Advertisement
ತಾಲೂಕಿನ ಸಂಗರಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ಬಸವೇಶ್ವರ ಸಮುದಾಯ ಭವನ ನಿರ್ಮಾಣ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಜಲಾಶಯಗಳಲ್ಲಿ ಕುಡಿಯುವ ನೀರಿಲ್ಲ ದೇವರ ದಯೆಯಿಂದ ಉತ್ತಮ ಮಳೆಯಾಗಲಿ ಎಂಬುದನ್ನು ಪ್ರತಿನಿತ್ಯ ಪ್ರಾರ್ಥಿಸುತ್ತಿದ್ದರು ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯದ ಯಾವುದೇ ಭಾಗದಲ್ಲಿ ರೈತರು ನೆಮ್ಮದಿ ಇಲ್ಲದಂತಾಗಿದೆ ಎಂದರು.
Related Articles
Advertisement
ಸರಕಾರ 50 ಸಾವಿರ ಸಾಲಾ ಮನ್ನ ಮಾಡಿದೆ. ಕಾವೇರಿ ಕಣಿವೆಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಮಳೆಯಾಗಿದೆ. ಸರಕಾರ ಎಲ್ಲರೂ ಸೇರಿ ರೈತರ ಹಿತವನ್ನು ರಕ್ಷಣೆ ಮಾಡಬೇಕು 53 ಟಿಎಂಸಿಯಲ್ಲಿ ಸಂಗ್ರಹವಾಗಿದೆ. 43 ಟಿಎಂಸಿಂ ತಮಿಳುನಾಡಿಗೆ ನೀಡಬೇಕು ಆದರೆ ನಾವು ನೀಡಿರುವುದು 7 ಟಿಎಂಸಿ ಮಾತ್ರ ನ್ಯಾಯಾಲಯದಲ್ಲಿ ವಾದವಿದೆ. ಆದ್ದರಿಂದ ರೈತರ ಹಿತಕಾಯುತ್ತಾ ಜನರಿಗೆ ಕುಡಿಯುವ ನೀರು ಕೊಡುತ್ತಾ ಬಂದಿದೆ.
ಶೀಘ್ರದಲ್ಲೇ ಸರ್ವಪಕ್ಷಗಳ ಸಭೆ ಕರೆದು ಜನರಿಗೆ ಕುಡಿಯುವ ನೀರು ಕೊಡುವುದು ಹೇಗೆ? ಅಂತ್ಯಂತದ ಸಂಕಷ್ಟದ ವರ್ಷ ಆಗಿದ್ದು ಸರಕಾರ ಎಲ್ಲರೊಡನೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದೆ ಎಂದರು. ಶಾಸಕ ಕೆ.ವೆಂಕಟೇಶ್ ಮಾತನಾಡಿ, ವೈಜಾnನಿಕ ಏನೇ ಪ್ರಯತ್ನ ಮಾಡಿದರು ಪ್ರಕೃತಿದತ್ತವಾಗಿ ಬರುವ ಮಳೆಯನ್ನು ನಾವು ನಿಜವಾಗಲು ತರಲು ಸಾಧ್ಯವಿಲ್ಲ. ಭಗವಂತರ ಪ್ರಾರ್ಥನೆ ಹೊರತು ಪಡಿಸಿದರೆ ನಮಗೆ ಯಾವುದೇ ಮಾರ್ಗವಿಲ್ಲ.
ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಬರ ಬರಬಹುದೇನೋ? ಎಂಬ ಹೆದರಿಕೆ ಉಂಟಾಗಿದೆ. ತಾಲೂಕಿನಲ್ಲಿ ಅರ್ಧಭಾಗದಷ್ಟು ಜನರಿಗೆ ಬೆಳೆಯೇ ಆಗಿಲ್ಲ. ಮುಖ್ಯಮಂತ್ರಿಗಳಿಗೆ ಕುಡಿಯುವ ನೀರು ಮತ್ತು ಕೆರೆ ನೀರು ತುಂಬಿಸಲು ಒತ್ತಾಯಿಸಲಾಗಿದೆ ಆ.5ರ ನಂತರ ನಾಲೆಗಳಿಗೆ ನೀಡು ಬಿಡುವ ಭರವಸೆ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ವಿಶೇಷ ಅಧಿಕಾರಿ ಡಾ.ಎಸ್.ಮಧುಕೇಶ್ವರ್ ಮತ್ತು ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಲೋಕನಾಥ್‌ರನ್ನು ಸನ್ಮಾನಿಸಲಾಯಿತು.
ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಮಾಜಿ ಸಂಸದ ಎಚ್.ವಿಶ್ವನಾಥ್, ರಾಜ್ಯ ಜೆಡಿಎಸ್ ಪ್ರಧಾನಕಾರ್ಯದರ್ಶಿ ಪಿ.ಎಂ.ಫಾರೂಕ್, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಮಹದೇವ್, ವಿಶ್ರಾಂತ ಕುಲಪತಿ ಎಸ್.ರಂಗಪ್ಪ, ಗುರುಲಿಂಗ ಜಂಗಮದೇವರ ಮಠದ ಗಾವಡಗೆರೆ ಮಠ ನಟರಾಜ್ ಸ್ವಾಮಿಗಳು, ಜಿಪಂ ಸದಸ್ಯರಾದ ಕೆ.ಎಸ್.ಮಂಜುನಾಥ್, ರುದ್ರಮ್ಮನಾಗಯ್ಯ, ಮಾಜಿ ಜಿಪಂ ಸದಸ್ಯೆ ಮಂಜುಳರಾಜ್,
-ಮೈಸೂರು ನಗರಪಾಲಿಕೆ ಸದಸ್ಯ ಪ್ರಶಾಂತ್‌ಗೌಡ, ತಾಪಂ ಸದಸ್ಯ ಕೀರ್ತಿಕುಮಾರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ನರಸಿಂಹಸ್ವಾಮಿ, ಮುಖಂಡ ಸೋಮಶೇಖರ್, ಬೀರಿಹುಂಡಿ ಬಸವಣ್ಣ, ಮಾಜಿ ಎಪಿಎಂಸಿ ಅಧ್ಯಕ್ಷ ಕೆ.ಹೊಲದಪ್ಪ, ಪುರಾತತ್ವ ಇಲಾಖೆ ನಿವೃತ್ತ ಅಧಿಕಾರಿ ರಾಮಚಂದ್ರಯ್ಯ, ಕೃಷ್ಣಪ್ಪ, ಬಸವರಾಜು, ಪಾಷಾ, ಮಂಚೇಗೌಡ ಇತರರು ಇದ್ದರು.