Advertisement

ಬಿಜೆಪಿಗೆ “ಪಟ್ಟಣ’ಸೇರಲು ಕಾತರ

10:14 PM Apr 15, 2019 | Team Udayavani |

ದಕ್ಷಿಣ ಕೇರಳ ಭಾಗದ ಅದರಲ್ಲಿಯೂ ಕೇಂದ್ರ ತಿರುವಾಂಕೂರು ಭಾಗದ ಕ್ಷೇತ್ರವೇ ಪತ್ತನಂಂತಿಟ್ಟ. ಸುಲಭವಾಗಿ ಈ ಸ್ಥಳದ ಬಗ್ಗೆ ಹೇಳಿದರೆ ಇತರ ಪ್ರದೇಶದ ಜನರಿಗೆ ಗೊತ್ತಾಗದು. ಶಬರಿಮಲೆ ಎಂದರೆ ಸೂಕ್ಷ್ಮವಾಗಿ ಗೊತ್ತಾದೀತೇನೋ. ಏಕೆಂದರೆ ಕೋಟ್ಯಂತರ ಮಂದಿ ಭಕ್ತರು ಭೇಟಿ ನೀಡುವ ಶಬರಿಮಲೆ ದೇಗುಲ ಪತ್ತನಂಂತಿಟ್ಟ ಜಿಲ್ಲೆ ವ್ಯಾಪ್ತಿಯಲ್ಲಿದೆ. ಅಂದ ಹಾಗೆ ಇದು 2009ರಲ್ಲಿ ರಚನೆಯಾಗಿದೆ. ಕಾಂಗ್ರೆಸ್‌ನ ಆ್ಯಂಟೋ ಆ್ಯಂಟೋನಿಯೋ ಈ ಕ್ಷೇತ್ರದ ಸಂಸದರು. 2009 ಮತ್ತು 2014ರ ಚುನಾವಣೆಯಲ್ಲಿ ಅವರೇ ಗೆದ್ದಿದ್ದಾರೆ. ಎಲ್‌ಡಿಎಫ್ ಮತ್ತು ಯುಡಿಎಫ್ ಪ್ರಬಲ ವಾಗಿರುವ ಕೇರಳದ ಈ ಕ್ಷೇತ್ರ ದಲ್ಲಿ 2014ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿ ಸಿದ್ದ ಪಿಲಿಪೋಸ್‌ ಥಾಮಸ್‌ 3,02,651 ಮತಗಳನ್ನು ಪಡೆದಿ ದ್ದರು ಎನ್ನುವುದು ಗಮನಾರ್ಹ.

Advertisement

ಈ ಬಾರಿ ಪರಿಸ್ಥಿತಿ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಶಬರಿಮಲೆ ದೇಗುಲಕ್ಕೆ ಮಹಿಳೆಯರು ಪ್ರವೇಶ ಮಾಡಬಹುದು ಎಂದು ಸುಪ್ರೀಂಕೋರ್ಟ್‌ ನೀಡಿದ ತೀರ್ಪಿನ ಬಳಿಕ ಉಂಟಾದ ಸ್ಥಿತಿಯ ಲಾಭ ಪಡೆದುಕೊಳ್ಳಲು ಬಿಜೆಪಿ ಮುಂದಾಗಿದೆ. ಅದಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರ ಕೈಗೊಂಡ ಕ್ರಮಗಳನ್ನು ಮುಂದಿಟ್ಟುಕೊಂಡೇ ಬಿಜೆಪಿ ಮತಯಾತನೆ ಮಾಡುತ್ತಿದೆ. ಅದಕ್ಕೆ ಪೂರಕವಾಗಿ ದೇವರೊಲಿದ ರಾಜ್ಯದ ಬಿಜೆಪಿಯ ಪ್ರಮುಖ ನಾಯಕ ಕೆ.ಸುರೇಂದ್ರನ್‌ ಅವರನ್ನು ಅಲ್ಲಿಂದ ಕಣಕ್ಕೆ ಇಳಿಸಲಾಗಿದೆ.

ಇತ್ತೀಚಿನ ಒಂದು ಅಧ್ಯಯನದ ಪ್ರಕಾರ ಎನ್‌ಡಿಎ ಪರವಾಗಿರುವ ಮತಗಳ ಸಂಖ್ಯೆ ಶೇ.2.5ರಷ್ಟು ಏರಿಕೆಯಾಗಿದೆ. ಅಂದರೆ 2009ರಲ್ಲಿ 56,294 ಮತಗಳು ಇದ್ದದ್ದು 2014ರ ವೇಳೆ 1,38,954ಕ್ಕೆ ಏರಿಕೆಯಾಗಿದೆ. 2014ರ ಚುನಾವಣೆಯಲ್ಲಿ ಕೆಲವೊಂದು ಬೂತ್‌ಗಳಲ್ಲಿ ಎನ್‌ಡಿಎ ಮತ್ತು ಯುಪಿಎ ನಡುವೆ ಸಿಕ್ಕ ಮತಗಳ ಅಂತರವೂ ನಿಕಟವಾಗಿಯೇ ಇದೆ.

ಕೋಟ್ಟೆಯಂ ಜಿಲ್ಲೆಯ ಕಾಂಜಿರಪಳ್ಳಿ, ಪೂಂಜಾರ್‌, ಪತ್ತನಂಂತಿಟ್ಟ ಜಿಲ್ಲೆಯ ಅಡೂರ್‌, ತಿರುವಲ್ಲ, ರನ್ನಿ, ಆರಾಮುಲ, ಕೊನ್ನಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡು ಈ ಲೋಕಸಭಾ ಕ್ಷೇತ್ರವಿದೆ.

ಕೇರಳ ಮುಖ್ಯ ಚುನಾವಣಾಧಿಕಾರಿಯ ಕಟ್ಟಪ್ಪಣೆಯ ಹೊರತಾಗಿಯೂ ರಾಜ್ಯಾದ್ಯಂತ ಶಬರಿಮಲೆ ವಿಚಾರ ಸಾರ್ವಜನಿಕ ಸಭೆಗಳಲ್ಲಿ ಎಲ್ಲಾ ರಾಜಕೀಯ ಪಕ್ಷದವರೂ ಪ್ರಸ್ತಾಪ ಮಾಡುತ್ತಿದ್ದಾರೆ. ಈ ಪ್ರಯತ್ನದ ಹೊರತಾಗಿಯೂ ಈ ಕ್ಷೇತ್ರದಲ್ಲಿ ಬಿಜೆಪಿಯ ಜಯ ಕಷ್ಟ. ಆದರೆ ಹಾಲಿ ಸಂಸದರಿಗೆ ಮತ್ತು ಎಲ್‌ಡಿಎಫ್ ಅಭ್ಯರ್ಥಿ ವೀಣಾ ಜಾರ್ಜ್‌ಗೆ ಸುಲಭವಾಗಿ ಲೋಕಸಭೆ ಪ್ರವೇಶಕ್ಕೆ ಅವಕಾಶ ಸಿಗದಂತೆ ಮಾಡುವುದು ಖಚಿತ ಎಂದು ಹೇಳಲಾಗುತ್ತಿದೆ.

Advertisement

ನಾಯರ್‌ ಸರ್ವಿಸ್‌ ಸೊಸೈಟಿ (ಎನ್‌ಎಸ್‌ಎಸ್‌) ಶಬರಿಮಲೆ ವಿಚಾರದಲ್ಲಿ ಬಿಜೆಪಿಗೆ ಬೆಂಬಲ ನೀಡಿದರೂ, ಲೋಕಸಭೆ ಚುನಾವಣೆ ವಿಚಾರದಲ್ಲಿ ಮಾತ್ರ ಬೆಂಬಲ ನೀಡುವುದಿಲ್ಲ ಎಂದು ಹೇಳಲಾಗುತ್ತಿದೆ.

ದೇಶದಲ್ಲಿಯೇ ಅತ್ಯಂತ ಶುದ್ಧ ಗಾಳಿ, ಉತ್ತಮ ರೀತಿಯ ಮಾನವ ಅಭಿವೃದ್ಧಿ ಸೂಚ್ಯಂಕ ದಾಖಲು ಇರುವ ಕ್ಷೇತ್ರದಲ್ಲಿ ಈ ಬಾರಿಯ ಹೋರಾಟ ಕುತೂಹಲಕರ.

2014ರ ಚುನಾವಣೆ‌
ಆ್ಯಂಟೋ ಆ್ಯಂಟನಿ (ಕಾಂಗ್ರೆಸ್‌): 3,58, 842
ಪಿಲಿಪೋಸ್‌ ಥಾಮಸ್‌(ಪಕ್ಷೇತರ): 3,02, 651

Advertisement

Udayavani is now on Telegram. Click here to join our channel and stay updated with the latest news.

Next