Advertisement

ವಿವೇಕ ಜಯಂತಿಗೆ ಸ್ವತ್ಛತಾ ಅಭಿಯಾನದ ಮೆರುಗು

01:45 PM Jan 13, 2018 | Team Udayavani |

ಆಲಮೇಲ: ಪ್ರಧಾನಿ ನರೇಂದ್ರ ಮೋದಿ ಸ್ವತ್ಛತೆಗಾಗಿ ಸ್ವತ್ಛ ಭಾರತ ಅಭಿಯಾನದ ಯೋಜನೆಗೆ ಕೋಟ್ಯಂತರ ಹಣ ಮೀಸಲಿಟ್ಟಿದ್ದು ಅಧಿಕಾರಿಗಳು ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೆ ದುರುಪಯೋಗ ಮಾಡಿಕೊಂಡು ಸ್ವತ್ಛತೆ ಹೆಸಲಿರಲ್ಲಿ ಲೋಟಿ ಮಾಡುತ್ತಿದ್ದಾರೆ ಎಂದು ಬಳಗಾನೂರ ಜಿಪಂ ಸದಸ್ಯ ಬಿ.ಆರ್‌. ಎಂಟಮಾನ ಹೇಳಿದರು.

Advertisement

ಶುಕ್ರವಾರ ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ಸ್ವಾಮಿ ವಿವೇಕಾನಂದ ಯುವ ಸೇನೆ ಹಮ್ಮಿಕೊಂಡಿದ್ದ ಪಟ್ಟಣದ ಬಸ್‌ ನಿಲ್ದಾಣ ಸ್ವಚ್ಚ ಅಭಿಯಾನದಲ್ಲಿ ಅವರು ಮಾನತಾಡಿದರು. ಸ್ವತ್ಛತೆ ಬಗ್ಗೆ ಮಹತ್ವ ಯೋಜನೆ ಜಾರಿಗೆ
ತಂದಿರುವ ಪ್ರಧಾನಿ ನರೇಂದ್ರ ಮೋದಿ ಯೋಜನೆ ಜಾರಿಗೆ ಕೋಟ್ಯಂತರ ಹಣ ಮಂಜೂರು ಮಾಡಿದ್ದಾರೆ. ಆ ಹಣದಿಂದಲೆ ಅಧಿಕಾರಿಗಳು ಪ್ರಾಮಾಣಿಕವಾಗಿ ಸದುಪಯೋಗ ಮಾಡಿಕೊಂಡರೆ ಈ ದೇಶ ಸಂಪೂರ್ಣ ಸ್ವತ್ಛ ಭಾರತವಾಗಲಿದೆ ಎಂದು ಹೇಳಿದರು.

ಡಾ| ಸಂದೀಪ ಪಾಟೀಲ ಮಾನತಾಡಿ, ಸ್ವಾಮಿ ವಿವೇಕಾನಂದರ ತತ್ವಾದರ್ಶಯುವಕರು ಅಳವಡಿಸಿಕೊಂಡರೆ ಈ ದೇಶ ಸಮೃದ್ಧ ದೇಶವಾಗಲಿದೆ.  ಯುವಕರು ಇಂತಹ ಸಮಾಜಮುಖ ಕೆಲಸ ಮಾಡಿದರೆ ಬೇರೆಯವರಿಗೆ ಪ್ರೇರಣೆಯಾಗಲಿದೆ. ಸಮಾಜವು ಬದಲಾವಣೆಯಾಗಲಿದೆ. ಮೊದಲು ಯುವಕರು ದುಶ್ಚಟಗಳಿಂದ ದೂರವಿದ್ದು ಉತ್ತಮ
ಸಮಾಜ ನಿರ್ಮಾಣದ ಕೆಲಸದಲ್ಲಿ ಮುಂದಾಗಬೇಕು ಎಂದು ಹೇಳಿದರು.

ನಾಗರಿಕ ವೇದಿಕೆ ಅಧ್ಯಕ್ಷ ರಮೇಶ ಬಂಟನೂರ ಮಾತನಾಡಿ, ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ಹಮ್ಮಿಕೊಂಡ ಸ್ವತ್ಛತಾ ಅಭಿಯಾನ ಒಂದೇ ದಿನಕ್ಕೆ ಸೀಮಿತ ಮಾಡದೆ 15 ದಿನಕ್ಕೊಮ್ಮೆ ಪಟ್ಟಣದ ಪ್ರಮುಖ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಸ್ವತ್ಛತೆ ಮಾಡಿ ಜನರಲ್ಲಿ ಜಾಗೃತಿ ಮಾಡಿ ಎಂದರು. 

ಸ್ವತ್ಛತಾ ಅಭಿಯಾನದಲ್ಲಿ ಬಿಜೆಪಿ ಅಧ್ಯಕ್ಷ ಪಿ.ಟಿ. ಪಾಟೀಲ, ವ್ಯಾಪರಸ್ಥ ಸಂಘದ ಅಧ್ಯಕ್ಷ ದೇವಪ್ಪ ಗುಣಾರಿ, ಪಪಂ ಸದಸ್ಯ ಈರಣ್ಣ ವಡಗೇರಿ, ಸುನೀಲ ಉಪ್ಪಿನ, ನಿವೃತ್ತ ಶಿಕ್ಷಕ ಎಲ್‌.ಎಂ. ಸುಂಬಡ, ಯುವ ಸೇನೆ ಅಧ್ಯಕ್ಷ ಅಜಯಕುಮಾರ ಬಂಟನೂರ, ವಿಶ್ವನಾಥ ಅಮರಗೊಂಡ, ರತು° ಒಣಕುದರಿ, ವಿಶ್ವನಾಥ ಹಿರೇಮಠ, ಅಮೃತ ಕೊಟ್ಟಲಗಿ, ಸುರೇಶ ಭೋರನಾಯಕ, ಆದರ್ಶ ಅಕ್ಕಲಕೋಟ, ವಿನಾಯಕ ಮಠಪತಿ, ಯಲ್ಲಪ್ಪ ಕಟ್ಟಿಮನಿ, ಸುಮಿತ ನಾರಾಯಾಣಕರ, ಶ್ರೀನಿವಾಸ ಅಲೋಣಿ, ಬಾಹುಬಲಿ ಬಸೆ, ಅಶೋಕ ಪರಿಟ, ಶ್ರೀಶೈಲ ಜೋಗೂರ, ವಿನೋದ ಹಿಕ್ಕಣಗುತ್ತಿ, ಆಕಾಶ ವಾವರೆ ಮುಂತಾದರವರು ಬಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next