Advertisement

ಕಣ್ಣುಮುಚ್ಚಿದ ಕಾಂಞಂಗಾಡ್‌ನ‌ ನಿರೀಕ್ಷಣ ಕೆಮರಾ

10:15 PM Jun 14, 2019 | Sriram |

ಬದಿಯಡ್ಕ: ಸುರಕ್ಷೆ ಪಾಲಿಸುವುದ ಕ್ಕೋಸ್ಕರ ಪೊಲೀಸರು ಸ್ಥಾಪಿಸಿದ ಸಿಸಿ ಕೆಮರಾಗಳು ಕಣ್ಣುಮುಚ್ಚಿವೆ. ಹೊಸದುರ್ಗ ಪೊಲೀಸ್‌ ಸ್ಟೇಷನ್‌ ವ್ಯಾಪ್ತಿಯಲ್ಲಿ ನಗರಗಳಲ್ಲೂ ಒಳ ಪ್ರದೇಶಗಳಲ್ಲೂ ಸ್ಥಾಪಿಸಿದ ಸಿಸಿಟಿವಿ ಕೆಮರಾಗಳು ನಿಶ್ಚಲಗೊಂಡು ವರ್ಷಗಳೇ ಕಳೆದರೂ ಸರಿಪಡಿಸಲು ಅಧಿಕಾರಿಗಳಿಗೆ ಇನ್ನೂ ಸಾಧ್ಯವಾಗಲಿಲ್ಲ.

Advertisement

ಶಾಸಕರ ಸಹಾಯ ನಿಧಿಯಿಂದ 10 ಲಕ್ಷ ರೂ. ವ್ಯಯಿಸಿ 39 ಸ್ಥಳಗಳಲ್ಲಿ ಸಿಸಿಟಿವಿ ಕೆಮರಾ ಸ್ಥಾಪಿಸಲಾಗಿದೆ. ಕಾಂಞಂಗಾಡ್‌ ಪರಿಸರ ಪ್ರದೇಶ ಗಳಲ್ಲಿ ಸಂಘರ್ಷ ಉಂಟಾದ ಸಮಯದಲ್ಲಿ ಸಿಸಿಟಿವಿ ಕೆಮರಾ ಅಳವಡಿಸಿದ್ದು. ನಗರದ ಹೊರತಾಗಿ ರಾಷ್ಟ್ರೀಯ ಹೆದ್ದಾರಿ ಅರಂಞಾಡಿ, ಮಾವುಂಗಾಲ್‌, ಮೂಲಕಂಡಂಗಳಲ್ಲಿ ಮಡಿಯನ್‌, ಕಲ್ಲೂರಾವಿ, ಮುರಿಯಾನಾವಿಗಳಲ್ಲೂ ಕೆಮರಾ ಅಳವಡಿಸಿದ್ದು ನಗರದ ಬಸ್‌ ನಿಲ್ದಾಣ ಪರಿಸರದಲ್ಲಿ, ಸ್ಮೃತಿ ಮಂಡಲಂ, ಕೋಟಚ್ಚೇರಿ ಟ್ರಾಫಿಕ್‌ ಸರ್ಕಲ್‌, ಪುದಿಯಕೋಟ, ಅಲಾಮಿಪಳ್ಳಿ ಹೊಸ ಬಸ್‌ ನಿಲ್ದಾಣ ಪರಿಸರದಲ್ಲಿ, ರೈಲ್ವೇ ಸ್ಟೇಷನ್‌ ರೋಡ್‌ಗಳಲ್ಲೂ ಕೆಮರಾ ಅಳವಡಿಸಲಾಗಿದೆ.

ಪೊಲೀಸ್‌ ಕಂಟ್ರೋಲ್‌ ರೂಂಗಳಿಂದ ಚಟು ವಟಿಕೆ ನಿಯಂತ್ರಿಸುವ ವ್ಯವಸ್ಥೆ ಮಾಡಲಾಗಿತ್ತು. ಯೋಜನೆಯ ಪೂರ್ವಾಧಿಕಾರ ಕೆಲ್‌ಟ್ರೋನ್‌ನದ್ದಾಗಿದೆ.

ಆಯಾ ಸಮಯದಲ್ಲಿ ಕೆಮರಾಗಳ ಪರಿಶೀಲನೆ ನಡೆಸದಿರುವ ಕಾರಣ ಕೆಮರಾಗಳು ಕಣ್ಣು ಮುಚ್ಚ ತೊಡಗಿದವು. ನಗರದ ಕೆ.ಎಸ್‌.ಟಿ.ಪಿ. ರಸ್ತೆಯ ಕಾಮಗಾರಿ ಕ್ಯಾಮೆರಾಗಳು ಕಣ್ಣು ಮುಚ್ಚಲು ಒಂದು ಕಾರಣವಾಯಿತು. ಕಾಞಂಗಾಡ್‌ ಹಳೆ ಬಸ್‌ ನಿಲ್ದಾಣ, ಆಲಾಮಿಪಳ್ಳಿ ಹೊಸ ಬಸ್‌ ನಿಲ್ದಾಣ, ಮೀನು ಮಾರುಕಟ್ಟೆ ಎಂಬಿಡೆಗಳಲ್ಲಿ ಮಾತ್ರವೇ ಕೆಮರಾಗಳು ಚಟುವಟಿಕೆ ನಿರತವಾಗಿವೆ. ನಗರಗಳಲ್ಲಿ ಕಳ್ಳತನ, ಸಂಘರ್ಷ, ಗಲಭೆಗಳಾಗುವಾಗ ನೀರೀಕ್ಷಣೆ ಕೆಮರಾಗಳು ಇಲ್ಲದಿರುವುದು ಪೊಲೀಸರನ್ನು ಗೊಂದಲಕ್ಕೀಡು ಮಾಡಿದೆ.

ಕೆಮರಾ ಸಕ್ರಿಯಗೊಳಿಸಿ
ವರ್ಷಗಳ ಹಿಂದೆ ನಗರ ಪರಿಸರದಲ್ಲಿ ಕೆಮರಾಗಳನ್ನು ಸ್ಥಾಪಿಸಿದಾಗ ಸಂಘರ್ಷಗಳು ಕಡಿಮೆಯಾಗಿದ್ದವು. ಆದರೆ ನಗರದಲ್ಲಿ ರಾತ್ರಿ ಸಮಯಗಳಲ್ಲಿ ಮಾದಕ ವಸ್ತು ತಂಡ ಮತ್ತು ಮರಳು ದಂಧೆಕೋರರ ನಡುವೆ ನಿರಂತರವಾಗಿ ಪರಸ್ಪರ ಘರ್ಷಣೆ‌ ನಡೆಯುತ್ತಿತ್ತು. ಆದನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿತ್ತು. ತದನಂತರ ಸಮಸ್ಯೆ ನಿಯಂತ್ರಣಕ್ಕೆ ಬಂದಿತ್ತಾದರೂ ಈಗ ಮತ್ತದೇ ಸಮಸ್ಯೆ ಎದುರಾಗಿದೆ. ಸಂಘರ್ಷಗಳು ನಡೆಯದಂತೆ ಎಚ್ಚರವಹಿಸಲು ನಿಶ್ಚಲಗೊಂಡ ಕೆಮರಾಗಳನ್ನು ಸಕ್ರಿಯಗೊಳಿಸುವಂತೆ ಆಗ್ರಹಿಸಿ ಪೊಲೀಸರು ಮನವಿ ಸಲ್ಲಿಸಿದ್ದಾರೆ.

Advertisement

-ಅಖೀಲೇಶ್‌ ನಗುಮುಗಂ

Advertisement

Udayavani is now on Telegram. Click here to join our channel and stay updated with the latest news.

Next