ಸಂಬಂಧಿಕರ ಮನೆಯ ಗೃಹಪ್ರವೇಶಕ್ಕೆ ಹೋದಾಗ ನನ್ನ ಮನಸ್ಸಿನ ಕದ ತಟ್ಟಿ, ಬಲಗಾಲಿಟ್ಟು ಒಳ ಬಂದವಳು ಅವಳು. ಅವಳನ್ನು ನೋಡಿದ ಕ್ಷಣದಲ್ಲೇ, ಅವಳೆಡೆಗೊಂದು ಸೆಳೆತ ಶುರುವಾಯ್ತು. ಕೆಲವೇ ಗಂಟೆಗಳಲ್ಲಿ ಇಬ್ಬರೂ ಹಳೆಯ ಗೆಳೆಯರಂತೆ ಹರಟತೊಡಗಿದೆವು. ಫಂಕ್ಷನ್ ಮುಗಿಸಿ ಮನೆಗೆ ಹೊರಡುವ ಮುನ್ನ ಮೊಬೈಲ್ ನಂಬರ್ ವಿನಿಮಯವಾಯ್ತು.
ಆಕೆ ಅಚ್ಚ, ಸ್ವತ್ಛ ಮರಾಠಿ ಹುಡುಗಿ. “ಹಮc ತೋಡಾ ತೋಡಾ ಕನ್ನಡಭೀ ಆತಾ ಹೈ’ ಅನ್ನುವವಳಿಗೆ, ಅಲ್ಪ ಸ್ವಲ್ಪ ಕನ್ನಡವೂ ಗೊತ್ತು. ಕನ್ನಡ, ಇಂಗ್ಲಿಷ್, ಮರಾಠಿ, ಮೂರನ್ನೂ ಕೂಡಿಸಿ ಮಾತನಾಡುವುದನ್ನು ಕೇಳಿದರೆ ಉತ್ತರಕರ್ನಾಟಕದ ಗಿರಿಮಿಟ್ ತಿಂದಂತಾಗುತ್ತೆ. ಆಕೆಯ ಭಾಷೆ ಅರ್ಥವಾಗದಿದ್ದರೂ, ಅವಳ ಮನಸ್ಸಿನ ಭಾವನೆ ನನಗೆ ಅರ್ಥವಾಗುತ್ತೆ.
ಸಂಬಂಧಿಕರ ಮನೆಯ ಗೃಹಪ್ರವೇಶಕ್ಕೆ ಹೋದಾಗ ನನ್ನ ಮನಸ್ಸಿನ ಕದ ತಟ್ಟಿ, ಬಲಗಾಲಿಟ್ಟು ಒಳ ಬಂದವಳು ಅವಳು. ಅವಳನ್ನು ನೋಡಿದ ಕ್ಷಣದಲ್ಲೇ, ಅವಳೆಡೆಗೊಂದು ಸೆಳೆತ ಶುರುವಾಯ್ತು. ಕೆಲವೇ ಗಂಟೆಗಳಲ್ಲಿ ಇಬ್ಬರೂ ಹಳೆಯ ಗೆಳೆಯರಂತೆ ಹರಟತೊಡಗಿದೆವು. ಫಂಕ್ಷನ್ ಮುಗಿಸಿ ಮನೆಗೆ ಹೊರಡುವ ಮುನ್ನ ಮೊಬೈಲ್ ನಂಬರ್ ವಿನಿಮಯವಾಯ್ತು. ಮುಂದೇನು ಕೇಳ್ತೀರಾ, ಅವಳ ಮಾತಿನ ಜಾತ್ರೆಗೆ ತಡೆ ಹಾಕುವವರೇ ಇರಲಿಲ್ಲ!
“ಒಂದೇ ರೂಮಿನ ಮನೆ ಸಾಕು. ಜಾಸ್ತಿ ರೂಂ ಇದ್ದರೆ ಕೆಲ್ಸ ಜಾಸ್ತಿ ಆಗಿಬಿಡುತ್ತೆ. ಮತ್ತೆ ನಂಗೆ ನಿಂಗೆ ಕೂತು ಮಾತಾಡೋದಕ್ಕೆ ಟೈಮೇ ಸಿಗಲ್ಲ’, “ಹೇ, ನೀ ನಂಗೆ ಬೇಕು ಕಣೋ, ನೀನಿಲೆª ಬದುಕೋಕೆ ಸಾಧ್ಯಾನೇ ಇಲ್ಲ. ನೀ ಹೇಗೇ ಇರು, ನಾ ನಿನ್ನ ಜೊತೇಲಿ ಖುಷಿ ಖುಷಿಯಾಗಿ ಇರಿ¤àನಿ’, “ನಂಗೆ ಅದು ತಂದೊRಡು, ಇದು ತಂದೊRಡು ಅಂತ ಯಾವತ್ತೂ ಟಾರ್ಚರ್ ಕೊಡಲ್ಲ. ನಿಂಗೆ ಮೂರು ಹೊತ್ತಿನ ಊಟ ಹಾಕೋದಕ್ಕೆ ಆಗ್ಲಿಲ್ಲ ಅಂದ್ರೂ ನೋ ಟೆನÒನ್, ಇದ್ದಿದ್ದರಲ್ಲೇ ಕೈ ತುತ್ತು ಮಾಡಿ ತಿನ್ನಿಸು’, “ನೀನೇನೂ ಚಿಂತೆ ಮಾಡ್ಬೇಡ. ನಮ್ಮ ಮನೆಯವರನ್ನ ಒಪ್ಪಿಸೋ ಜವಾಬ್ದಾರಿ ನಂದು. ನಿನ್ನ ಮನೆಯವರನ್ನೂ ಖಂಡಿತಾ ಪಟಾಯಿಸ್ಕೋತೀನಿ ಆಯ್ತಾ?’, “ಜೀವ° ಯಾವಾಗ್ಲೂ ಇದೇ ರೀತಿ ಇರಲ್ಲ ಕಣೋ, ನೀನೂ ಜೀವನದಲ್ಲಿ ಬೆಳೀತೀಯಾ. ಅದಕ್ಕೆ ನಾನು ನಿನಗೆ ಸಪೋರ್ಟ್ ಮಾಡ್ತೀನಿ’… ಹೀಗೆ ಅವಳು ಧೈರ್ಯ ಹೇಳದ ಮಾತುಗಳಿಲ್ಲ.
ಆದರೆ, ಅವಳು ಜೊತೆಗಿದ್ದಾಳೆಂಬ ಧೈರ್ಯದಲ್ಲಿದ್ದ ನನಗೆ ದೊಡ್ಡದೊಂದು ಶಾಕ್ ಕಾದಿತ್ತು. “ನಾನು ನಾಳೆ ಊರಿಗ್ ಹೋಗ್ತೀನ್. ಮತ್ತ್ ನಿನ್ನ ನೋಡಾಕ ಬರತೇನ್’ ಅಂತ ನಗುನಗುತ್ತಾ, ಗಿರ್ಮಿಟ್ ಭಾಷೆಯಲ್ಲಿ ಟಾಟಾ ಮಾಡಿ ಹೋದವಳು, ಮತ್ತೆ ಮಾತಿಗೇ ಸಿಗಲಿಲ್ಲ. “ಊರಿನ ನಂಬರ್ ಇದು’ ಅಂತ ಅವಳು ಕೊಟ್ಟು ಹೋದ ನಂಬರ್‌ಗೆ ಫೋನ್ ಮಾಡಿದರೆ, “ಐಯಾಮ್ ಸಾರಿ ಕಣೋ’ ಎಂದು ಕಾಲ್ ಕಟ್ ಮಾಡಿದಳು.
ಅವತ್ತು ದೂರ ಹೋದ ಅವಳಿಗಾಗಿ ಕಾಯುತ್ತಾ, ಎರಡು ವರ್ಷಗಳನ್ನು ಕಳೆದಿದ್ದೇನೆ. ಯಾವತ್ತೋ ಒಂದು ದಿನ ಅವಳು ಬಂದೇ ಬರುತ್ತಾಳೆ, ಗಿರ್ಮಿಟ್ ಕನ್ನಡದಲ್ಲಿ “ಲವ್ ಯೂ ಕಣೋ’ ಅನ್ನುತ್ತಾಳೆ ಅಂತ ಕಾದು ಕುಳಿತಿದ್ದೇನೆ. ಅವಳಾಡಿದ ಅರ್ಥವಾಗದ ಕನ್ನಡದ ಮಾತುಗಳು ಇಂದಿಗೂ ಮನಸಲ್ಲಿ ಮನೆ ಮಾಡಿ ಕೂತಿವೆ. ಮನಸಿನ ಮನೆಯನ್ನು ಖಾಲಿ ಮಾಡಿ, ಹಗುರವಾಗಲು ಪ್ರಯತ್ನಿಸಿ ಕೈ ಚೆಲ್ಲಿ ನಿಂತಿದ್ದೇನೆ, ಅವಳು ಬಿಟ್ಟು ಹೋದ ದಾರಿಯ ಮಧ್ಯದಲ್ಲಿ ನಿಂತು…
– ಸದಾನಂದ ಕಟ್ಟಿಮನಿ