Advertisement
ಪಟ್ಟಣದ ತಾ.ಪಂ ಸಭಾಂಗಣದಲ್ಲಿ ನಡೆದ ತ್ರೆ„ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಾದ್ಯಂತ ಮುಂಗಾರು ಹಂಗಾಮಿನ ಆರಂಭದ ಒಂದು ತಿಂಗಳು ಮಳೆ ಬಾರದೇ ಬಿತ್ತನೆ ಕುಂಠಿತವಾಗಿದೆ. ರೈತರು ಕಷ್ಟದಲ್ಲಿದ್ದಾರೆ. ಹೀಗಾಗಿ ಕೃಷಿ ಇಲಾಖೆ, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆಯವರು ರೈತರ ಕುರಿತು ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವ ಕೆಲಸ ಮಾಡಬೇಕು ಎಂದರು.
Related Articles
Advertisement
ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜದ ದಾಸ್ತಾನು ಇದ್ದು ರೈತರು ರಿಯಾಯ್ತಿ ದರದಲ್ಲಿ ಪಡೆದುಕೊಳ್ಳುತ್ತಿದ್ದಾರೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಇದುವರೆಗೆ ಒಟ್ಟು ಶೇ. 18.8 ಪ್ರತಿಶತದಷ್ಟು ಮಾತ್ರ ಬಿತ್ತನೆಯಾಗಿದೆ. ರೈತರು ತಮ್ಮ ಬೆಳೆಗೆ ವೀಮೆ ಮಾಡಿಸಲು ಇನ್ನೂ ಕಾಲಾವಕಾಶವಿದ್ದು ಈ ತಿಂಗಳ ಅಂತ್ಯದ ವರೆಗೆ ವಿಮೆ ಮಾಡಿಸಿಕೊಳ್ಳಬಹುದಾಗಿದೆ. ಈ ಕುರಿತು ನಾವು ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.
ಆರೋಗ್ಯ ಇಲಾಖೆ ಅಧಿಕಾರಿ ಡಾ| ರವಿಕಿರಣ ಮಾತನಾಡಿ, ಮತ್ತೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಸಕ್ತ ತಿಂಗಳಲ್ಲಿ ಐದು ಕೇಸ್‌ಗಳು ದಾಖಲಾಗಿದ್ದು, ಈ ಪೈಕಿ ಇಬ್ಬರು ಗುಣಮುಖರಾಗಿ ಮನೆಗೆ ಹೋಗಿದ್ದಾರೆ. ಉಳಿದ ಮೂರು ಜನರಿಗೆ ಅವರವರ ಮನೆಗಳಲ್ಲಿಯೇ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ತಿಳಿಸಿದರು.
ಬಿಇಒ ಮಾರುತಿ ಹುಜರತಿ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ಸಾಲಿನ ಪಠ್ಯಪುಸ್ತಕಗಳು ಬಂದಿದ್ದು ಶಾಲೆಗಳಿಗೆ ವಿತರಿಸಲಾಗುತ್ತಿದೆ. ಇನ್ನೂ ಸಮವಸ್ತ್ರ ಬಂದಿಲ್ಲ, ವಾರದ ಒಳಗಾಗಿ ಸಮವಸ್ತ್ರ ಬರಲಿದ್ದು, ಎಲ್ಲವನ್ನು ಹಂಚಿಕೆ ಮಾಡಲಾಗುತ್ತದೆ ಎಂದರು.
ಇನ್ನುಳಿದಂತೆ ಪಿಆರ್‌ಇ, ಶಿಶು ಅಭಿವೃದ್ಧಿ, ಜೆಸ್ಕಾಂ, ಅರಣ್ಯ, ತೋಟಗಾರಿಕೆ, ಆಯುಷ್ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ತಹಶೀಲ್ದಾರ್ ಸಂಜೀವಕುಮಾರ ದಾಸರ್, ಜಿ.ಪಂ ಯೋಜನಾಧಿಕಾರಿ ಕಿಶೋರಕುಮಾರ ದುಬೆ, ತಾ.ಪಂ ಪ್ರಭಾರಿ ಇಒ ರಮೇಶ ಪಾಟೀಲ, ಕೆ.ಎಂ. ಕೋಟೆ, ಸರ್ವಜ್ಞ, ಹೊನ್ನೇಶ, ನಾಗರಾಜ ಕೆ, ರಾಜೇಂದ್ರ ಮರಬ್, ಮೀನಾಕ್ಷಿ ಪಾಟೀಲ, ಡಾ| ಎಂ.ಬಿ. ಪಾಟೀಲ, ದೇವೀಂದ್ರ ಸಜ್ಜನ್, ಕೆ. ಬಾಲಕೃಷ್ಣ, ಅಶೋಕ ನಾಯ್ಕ, ಅರ್ಜುನಕುಮಾರ ಪಾಟೀಲ, ಜಾಫರ್ ಅನ್ಸಾರಿ, ಶಿವರಾಜ್ ಪಾಟೀಲ ಮತ್ತಿತರರು ಇದ್ದರು.