸಲಹೆ ನೀಡಿದರು. ನಗರದ ಸ್ತ್ರೀಶಕ್ತಿ ಭವನದಲ್ಲಿ ಜಮೀಯತಲ್‌
-ಉಲಮಾ-ಏ-ಹಿಂದ್‌ ತಾಲೂಕು ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ನಮ್ಮ ನಡಿಗೆ ಶಾಂತಿ ಕಡೆಗೆ ಪಾದಯಾತ್ರೆ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯಎಂಬುವುದು ಸ್ವೆಚ್ಛಾರವಲ್ಲ. ಭಾರತ ಒಂದು ದೇವರ ನಾಡಾಗಿದೆ. ಇಲ್ಲಿ ಎಲ್ಲ ಧರ್ಮಿಯರು ಶಾಂತಿ, ಸಮಾಧಾನ, ಭಾವೈಕ್ಯ ಮತ್ತು ಪರಸ್ಪರ ಪ್ರೀತಿಯಿಂದ ಬದುಕುತ್ತಿದ್ದಾರೆ. ಆದರೆ ಕೆಲ ಕಿಡಿಗೇಡಿಗಳು ಮಾಡುವ
ತಪ್ಪಿಗಾಗಿ ಇಡೀ ಸಮುದಾಯವನ್ನು ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ. ಇದು ಸರಿಯಲ್ಲ ಎಂದು ಹೇಳಿದರು. ಮಾನವೀಯ ಮೌಲ್ಯಗಳು ಕುಸಿಯುತ್ತಿರುವುದರಿಂದ ಜನರಲ್ಲಿ ಪರಸ್ಪರ ಅಪನಂಬಿಕೆ ಹೆಚ್ಚುತ್ತಿದೆ. ಇದನ್ನು ಸರಿದಾರಿಗೆ ತರಬೇಕಾದರೆ ಇಂತಹ ಸಂಘಟನೆಗಳು, ಮೌಲ್ವಿಗಳು, ಶರಣರು, ಸಂತರು, ಸಮಾಜ ಸುಧಾರಕರು ಮುಂದುವರಿಯಬೇಕು. ಅಂದಾಗ ಮಾತ್ರ ಯುವಕರಲ್ಲಿ
ನೈತಿಕ ಪ್ರಜ್ಞೆ ಮೂಡಲು ಸಾಧ್ಯ ಎಂದು ಹೇಳಿದರು. ಜಿಪಂ ಸದಸ್ಯ ಎನ್‌. ಶಿವನಗೌಡ ಗೊರೇಬಾಳ ಮಾತನಾಡಿ, ಪ್ರತಿಯೊಬ್ಬರು ಒಳ್ಳೆಯ ಗುಣ ಬೆಳೆಸಿಕೊಳ್ಳಬೇಕು. ದುಡ್ಡಿಗಾಗಿ ತಮ್ಮತನ ಮಾರಿಕೊಳ್ಳಬಾರದು. ಸಮಾಜ ಮುಖೀಯಾಗಿ ಪರಿಸ್ಪರ ಪ್ರೀತಿ ಬೆಳೆಸುವ ಗುಣ ಅಳವಡಿಸಿಕೊಳ್ಳಬೇಕು. ಪ್ರೀತಿಯಿಂದ ಜಗತ್ತನ್ನು ಗೆಲ್ಲಲು ಸಾಧ್ಯ. ಶಾಂತಿ ಮತ್ತು ಪ್ರೀತಿ ಒಂದೆಡೆ ಸೇರಿದಾಗ ಎಲ್ಲರ ಬದುಕು ಸುಂದರವಾಗುತ್ತದೆ ಎಂದು ಹೇಳಿದರು. ಕೆಪಿಸಿಸಿ ಕಾರ್ಯದರ್ಶಿ ಕೆ. ಕರಿಯಪ್ಪ ಮಾತನಾಡಿ, ಜಮೀಯತಲ್‌-ಉಲಮಾ-ಏ-ಹಿಂದ್‌ ಸಂಘಟನೆ ರಾಜ್ಯಾದಾಧ್ಯಂತ ಶಾಂತಿ ಸಂದೇಶ ಬೀರುವ ಕೆಲಸಕ್ಕೆ ಮುಂದಾಗಿರುವುದು ಅಭಿನಾಂದನಾರ್ಹ. ಇದಕ್ಕೆ ಎಲ್ಲ
ಸಮಾಜದ ಮುಖಂಡರು ಜಾತಿ-ಭೇದ ಮರೆತು ಕೈ ಜೋಡಿಸಬೇಕು ಎಂದು ಹೇಳಿದರು. ಸಂಘಟನೆ ಮುಖಂಡ ಮೌಲಾನಾ ಮಹ್ಮದ್‌ ತಾಜುದ್ದೀನ್‌ ಮಾತನಾಡಿ, ಸುಂದರ ಸಮಾಜದ ನಿರ್ಮಾಣಕ್ಕೆ ಎಲ್ಲ ಜಾತಿ ಮುಖಂಡರು ಕೈಜೋಡಿಸಿ ಶಾಂತಿ ಮಂತ್ರದ ಪಠಣೆ
ರೂವಾರಿಗಳಾಗಬೇಕು. ಇದನ್ನು ಯುವ ಸಮುದಾಯ ಮುಂದುವರಿಸಬೇಕು ಎಂದು ಸಲಹೆ ನೀಡಿದರು. ಜಾತಿ ನಿರ್ಮೂಲನಾ ಚಳವಳಿ ರಾಜ್ಯ ಸಂಚಾಲಕ ಎಚ್‌.ಎನ್‌. ಬಡಿಗೇರ, ಖಾಜಿಮಲಿಕ್‌ ವಕೀಲರು, ಕೆ. ಜಿಲಾನಿಪಾಷಾ, ಮೌಲಾನಾ ಮಹಿಬೂಬ್‌ಸಾಬ
ರಾಯಚೂರು, ಜಮೀಯತಲ್‌ ಹಿಂದ್‌ನ ತಾಲೂಕು ಘಟಕದ ಅಧ್ಯಕ್ಷ ಆμàಸ್‌ ಚಾಂದ್‌ಸಾಬ್‌, ಕಾರ್ಯದರ್ಶಿ ಮಹ್ಮದ್‌ಸಾಬ್‌ ಮುಸ್ತಫಾ ಜ್ಯುವೆಲರ್ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next