ಕೋಟೇಶ್ವರ: ಸರಳ ಸಜ್ಜನಿಕೆಯ ಸಾಮಾಜಿಕ ಕಳಕಳಿಯ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಅವರು ಸಾಧನೆಯ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅದಕ್ಕಾಗಿ ಅವರಿಗೆ ರಾಜ್ಯೋತ್ಸವ ಪುರಸ್ಕಾರ ಒಲಿದಿದೆ. ಅವರ ಈ ಕೈಂಕರ್ಯ ಇನ್ನಷ್ಟು ವಿಸ್ತಾರವಾಗಲಿ ಎಂದು ಶ್ರೀ ಸುಬ್ರಹ್ಮಣ್ಯ ಮಠಾ ಧೀಶರಾದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.
ವಕ್ವಾಡಿಯ ಪ್ರವೀಣ ಕುಮಾರ್ ಶೆಟ್ಟಿ ಅವರ ಹುಟ್ಟೂರ ಸಮ್ಮಾನ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ವಕ್ವಾಡಿ ಪ್ರವೀಣ ಕುಮಾರ್ ಶೆಟ್ಟಿ ಹುಟ್ಟೂರ ಸಮ್ಮಾನ ಸಮಿತಿಯ ಅಧ್ಯಕ್ಷ ಬಿ. ಅಪ್ಪಣ್ಣ ಹೆಗಡೆ ಸಭಾ ಧ್ಯಕ್ಷತೆ ವಹಿಸಿದ್ದರು. ಸಚಿವ ಬಿ. ಸುನಿಲ್ ಕುಮಾರ್ ಮಾತನಾಡಿ, ತೆರೆ ಮರೆಯಲ್ಲಿ ಸಾಧನೆ ಮಾಡಿದ ಪ್ರವೀಣ ಕುಮಾರ್ ಅವರ ಶೈಕ್ಷಣಿಕ, ಸಾಮಾ ಜಿಕ, ಧಾರ್ಮಿಕ ಸೇವೆಯನ್ನು ಮನಗಂಡು ಅರ್ಜಿ ಸಲ್ಲಿಸದೆಯೂ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ದೇಶ- ವಿದೇಶ ಗಳಲ್ಲಿ ಅವರು ಸಮಾಜ ಸೇವೆಯಲ್ಲಿ ತೊಡ ಗಿಸಿಕೊಂಡು ಆರ್ಥಿಕ ದುರ್ಬಲರಿಗೆ ಆಶ್ರಯದಾತರಾಗಿದ್ದಾರೆ ಎಂದರು.
ಸಾಧನೆಯಿಂದ ಉತ್ತುಂಗಕ್ಕೆ
ಶಿಕ್ಷಣ ಸಚಿವ ಬಿ.ಸಿ. ನಾಗೇಶ ಅವರು ಆರ್ಥಿಕ ಅಶಕ್ತರಿಗೆ ಧನ ಸಹಾಯ ಹಸ್ತಾಂತರಿಸಿ, ಕನಕಧಾರಾ ಸ್ಮರಣಿಕೆ ಅನಾ ವರಣಗೊಳಿಸಿ ಮಾತನಾಡಿ, ಒಬ್ಬನ ವ್ಯಕ್ತಿತ್ವವನ್ನು ಅಳೆಯಲು ಆತನ ಗುಣ ನಡತೆ ಮಾನದಂಡ. ಸಂಸ್ಕಾರಯುತ ಜೀವನಕ್ರಮದಿಂದ ಉದ್ಯಮದಲ್ಲಿ ಸಾಧನೆ ಮಾಡಿ ಎಲ್ಲ ವರ್ಗದ ಜನರ ಬದುಕಿಗೆ ಆಶ್ರಯ ದಾತರಾದ ಪ್ರವೀಣ ಕುಮಾರ್ ಬದುಕಿನಲ್ಲಿ ಉತ್ತುಂಗಕ್ಕೇರಿದ್ದಾರೆ ಎಂದರು.
ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಪ್ರವೀಣ ಕುಮಾರ್ ಶೆಟ್ಟಿ ಅವರ ಸಾಧನೆಯನ್ನು ಪ್ರಶಂಸಿಸಿ ದರು. ವಿಧಾನಸಭೆಯಲ್ಲಿ ವಿಪಕ್ಷದ ಉಪನಾಯಕರಾಗಿರುವ ಯು.ಟಿ. ಖಾದರ್, ಶಾಸಕರಾದ ಡಾ| ಭರತ್ ಶೆಟ್ಟಿ ವೈ., ಮಂಜುನಾಥ ಭಂಡಾರಿ, ರಘುಪತಿ ಭಟ್, ಸಿ.ಎಸ್. ಪುಟ್ಟರಾಜು, ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಭಟ್, ವಾಲ್ಟರ್ ನಂದಳಿಕೆ, ಉದ್ಯಮಿಗಳಾದ ಕೆ. ನಾಗರಾಜ, ಯುಎಇ ಕನ್ನಡಿಗಾಸ್ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ. ಶ್ರೀನಿವಾಸ್, ಸಂಗೀತ ನಿರ್ದೇಶಕ ಗುರುಕಿರಣ್, ಪಟ್ಲ ಫೌಂಡೇಶನ್ ಸ್ಥಾಪಕ ಪಟ್ಲ ಸತೀಶ ಶೆಟ್ಟಿ, ಚಿತ್ರನಟ ರಿಷಬ್ ಶೆಟ್ಟಿ, ನಟಿ ಹರಿಪ್ರಿಯ, ಡಾ| ಕೃಷ್ಣಪ್ರಸಾದ, ಮಟ್ಟಾರು ರತ್ನಾಕರ ಹೆಗ್ಡೆ, ಉದ್ಯಮಿ ಆನಂದ ಸಿ. ಕುಂದರ್, ಉದ್ಯಮಿ ಜೆ.ಪಿ. ಶೆಟ್ಟಿ ಉಪಸ್ಥಿತರಿದ್ದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಡಾ| ಜಿ. ಶಂಕರ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ತುರ್ತು ಅಗತ್ಯದ ಕಾರಣ ಕಾರ್ಯ ಕ್ರಮದ ಪೂರ್ವದಲ್ಲೇ ಅಭಿನಂದಿಸಿ ನಿರ್ಗಮಿಸಿದ್ದರು.
ಆ್ಯಂಬ್ಯುಲೆನ್ಸ್ ಹಸ್ತಾಂತರ
ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ರೂಪಾಲಿ ಪ್ರವೀಣ್ ಕುಮಾರ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಉಡುಪಿಯ ಪ್ರಸಾದ್ ನೇತ್ರಾಲಯಕ್ಕೆ ಪ್ರವೀಣ ಕುಮಾರ್ ಶೆಟ್ಟಿ ಉಚಿತವಾಗಿ ನೀಡಿದ ಆ್ಯಂಬ್ಯುಲೆನ್ಸ್ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಮಂಗಳೂರಿನ ಶ್ರೀ ರಾಮಕೃಷ್ಣ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ| ಎಂ. ಬಾಲಕೃಷ್ಣ ಶೆಟ್ಟಿ ಶುಭಾ ಶಂಸನೆಗೈದರು. ಶಿಕ್ಷಕರಾದ ವೇಣು ಗೋಪಾಲ ಹೆಗ್ಡೆ ಸ್ವಾಗತಿಸಿ, ಕಾವ್ರಾಡಿ ಬಾಲಚಂದ್ರ ಶೆಟ್ಟಿ ವಂದಿಸಿದರು. ದಿನಕರ ಶೆಟ್ಟಿ ಪ್ರಸ್ತಾವನೆಗೈದರು. ಪತ್ರಕರ್ತ ರಾಜೇಶ ಕೆ.ಸಿ. ಹಾಗೂ ಮಹೇಶ ವಕ್ವಾಡಿ ಕಾರ್ಯಕ್ರಮ ನಿರೂಪಿಸಿದರು.