ಬೆಂಗಳೂರು: ದೋಸೆಗೆ ಹೆಸರುವಾಸಿಯಾದ ಬೆಂಗಳೂರಿನ ವಿದ್ಯಾರ್ಥಿ ಭವನ್ ನಲ್ಲಿ ಮಸಾಲೆ ದೋಸೆಯಷ್ಟೇ ಫೇಮಸ್ ಅಲ್ಲಿನ ವೈಟರ್ ನ ದೋಸೆ ತರುವ ಶೈಲಿ. ಒಮ್ಮೆಗೆ ಒಂದರ ಮೇಲೊಂದರಂತೆ ಹಲವಾರು ಪ್ಲೇಟ್ ದೋಸೆ ತಂದು ನೀಡುವುದು ವಿದ್ಯಾರ್ಥಿ ಭವನ್ ನ ವಿಶೇಷತೆ. ಇದರ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಸದಾ ಹೊಸತನದ ವಿಡಿಯೋಗಳನ್ನು ಹಂಚಿಕೊಳ್ಳುವ ಮಹೀಂದ್ರಾ ಸಂಸ್ಥೆಯ ಆನಂದ್ ಮಹೀಂದ್ರಾ ಅವರು ವಿದ್ಯಾರ್ಥಿ ಭವನದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಡಿವೋರ್ಸ್ ಪಡೆಯಲು ಕೋರ್ಟ್ ಗೆ ಹೋಗಿ, ಶರಿಯಾ ಕೌನ್ಸಿಲ್ ಗಲ್ಲ..: ಮದ್ರಾಸ್ ಹೈಕೋರ್ಟ್
ವಿಡಿಯೋದಲ್ಲಿ ವೈಟರ್ ದೋಸೆ ಇರುವ ತಟ್ಟೆಗಳನ್ನು ಒಂದರ ಮೇಲೊಂದು ಇಡುತ್ತಾರೆ. ಅವರು ಅಂತಹ 16 ಪ್ಲೇಟ್ ಗಳನ್ನು ಇಟ್ಟು ಅದನ್ನು ಬಡಿಸಲು ಗ್ರಾಹಕರ ಕಡೆಗೆ ಮುಂದುವರಿಯುತ್ತಾರೆ.
“ನಾವು ‘ವೇಟರ್ ಪ್ರೊಡಕ್ಟಿವಿಟಿ’ಯನ್ನು ಒಲಿಂಪಿಕ್ ಕ್ರೀಡೆಯಾಗಿ ಗುರುತಿಸಬೇಕಾಗಿದೆ. ಈ ವ್ಯಕ್ತಿ ಒಲಿಂಪಿಕ್ ನಲ್ಲಿ ಚಿನ್ನ ಗೆಲ್ಲುವ ಸ್ಪರ್ಧಿಯಾಗುತ್ತಾನೆ” ಎಂದು ಅವರು ಬರೆದಿದ್ದಾರೆ.
“ತಟ್ಟೆಗಳನ್ನು ಸಮತೋಲನಕ್ಕಾಗಿ ಮತ್ತು ಅವನ ಕೈಗಳು ಸುಡುವುದನ್ನು ತಡೆಯಲು ಹೇಗೆ ಎಚ್ಚರಿಕೆಯಿಂದ ಇರಿಸಲಾಗುತ್ತದೆ ಎಂಬುದರ ಕುರಿತು ಅವರು ಭೌತಶಾಸ್ತ್ರ ಮತ್ತು ಥರ್ಮೋಡೈನಾಮಿಕ್ಸ್ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿದ್ದಾರೆ” ಎಂದು ಬಳಕೆದಾರರು ಬರೆದಿದ್ದಾರೆ.