Advertisement

ಮತ ಜಾಗೃತಿಗೆ ಬೆಳ್ಳಂಬೆಳಗ್ಗೆ ವಾಕಥಾನ್‌ ಜಾಥಾ

02:34 PM Apr 06, 2019 | Team Udayavani |

ಬೆಳಗಾವಿ: ಜಿಲ್ಲಾ ಸ್ವೀಪ್‌ ಸಮಿತಿ ಬೆಳಗಾವಿ ಮತ್ತು ಬೆಳಗಾವಿ ವೊಟ್ಸ್‌ ಶೇ. 100 ಆಶ್ರಯದಲ್ಲಿ ಶುಕ್ರವಾರ ನಗರದ ಸಿಪಿಎಡ್‌ ಮೈದಾನದಿಂದ ವಾಕಥಾನ್‌ ನಡೆಯಿತು.

Advertisement

ಸಿಪಿಎಡ್‌ ಮೈದಾನದಿಂದ ಆರಂಭವಾದ ವಾಕಥಾನ್‌ ವೆಂಗುರ್ಲಾ ರಸ್ತೆ, ಹನುಮಾನ ನಗರ, ಜಾಧವ ನಗರ ಮಾರ್ಗವಾಗಿ ಸಂಚರಿಸಿ ಸಿಪಿಎಡ್‌ ಮೈದಾನದಲ್ಲಿ ಮುಕ್ತಾಯಗೊಂಡಿತು. ವಾಕಥಾನ್‌ ದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಸುಮಾರು 600ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ವಾಕ್‌ಥಾನ್‌ಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರು ಮತ್ತು ಜಿಲ್ಲಾ ಪಂಚಾಯತ ಸಿಇಒ ಡಾ| ರಾಜೇಂದ್ರ ಕೆ.ವಿ., ಮತದಾರರು ಆಮಿಷಕ್ಕೆ ಒಳಗಾಗದೇ ನೈತಿಕ ಮತದಾನ ಮಾಡಲು ಮತ್ತು ಚುನಾವಣಾ
ಅಕ್ರಮದ ಬಗ್ಗೆ ಸಿ ವಿಜಿಲ್‌ ಆ್ಯಪ್‌ನಲ್ಲಿ ಮಾಹಿತಿ ಸಲ್ಲಿಸಬೇಕು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ದೂರು ಸಲ್ಲಿಸಿದ
100 ನಿಮಿಷದೊಳಗಾಗಿ ದೂರಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ದಂಡು ಮಂಡಳಿ ಸಿಇಒ ದಿವ್ಯಾ ಹೊಸೂರ, ಪ್ರೊಬೇಷನರಿ ಐಎಎಸ್‌ ಅಧಿ ಕಾರಿ ಭಂವರಸಿಂಗ್‌ ಮೀನಾ, ಜಿಲ್ಲಾ ಸ್ವೀಪ್‌ ಐಕಾನ್‌ ಮಧು ಮರಾಠೆ ಭಾಗವಹಿಸಿದ್ದರು. ಇವಿಎಂ ಮತ್ತು ವಿವಿಪ್ಯಾಟ್‌ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು. ವಾಕಥಾನ್‌ದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ, ಬೆಳಗಾವಿ ವೊಟ್ಸ್‌ 100% ತಂಡದ ಚೈತನ್ಯ ಕುಲಕರ್ಣಿ, ಸಚಿನಸಬಿ°ಸ್‌, ಮಯೂರ ಶಿವಲಕರ, ಕಿರಣ ನಿಪ್ಪಾಣಿಕರ,ಮುಕುಲ್‌ ಚೌಧರಿ, ಪ್ರವೀಣ ಪವಾರ, ಕೀರ್ತಿ ಟೆಂಬೆ, ಆನಂದ ಬುಕ್ಕೆಬಾಗ, ವಿಕ್ರಾಂತ ಕಾಲಕುಂದ್ರಿಕರ, ಡಾ| ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಅಪ್ಪಾಸಾಹೇಬ ನರಟ್ಟಿ, ಸ್ವೀಪ್‌
ಸಹಾಯಕ ಅಧಿಕಾರಿ ರವಿ ಭಜಂತ್ರಿ,ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಸಿ.ಬಿ. ರಂಗಯ್ಯ, ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ನಾಮದೇವ ಬಿಲಕರ, ತಾಲೂಕು ಯೋಜನಾಧಿಕಾರಿ ಪಿ.ಪಿ. ದೇಶಪಾಂಡೆ, ಡಾ| ಶಶಿಧರ ನಾಡಗೌಡ, ಎ.ಪಿ. ಬಸನಾಳ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next